100 ಕೋಟಿ ನಷ್ಟವಾದ್ರೂ ಪರವಾಗಿಲ್ಲ, ಗುಟ್ಕಾ ನಿಷೇಧಿಸ್ತೀವಿ! ಪಾನ್ ಮಸಾಲಾ ಕಂಪನಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಖಡಕ್​ ಎಚ್ಚರಿಕೆ! DK Shivakumar on Gutka Ban

100 ಕೋಟಿ ನಷ್ಟವಾದ್ರೂ ಪರವಾಗಿಲ್ಲ, ಜನರ ಆರೋಗ್ಯವೇ ಮುಖ್ಯ: ಸಿಎಂ ಡಿ.ಕೆ. ಶಿವಕುಮಾರ್
100 ಕೋಟಿ ನಷ್ಟವಾದ್ರೂ ಪರವಾಗಿಲ್ಲ, ಜನರ ಆರೋಗ್ಯವೇ ಮುಖ್ಯ: ಸಿಎಂ ಡಿ.ಕೆ. ಶಿವಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಕಂಪ್ಲೀಟ್ ಬ್ಯಾನ್?
  • ಪಾನ್ ಮಸಾಲಾದಲ್ಲಿ ಅಮಲಿನ ಪದಾರ್ಥ ಬೆರೆಸುತ್ತಿರುವ ಆರೋಪ
  • 100 ಕೋಟಿ ನಷ್ಟವಾದ್ರೂ ಪರವಾಗಿಲ್ಲ, ಜನರ ಆರೋಗ್ಯವೇ ಮುಖ್ಯ: ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಪಾನ್​ ಮಸಾಲಾ ಹಾಗೂ ಗುಟ್ಕಾನಲ್ಲಿ ಸ್ವಪ್ಪ ಪ್ರಮಾಣದಲ್ಲಿ ನಶೆ ಅಥವಾ ಅಮಲಿನ ಪದಾರ್ಥವನ್ನು ಬೆರೆಸಲಾಗುತ್ತಿದೆ ಎಂದು ನನಗೆ ಮಾಹಿತಿ ದೊರೆತಿದೆ. ಇದು ನಿಜವೇ ಆಗಿದ್ದರೆ ರಾಜ್ಯದಲ್ಲಿ ಪಾನ್ ಮಸಾಲಾ ಮತ್ತು ಗುಟ್ಕಾ ಮಾರಾಟವನ್ನು ನಿಷೇಧಿಸುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ (DK Shivakumar on Gutka Ban)​ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ (ಜೂ. 28) ಕಂಠೀರವ ಕ್ರೀಡಾಂಗಣದಲ್ಲಿ ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಆಯೋಜಿಸಿದ್ದ ನಶಾ ಮುಕ್ತ ಭಾರತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಖಂಡಿತವಾಗಿ ಸಹಿಸುದಿಲ್ಲ!

ನಾಶೆ ಮುಕ್ತ ಕರ್ನಾಟಕ, ಭಾರತ ಮಾಡುವುದು ನಮ್ಮ ಗುರಿಯಾಗಿದೆ. ಆದರೆ ಇತ್ತೀಚಿಗೆ ಮಾರುಕಟ್ಟೆಗೆ ಬರುತ್ತಿರುವ ಗುಟ್ಕಾ, ಪಾನ್​ ಪಸಾಲಾಗಳಲ್ಲಿ ನಶೆ ಮತ್ತು ಅಮಲಿನ ಪಧಾರ್ಥಗಳನ್ನು ಸೇರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಆರೋಪ ನಿಜವೇ ಆಗಿದ್ದರೆ, ರಾಜ್ಯದಲ್ಲಿ ಗುಟ್ಕಾ, ಪಾನ್​ ಮಸಾಲಾದ ಮಾರಟ ಮತ್ತು ತಯಾರಿಕೆಯನ್ನು ನಿಷೇಧಿಸುತ್ತೆನೆ. ಇದರಿಂದ ಹೆಚ್ಚೆಂದರೆ 100 ಕೋಟಿ ಸರ್ಕಾರಕ್ಕೆ ನಷ್ಟವಾಗಬಹುದು. ಆದರೆ ಸರ್ಕಾರಕ್ಕೆ ದುಡ್ಡಿಗಿಂತ ಜನರ ಅದರಲ್ಲೂ ಯುವಕರ ಆರೋಗ್ಯ ನಮಗೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
ನಾವು ಗುಟ್ಕಾ ಮತ್ತು ಪಾನ್​ ಮಸಾಲಾ ತಯಾರಿಕ ಕಂಪನಿಗಳಿಗೆ ಈ ವೇದಿಕೆಯಿಂದಲೇ ಎಚ್ಚರಿಕೆ ನೀಡುತ್ತಿದ್ದೆನೆ. ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ, ಇಲ್ಲವೇ ನಾನು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net