AAP ಹಿಡಿತ ಭ್ರಷ್ಟನ ಕೈಲಿದೆ: ಪ್ರಶ್ನೆ ಮಾಡಲು ಅವಕಾಶವಿಲ್ಲ; BJP ಸೇರಲು ಅಸಲಿ ಕಾರಣ ತಿಳಿಸಿದ ರಾಘವ್​ ಚಡ್ಡಾ! Raghav Chadha

ಆಮ್​ ಆದ್ಮಿ ಪಕ್ಷ ಬಿಟ್ಟು ಬಿಜೆಪಿ ಸೇರಿದ ರಾಘವ್​ ಚಡ್ಡಾ
ಆಮ್​ ಆದ್ಮಿ ಪಕ್ಷ ಬಿಟ್ಟು ಬಿಜೆಪಿ ಸೇರಿದ ರಾಘವ್​ ಚಡ್ಡಾ
Published on

ಪ್ರಮುಖ ಮುಖ್ಯಾಂಶಗಳು

  • ಆಮ್​ ಆದ್ಮಿ ಪಕ್ಷ ಬಿಟ್ಟು ಬಿಜೆಪಿ ಸೇರಿದ ರಾಘವ್​ ಚಡ್ಡಾ
  • ಎಎಪಿ ಯಿಂದ ರಾಜ್ಯಸಭಾ ಸಂಸದನಾಗಿದ್ದ ಚಡ್ಡಾ
  • ಚಡ್ಡಾ ಜೊತೆ ಇತರೆ ಅರು ಜನ ಬಿಜೆಪಿಗೆ ಜಂಪ್​
  • ಎಎಪಿ ಹಿಡಿತ ಭ್ರಷ್ಟನ ಕೈಲಿದೆ ಎಂದ ರಾಘವ್​
ನವದೆಹಲಿ: ಆಮ್​​ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್​ ಚಡ್ಡಾ (Raghav Chadha) ಎಎಪಿಯನ್ನು ಬಿಟ್ಟು ಭಾರತೀಯ ಜನತಾ ಪಕ್ಷಕ್ಕೆ ಸೇರಿರುವ ಸಂಗತಿ ಎಲ್ಲರಿಗು ತಿಳಿದಿದೆ. ಚಡ್ಡಾ ಜೊತೆಗೆ ಇತರೆ 6 ಜನ ಸಹ ಬಿಜೆಪಿ ಸೇರಿದ್ದಾರೆ. ಇಂದು (ಏ.27) ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಘವ್​ ಚಡ್ಡಾ ತಾವು ಏಕೆ ಆಮ್​ ಆದ್ಮಿ ಪಕ್ಷದಿಂದ ಹೊರಬಂದೆನೆಂದು ತಿಳಿಸಿದ್ದಾರೆ.

ಪಕ್ಷ ಭ್ರಷ್ಟನ ಕೈಲಿದೆ!

ಆಮ್​ ಆದ್ಮಿ ಪಕ್ಷದ ಹಿಡಿತವು ಒಬ್ಬ ಪರಮ ಭ್ರಷ್ಟನ ಹಿಡಿತಲ್ಲಿದೆ. ಆ ಪಕ್ಷದಲ್ಲಿ ನೀವು ಸ್ವತಂತ್ರವಾಗಿ ಏನನ್ನು ಮಾಡಲು ಬಿಡುವುದಿಲ್ಲ. ಅದೊಂದು ವ್ಯಕ್ತಿ ಪ್ರಧಾನ ರಾಜಕೀಯ ಪಕ್ಷವೆಂದು ಚಡ್ಡಾ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಹಾಗೂ ಆಮ್​ ಆದ್ಮಿ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆ ಪಕ್ಷದ ವಾತಾವರಣ ಈಗ ವಿಷಪೂರಿತವಾಗಿದೆ, ನಾನು ರಾಜಕಾರಣದಲ್ಲಿ ಕೆರಿಯರ್​ ಬಿಲ್ಡ್​ ಮಾಡಲು ಬಂದಿಲ್ಲ, ನಾನು ಆ ಪಕ್ಷಕ್ಕಾಗಿ ನನ್ನ ಯೌವನದ 15 ವರ್ಷಗಳನ್ನು ಮುಡಿಪಾಗಿಟ್ಟಿದ್ದು, ಪಕ್ಷವನ್ನು ಕಟ್ಟುವಲ್ಲಿ ಎಷ್ಟು ಶ್ರಮ ವಹಿಸಿದ್ದೆನೆಂದು ಅಲ್ಲಿರುವ ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.

ಪಕ್ಷ ಬಿಡಲು ಇದೇ ಕಾರಣ

ಕಳೆದ ಮೂರು ದಿನಗಳಿಂದ ದೇಶದಾದ್ಯಂತ ನಾನು ಪಕ್ಷ ಬಿಟ್ಟಿರುವುದೇ ಚರ್ಚೆಯಾಗುತ್ತಿರುವ ಕಾರಣ ಈ ವಿಡಿಯೋವನ್ನು ನಾನು ಹಂಚಿಕೊಳ್ಳುತ್ತಿದ್ದೆನೆ. ಆಮ್​ ಅದ್ಮಿ ಪಕ್ಷ ಈಗ ಮೊದಲಿನಂತಿಲ್ಲ, ಸರಿಯಾದ ವ್ಯಕ್ತಿ ತಪ್ಪಾದ ಪಕ್ಷದಲ್ಲಿದಿರಿ ಎಂದು ನನಗೆ ಹಲವಾರು ಜನ ಹೇಳುತ್ತಿದ್ದರು, ಅದ ನನಗೆ ಈಗ ಅರಿವಾಗಿದೆ.
ಆಮ್​ ಆದ್ಮಿ ಪಕ್ಷ ಕಟ್ಟುವಾಗ ಕೇಜ್ರಿವಾಲ್​ ಜೊತೆ ಇದ್ದ ಕೆಲವರಲ್ಲಿ ನಾನು ಒಬ್ಬ. ನಾನು ಈ ಪಕ್ಷದ ಸಂಘಟನೆಗಾಗಿ 15 ವರ್ಷ ನಿಡಿದ್ದೆನೆ. ನಾನು ನನ್ನ ಯೌವನದ 15 ವರ್ಷಗಳಲ್ಲಿ ಈ ಪಕ್ಷಕ್ಕಾಗಿ ಎಷ್ಟು ಶ್ರಮ, ಬೆವರು, ರಕ್ತ ಸುರಿಸಿದ್ದೆನೆಂದು ಪಕ್ಷದ ಹಿರಿಯರಿಗೆ ತಿಳಿದಿದೆ ಎಂದಿದ್ದಾರೆ.

ಬೆಜೆಪಿಯೇ ಏಕೆ?

ನೀವು ಬಿಜೆಪಿ ಪಕ್ಷವನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ ಎಂದು ಬಹುತೇಕರು ಕೇಳುತ್ತಿದ್ದಿರಿ. ನನ್ನನ್ನು ನಾನು ಉತ್ತಮ ವ್ಯಕ್ತಿ ಇಲ್ಲಿವರೆಗೆ ಕೆಟ್ಟ ಪಕ್ಷದಲ್ಲಿದ್ದೆ ಎಂದು ಭಾವಸುತ್ತೆನೆ. ಹಾಗೆಯೇ ಬಿಜೆಪಿ ಪಕ್ಷವನ್ನು ಸೇರುವುದು ನನ್ನ ಒಬ್ಬನದೇ ಅನಿಸಿಕೆ ಆಗಿರಲಿಲ್ಲ. ನನ್ನ ಜೊತೆಗೆ ಬಂದಿರುವ ಇತರ ಆರು ಜನರ ಅಭಿಪ್ರಾಯ ಸಹ ಅದೇ ಆಗಿತ್ತು. ಒಬ್ಬ ವ್ಯಕ್ತಿ ತಪ್ಪಾಗಬಹುದು, ಇಬ್ಬರು ತಪ್ಪಾಗಬಹುದು, ಆದರೆ ಇಲ್ಲಿ ನಮ್ಮ ಏಳು ಜನರಿಗೂ ಬಿಜೆಪಿ ಪಕ್ಷ ಸೂಕ್ತವೆನಿಸಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದೆವೆ ಎಂದು ಹೇಳಿದ್ದಾರೆ.

ಬಿಜೆಪಿಯಿಂದ ಯಾವುದೇ ಒತ್ತಡವಿರಲಿಲ್ಲ

ನಾವು ಬಿಜೆಪಿ ಸೇರಿದ ನಂತರ ಹಲವರು ಭಾಜಪಾದಿಂದ ಇವರಿಗೆ ಬೆದರಿಕೆ ಬಂದಿದೆ, ಅದಕ್ಕೆ ಎಎಪಿಯನ್ನು ಬಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳಾಗಿದೆ. ನಮಗೆ ಬಿಜೆಪಿಯಿಂದ ಇದುವರೆಗೆ ಯಾವುದೇ ಬೆದರಿಕೆ ಬಂದಿಲ್ಲ, ನಾನು ಬಿಜೆಪಿ ಸೇರಿದ ನಂತರವು ಸರ್ಕಾರಕ್ಕೆ ಪ್ರಶ್ನೆ ಕೇಳುವುದನ್ನು ಬಿಡುವುದಿಲ್ಲ ಎಂದು ರಾಘವ್​ ಚಡ್ಡಾ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net