ಜಾರ್ಖಂಡ್​ನಲ್ಲಿ ಘೋರ ದುರಂತ: ರಸ್ತೆ ಬದಿ ಪಾನಿಪುರಿ ತಿಂದ 6 ವರ್ಷದ ಬಾಲಕ ಸಾವು; 18 ಮಂದಿ ಆಸ್ಪತ್ರೆಗೆ ದಾಖಲು! Panipuri

ಜಾರ್ಖಂಡ್‌ನಲ್ಲಿ ಪಾನಿಪುರಿ ತಿಂದು ಅಸುನಿಗಿದ 6 ವರ್ಷದ ಹುಡುಗ
ಜಾರ್ಖಂಡ್‌ನಲ್ಲಿ ಪಾನಿಪುರಿ ತಿಂದು ಅಸುನಿಗಿದ 6 ವರ್ಷದ ಹುಡುಗ
Published on

ಪ್ರಮುಖ ಮುಖ್ಯಾಂಶಗಳು

  • ಜಾರ್ಖಂಡ್‌ನಲ್ಲಿ ಪಾನಿಪುರಿ ತಿಂದು ಅಸುನಿಗಿದ 6 ವರ್ಷದ ಹುಡುಗ
  • ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 18 ಜನ
  • ಪಾಲಿಪುರಿ ಅಂಗಡಿ ಮಾಲೀಕ ಪರಾರಿ; ಪೊಲೀಸರಿಂದ ಮುಂದುವರಿದ ಶೋಧ ಕಾರ್ಯ
ಜಾರ್ಖಂಡ್​: ರಸ್ತೆ ಬದಿ ಮಾರಾಟ ಮಾಡುವ ಪಾನಿಪುರಿ (Panipuri) ತಿಂದ ಪರಿಣಾಮ ಆರು ವರ್ಷದ ಹುಡುಗನೊಬ್ಬ ಸಾವನ್ನಪ್ಪಿದ್ದು, ಇತರೆ 18 ಜನ ಆಸ್ಪತ್ರೆ ಪಾಲಾಗಿರುವ ಘಟನೆ ಜಾರ್ಖಂಡ್ ರಾಜ್ಯದ ಗಿರಿಧನ್​ನಲ್ಲಿ ನಡೆದಿದೆ. ಮಾಹಿತಿ ಪ್ರಕಾರ, ಪಾನಿಪುರಿ ತಿಂದ ಜನರಲ್ಲಿ ಹೊಟ್ಟೆ ನೋವು, ಜಲಬಾಧೆ, ಡೈರಿಯಾ, ವಾಂತಿ-ಬೇಧಿ ಮೊದಲಾದ ಕಾಯಿಲೆಗಳು ಕಾಣಿಸಿಕೊಂಡ ಪರಿಣಾಮ ಹತ್ತಿರದ ಸದಾರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮಸ್ಥರು ಹೇಳುವಂತೆ ಆಸ್ಪತ್ರೆಗೆ ದಾಖಲಾಗಿರುವ ಬಹುತೇಕರು ಶನಿವಾರ (ಏ.25) ರಾತ್ರಿ ಒಂದೇ ಅಂಗಡಿಯಲ್ಲಿ ಪಾನಿಪುರಿ ತಿಂದಿದ್ದಾರೆ. ನಂತರ ಇವರೆಲ್ಲರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಭಾನುವಾರ (ಏ.26) ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳುತ್ತಿದ್ದಾರೆ. ಹೀಗೆ ದಾಖಲಾದವರಲ್ಲಿ 6 ವರ್ಷದ ಹುಡುಗನೊಬ್ಬ ಪ್ರಾಣ ಕಳರೆದುಕೊಂಡಿದ್ದು, ಕುಟುಂಬಸ್ಥರ ಅಳಲು ಮುಗಿಲು ಮುಟ್ಟಿದೆ.
ಚಿಕಿತ್ಸೆ ಮುಂದುವರಿದಿದೆ
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸದಾರ್​ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಬಚಾಚಾ ಪ್ರಸಾದ್​ ಸಿಂಗ್​, ನಿನ್ನೆ (ಭಾನುವಾರ) ದಾಖಲಾದವರಲ್ಲಿ ಒಬ್ಬ ಹುಡುಗ ಮೃತ ಪಟ್ಟಿದ್ದಾನೆ. ಉಳಿದ 18 ಜನರು ಚೇತರಿಸಿ ಕೊಳ್ಳುತ್ತಿದ್ದು, ಇವರೆಲ್ಲರು ಫುಡ್​ ಪಾಯಿಸನ್​ನಿಂದ ಬಳಲುತ್ತಿರುವುದು ಮೆಲ್ನೋಟಕ್ಕೆ ಕಂಡು ಬರುತ್ತಿದೆ. ನಾನು ಪ್ರತಿಯೊಬ್ಬ ರೋಗಿಯ ಮೇಲೆ ನಿಗಾವಹಿಸಿದ್ದೆವೆ ಎಂದು ಸಿಂಗ್​ ತಿಳಿಸಿದ್ದಾರೆ.

ಪೊಲೀಸರಿಂದ ಮುಂದುವರೆದ ತನಿಖೆ

ಒಂದು ಅಂಗಡಿಯಲ್ಲಿ ಪಾನಿಪುರಿ ತಿಂದು ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ತಿಳಿದ ತರುವಾಯ, ಪೊಲೀಸರು ಸ್ವಯಂ ದೂರನ್ನು ದಾಖಲಿಸಿಕೊಂಡಿದ್ದಾರೆ. ಅಂತೆಯೇ ಹುಡುಗನ ಸಾವಿನ ನಂತರ ಪ್ರಕರಣ ಇನ್ನಷ್ಟು ಗಂಭೀರವಾಗಿದ್ದು, ಪಾನಿಪುರಿ ಅಂಗಡಿ ಮಾಲೀಕ ಪಾಲ್ಮೊ ಎಂಬಾತ ಊರಿನಿಂದ ಓಡಿಹೋಗಿದ್ದು, ಅವನ ಹುಡುಕಾಟ ಮುಂದುವರೆದಿದೆ. ಕೆಲವೇ ದಿನಗಳಲ್ಲಿ ಅವನನ್ನು ಹುಡುಕಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್​ ಮೂಲಗಳು ತಿಳಿಸಿವೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net