ಹಾಲು ನೀಡದ ತಾಯಿ: ಹಸಿವಿನಿಂದ ಅಲೆದಾಡುತ್ತಿದ್ದ ಆಡಿನ ಮರಿಗಳಿಗೆ ಹಾಲುಣಿಸಿ ಮಾತೃಪ್ರೇಮ ಮೆರೆದ ಹಸು! Cow Gives Milk To Lambs

ತಿರುನೆಲ್ವೇಲಿ (ನೆಲ್ಲೈ) ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ನಡೆದ ಈ ಮಾನವೀಯ ಹಾಗೂ ಭಾವನಾತ್ಮಕ ಘಟನೆಯು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು, ಸಾರ್ವಜನಿಕರ ಮನ ಗೆಲ್ಲುತ್ತಿದೆ.
Cow Gives Milk To Lambs
ಹಸಿವಿನಿಂದ ಅಲೆದಾಡುತ್ತಿದ್ದ ಆಡಿನ ಮರಿಗಳಿಗೆ ಹಾಲುಣಿಸಿ ಮಾತೃಪ್ರೇಮ ಮೆರೆದ ಹಸು!
Published on: 

ಚೆನ್ನೈ: ತಾಯ್ತನ ಎನ್ನುವುದು ಕೇವಲ ತನ್ನ ಸ್ವಂತ ರಕ್ತದ ಸಂಬಂಧಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಜಗತ್ತಿನ ಸಕಲ ಜೀವರಾಶಿಗಳನ್ನೂ ತನ್ನ ಒಲವಿನಿಂದ ತಬ್ಬಿಕೊಳ್ಳುವ ಒಂದು ಅದ್ಭುತ ಶಕ್ತಿ ಎಂಬುದಕ್ಕೆ ಈ ವಿಸ್ಮಯಕಾರಿ ಘಟನೆಯೇ ಜೀವಂತ ಸಾಕ್ಷಿ! ಜನ್ಮ ನೀಡಿದ ತಾಯಿಯೇ ಹಾಲು ನೀಡಲು ಹಿಂಜರಿಯುವ ಈ ಕಾಲದಲ್ಲಿ, ಮರಿ ಆಡುಗಳಿಗೆ ತನ್ನ ಸ್ವಂತ ಕರುವಿನಂತೆಯೇ ವಾತ್ಸಲ್ಯದಿಂದ ಹಾಲು ಉಡಿಸುವ ಮೂಲಕ ಹಸುವೊಂದು ( Cow Gives Milk To Lambs ) ಅಪರೂಪದ ಮಾತೃಪ್ರೇಮ ಮೆರೆದಿದೆ.

ತಿರುನೆಲ್ವೇಲಿ (ನೆಲ್ಲೈ) ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ನಡೆದ ಈ ಮಾನವೀಯ ಹಾಗೂ ಭಾವನಾತ್ಮಕ ಘಟನೆಯು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು, ಸಾರ್ವಜನಿಕರ ಮನ ಗೆಲ್ಲುತ್ತಿದೆ.

Also Read
ಬಂಧು-ಬಗಳ ಯಾರೂ ಇಲ್ಲದ್ದಕ್ಕೆ ಮದ್ವೆಗೆ ಅಪರಿಚಿತರನ್ನೇ ಆಹ್ವಾನಿಸಿದ ಯುವಕ: ಗಿಫ್ಟ್​ ಆಗಿ ಬಂತು ಕೋಟಿ ಬೆಲೆಯ ಕಾರು! Maybach Car
Cow Gives Milk To Lambs

ತಮಿಳುನಾಡಿನ ನೆಲ್ಲೈ (ತಿರುನೆಲ್ವೇಲಿ) ಜಿಲ್ಲೆಯ ಎರ್ವಾಡಿ ಸಮೀಪದ ಕೊತೈಸೇರಿ ಗ್ರಾಮದ ನಿವಾಸಿ, 58 ವರ್ಷದ ರೈತ ಚಂದನಮ್ ಅವರು ಸಾಕುಪ್ರಾಣಿಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ತಮ್ಮ ಕೃಷಿ ಕಾಯಕದ ಜತೆಗೆ ಕೊಟ್ಟಿಗೆಯಲ್ಲಿ ಆಡುಗಳು ಹಾಗೂ ಹಸುಗಳನ್ನು ಅತ್ಯಂತ ಪ್ರೀತಿಯಿಂದ ಪೋಷಿಸುತ್ತಿರುವ ಇವರ ಮನೆಯಲ್ಲಿ ಇತ್ತೀಚೆಗೆ ಹಸುವೊಂದು ಕರುವಿಗೆ ಜನ್ಮ ನೀಡಿತ್ತು. ಅದೇ ಸಮಯಕ್ಕೆ ಸರಿಯಾಗಿ ಇವರ ಮನೆಯಲ್ಲಿದ್ದ ಆಡೊಂದು ಸಹ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿತ್ತು.

ಸಾಮಾನ್ಯವಾಗಿ ಹುಟ್ಟಿದ ತಕ್ಷಣವೇ ಪ್ರತಿಯೊಂದು ಜೀವಿಗೂ ತಾಯಿಯ ಹಾಲೇ ಪ್ರಥಮ ಆಹಾರ. ಆದರೆ, ವಿಚಿತ್ರವೆಂದರೆ ಜನ್ಮ ನೀಡಿದ ತಾಯಿ ಆಡು ಕೆಲವೊಮ್ಮೆ ತನ್ನ ಮರಿಗಳಿಗೆ ಹಾಲು ನೀಡಲು ನಿರಾಕರಿಸುತ್ತಿತ್ತು. ಹಸಿವಿನಿಂದ ಕಂಗಾಲಾಗುತ್ತಿದ್ದ ಆ ಮುದ್ದಾದ ಮರಿಗಳು ಹಾಲಿಗಾಗಿ ಅತ್ತಿತ್ತ ಅಲೆಯತೊಡಗಿದವು. ತಾಯಿ ಆಡಿನಿಂದ ಹಾಲು ಸಿಗದಿದ್ದಾಗ, ಮರಿ ಆಡುಗಳು ಕೊಟ್ಟಿಗೆಯಲ್ಲೇ ಇದ್ದ ಹಸುವಿನ ಬಳಿಗೆ ತೆರಳಲು ಪ್ರಾರಂಭಿಸಿದವು. ತಮ್ಮ ಸ್ವಂತ ತಾಯಿಯಂತೆ ಹಸುವಿನ ಕೆಚ್ಚಲಿನ ಬಳಿ ಸಾಗಿ ಹಾಲು ಕುಡಿಯಲು ಪ್ರಯತ್ನಿಸಿದವು.

ಸಾಮಾನ್ಯವಾಗಿ ಹಸುಗಳು ತನ್ನ ಸ್ವಂತ ಕರುವನ್ನು ಹೊರತುಪಡಿಸಿ ಇತರ ಯಾವುದೇ ಪ್ರಾಣಿಗಳನ್ನು ತಮ್ಮ ಬಳಿಗೆ ಬಿಟ್ಟುಕೊಳ್ಳುವುದಿಲ್ಲ ಅಥವಾ ಹಾಲು ನೀಡಲು ಬಿಡುವುದಿಲ್ಲ. ಆದರೆ ಈ ಹಸು ಮಾತ್ರ ಸಂಪೂರ್ಣವಾಗಿ ಭಿನ್ನವಾಗಿ ನಡೆದುಕೊಂಡಿದೆ. ತಾಯಿಯ ಹಾಲಿಗಾಗಿ ತಡಕಾಡುತ್ತಿದ್ದ ಮರಿ ಆಡುಗಳ ಹಸಿವನ್ನು ಅರ್ಥೈಸಿಕೊಂಡಂತೆ, ಯಾವುದೇ ಹಿಂಜರಿಕೆಯಿಲ್ಲದೆ ಆ ಮರಿಗಳಿಗೆ ಹಾಲು ಕುಡಿಯಲು ಅವಕಾಶ ಮಾಡಿಕೊಟ್ಟಿದೆ. ಪ್ರತಿದಿನವೂ ಈ ಮರಿ ಆಡುಗಳು ಬಂದು ಹಸುವಿನ ಹಾಲು ಕುಡಿಯುತ್ತಿದ್ದು, ಹಸು ಕೂಡ ತನ್ನ ಸ್ವಂತ ಕರುವಿಗೆ ನೀಡುವಷ್ಟೇ ವಾತ್ಸಲ್ಯದಿಂದ ಅವುಗಳಿಗೆ ಹಾಲುಣಿಸುತ್ತಿದೆ.

Also Read
ಅರೇಬಿಯನ್ ಸಮುದ್ರದಲ್ಲಿ ಪತ್ತೆಯಾಯ್ತು ಹೊಸ ಪ್ರಭೇದದ ಮೀನು: ಮುಟ್ಟಿದ್ರೆ ಯಮನ ಪಾದ ಸೇರೋದು ಫಿಕ್ಸ್​! ಯಾಕಿಷ್ಟು ಡೇಂಜರ್​? New Species Of Fish
Cow Gives Milk To Lambs

ಮರಿ ಆಡುಗಳು ಹಸುವಿನ ಬಳಿ ತೆರಳಿ ಕರು ನೀಡುವಂತೆಯೇ ಹಾಲು ಕುಡಿಯುವ ಈ ಅಪರೂಪದ ದೃಶ್ಯವನ್ನು ಕಂಡ ಕೊತೈಸೇರಿ ಗ್ರಾಮದ ಜನರು ಹಾಗೂ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಪ್ರಾಣಿಗಳಲ್ಲಿ ಕಂಡುಬರುವ ಇಂತಹ ಪರಸ್ಪರ ಪ್ರೀತಿ, ವಾತ್ಸಲ್ಯ ಮತ್ತು ಮಾತೃಪ್ರೇಮದ ದೃಶ್ಯಗಳನ್ನು ಜನರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, 'ತಾಯ್ತನಕ್ಕೆ ಯಾವುದೇ ಗಡಿಗಳಿಲ್ಲ, ಪ್ರಾಣಿಗಳಿಂದ ಮಾನವಕುಲ ಕಲಿಯಬೇಕಾದದ್ದು ಬಹಳಷ್ಟಿದೆ' ಎಂದು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ, (ಏಜೆನ್ಸೀಸ್​).