ಬಂಧು-ಬಗಳ ಯಾರೂ ಇಲ್ಲದ್ದಕ್ಕೆ ಮದ್ವೆಗೆ ಅಪರಿಚಿತರನ್ನೇ ಆಹ್ವಾನಿಸಿದ ಯುವಕ: ಗಿಫ್ಟ್​ ಆಗಿ ಬಂತು ಕೋಟಿ ಬೆಲೆಯ ಕಾರು! Maybach Car

Maybach Car
ಬಂಧು-ಬಗಳ ಯಾರೂ ಇಲ್ಲದ್ದಕ್ಕೆ ಮದ್ವೆಗೆ ಅಪರಿಚಿತರನ್ನೇ ಆಹ್ವಾನಿಸಿದ ಯುವಕ: ಗಿಫ್ಟ್​ ಆಗಿ ಬಂತು ಕೋಟಿ ಬೆಲೆಯ ಕಾರು!
Published on: 

Maybach Car : ಸ್ವಂತ ಬಂಧು-ಬಳಗವೇ ಇಲ್ಲದ ಕಾರಣಕ್ಕೆ ಯುವಕನೊಬ್ಬ ತನ್ನ ಮದುವೆಗೆ ಸಂಪೂರ್ಣ ಅಪರಿಚಿತರನ್ನು ಆಹ್ವಾನಿಸಿದ ಅಪರೂಪದ ಹಾಗೂ ಭಾವುಕ ಘಟನೆಯೊಂದು ಚೀನಾದಲ್ಲಿ ನಡೆದಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು, ತಾಯಿಯೂ ಮರುಮದುವೆಯಾಗಿ ದೂರವಾದ ಬಳಿಕ ಅಣ್ಣನ ಆಸರೆಯಲ್ಲಿ ಬೆಳೆದ ಈ ಯುವಕ, ಅನೇಕ ಕಷ್ಟ-ಕಾರ್ಪಣ್ಯಗಳ ನಡುವೆಯೂ ಕಷ್ಟಪಟ್ಟು ದುಡಿದು ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ಮದುವೆಗೆ ಬೇಕಾದ ಹಣವನ್ನೂ ಆತನೇ ಸಂಪಾದಿಸಿದ್ದರೂ, ಮದುವೆಯ ಶುಭಸಮಾರಂಭದಲ್ಲಿ ಸಂಭ್ರಮಿಸಲು ಆಪ್ತ ಸಂಬಂಧಿಕರಿಲ್ಲವಲ್ಲ ಎಂಬ ಕೊರಗು ಆತನನ್ನು ತೀವ್ರವಾಗಿ ಕಾಡುತ್ತಿತ್ತು.

Also Read
29 ವರ್ಷಗಳ ನಂತರ ಕರ್ಮಫಲದಾತ ಶನಿಯ ಸಂಚಾರ: ಈ 4 ರಾಶಿಗಳಿಗೆ ಶುರುವಾಗಲಿದೆ ಸುವರ್ಣ ಯುಗ..! Astrology
Maybach Car

ತನ್ನ ಮದುವೆ ಖಾಲಿಯಾಗಿ ಕಾಣಬಾರದು ಎಂಬ ಉದ್ದೇಶದಿಂದ ಆ ಯುವಕ ಸಾಮಾಜಿಕ ಜಾಲತಾಣದಲ್ಲಿ ಒಂದು ಭಾವುಕ ವಿಡಿಯೋ ಹಂಚಿಕೊಂಡು, "ನನ್ನ ಮದುವೆಗೆ ಬಂದು ನಮಗೆ ಹಾರೈಸಿ" ಎಂದು ಅಪರಿಚಿತರಿಗೆ ಆತ್ಮೀಯ ಆಹ್ವಾನ ನೀಡಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಹೃದಯ ತಟ್ಟಿತು.

ಮದುವೆಯ ದಿನ ನೆರೆದ ದೃಶ್ಯಗಳು ಯುವಕ ಮತ್ತು ಆತನ ಕುಟುಂಬವನ್ನು ಸಂಪೂರ್ಣವಾಗಿ ಬೆರಗುಗೊಳಿಸಿದವು. ಆಹ್ವಾನಿತರಲ್ಲಿ ಹೆಚ್ಚಿನವರು ಖುದ್ದಾಗಿ ಬರಲಾಗದಿದ್ದರೂ, ಅವರು ಕಳುಹಿಸಿಕೊಟ್ಟ ಅಚ್ಚರಿಯ ಉಡುಗೊರೆಗಳು ಹಾಗೂ ತೋರಿದ ಪ್ರೀತಿ ಇಡೀ ಮದುವೆ ಸಮಾರಂಭದ ಚಿತ್ರಣವನ್ನೇ ಬದಲಾಯಿಸಿಬಿಟ್ಟಿತು.

ಅಪರಿಚಿತ ವ್ಯಕ್ತಿಗಳು ಮದುವೆಗೆ ಬೇಕಾದ ಪ್ರತಿಯೊಂದು ವಸ್ತುವನ್ನೂ ಉಡುಗೊರೆಯಾಗಿ ತಲುಪಿಸಿದರು. ಮದುವೆಯ ಅಡುಗೆಯನ್ನು ಉಚಿತವಾಗಿ ಸಿದ್ಧಪಡಿಸಿಕೊಡಲು ಪ್ರಸಿದ್ಧ ಬಾಣಸಿಗರೇ ಮುಂದೆ ಬಂದರು. ಇನ್ನು ಕೆಲವರು ಉಚಿತವಾಗಿ ಯುವಕನ ಮನೆ ಹಾಗೂ ಮದುವೆ ಮಂಟಪವನ್ನು ವರ್ಣರಂಜಿತವಾಗಿ ಶೃಂಗರಿಸಿಕೊಟ್ಟರು. ಇವೆಲ್ಲಕ್ಕಿಂತ ಮಿಗಿಲಾಗಿ, ಉದ್ಯಮಿಯೊಬ್ಬರು ನವದಂಪತಿಗೆ ಜಗತ್ತಿನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಮೇಬ್ಯಾಕ್ (Maybach) ಕಾರನ್ನೇ ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದರು.

Also Read
10 ಸಾವಿರ ಸಂಬಳ ಪಡೆಯುವ ಯುವಕನ ಖಾತೆಗೆ ಬಂತು 10 ಸಾವಿರ ಕೋಟಿ! ನಂತರ ನಡೆದಿದ್ದಿಷ್ಟು...Salary
Maybach Car

ಸಾಮಾಜಿಕ ಜಾಲತಾಣ ರೆಡ್ಡಿಟ್ (Reddit)‌ನಲ್ಲಿ 'ಸೆಫೈರ್ ಕ್ರಿಸ್ಟಲ್' ಎಂಬ ಬಳಕೆದಾರರು ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದು, ಲಕ್ಷಾಂತರ ಜನರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. "ಈ ವಿಡಿಯೋ ನೋಡಿದಾಗ ನನ್ನ ಕಣ್ಣಲ್ಲಿ ಅರಿವಿಲ್ಲದೇ ನೀರು ಬಂತು, ಜಗತ್ತಿನಲ್ಲಿ ಇಂದಿಗೂ ಮಾನವೀಯತೆ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ" ಎಂದು ಅನೇಕ ನೆಟ್ಟಿಗರು ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ. ಕಷ್ಟದ ಹಾದಿಯಲ್ಲಿ ಬೆಳೆದ ಯುವಕನಿಗೆ ಅಪರಿಚಿತರೇ ಬಂಧುಗಳಾಗಿ ನಿಂತು ನಡೆಸಿ ಕೊಟ್ಟ ಈ ಮದುವೆ ಈಗ ಜಗತ್ತಿನಾದ್ಯಂತ ಸಖತ್ ಸದ್ದು ಮಾಡುತ್ತಿದೆ, (ಏಜೆನ್ಸೀಸ್​).