10 ಸಾವಿರ ಸಂಬಳ ಪಡೆಯುವ ಯುವಕನ ಖಾತೆಗೆ ಬಂತು 10 ಸಾವಿರ ಕೋಟಿ! ನಂತರ ನಡೆದಿದ್ದಿಷ್ಟು...Salary

Salary
10 ಸಾವಿರ ಸಂಬಳ ಪಡೆಯುವ ಯುವಕನ ಖಾತೆಗೆ ಬಂತು 10 ಸಾವಿರ ಕೋಟಿ!
Published on: 

ಜೈಪುರ: ಸಾಮಾನ್ಯವಾಗಿ ತಿಂಗಳಿಗೆ ಕೆಲವೇ ಸಾವಿರ ರೂಪಾಯಿ ದುಡಿಯುವ ( Salary ) ಸಾಮಾನ್ಯ ಯುವಕನೊಬ್ಬನ ಬ್ಯಾಂಕ್ ಖಾತೆಗೆ ಇದ್ದಕ್ಕಿದ್ದಂತೆ ಕೋಟ್ಯಂತರ ರೂಪಾಯಿ ಬಂದು ಬಿದ್ದರೆ ಆತನ ಸ್ಥಿತಿ ಏನಾಗಬೇಡ? ಊಹಿಸಿಕೊಳ್ಳಲೂ ಸಾಧ್ಯವಿಲ್ಲದ ಇಂತಹದ್ದೇ ಒಂದು ಅಚ್ಚರಿ ಹುಟ್ಟಿಸುವ ಘಟನೆ ಇತ್ತೀಚೆಗೆ ರಾಜಸ್ಥಾನದ ಸಿಕಾರ್ ನಗರದಲ್ಲಿ ನಡೆದಿದೆ.

ಸಿಕಾರ್ ನಗರದ ಸಾಲಾಸರ್ ಬಸ್ ನಿಲ್ದಾಣದ ಬಳಿ ಇರುವ 'ನಿರ್ಮಲ್ ಮೆಡಿಕಲ್ ಪಾಯಿಂಟ್' ಎಂಬ ಔಷಧ ಅಂಗಡಿಯಲ್ಲಿ ಕೇವಲ 10,000 ಮಾಸಿಕ ವೇತನಕ್ಕೆ ಕೆಲಸ ಮಾಡುತ್ತಿದ್ದ 22 ವರ್ಷದ ಸಮೀರ್ ಖಾನ್ ಎಂಬ ಯುವಕನಿಗೆ ಇಂತಹದ್ದೊಂದು ವಿಚಿತ್ರ ಹಾಗೂ ಆಘಾತಕಾರಿ ಅನುಭವ ಎದುರಾಗಿದೆ.

Also Read
ಸಾಮಾಜಿಕ ಜಾಲತಾಣದಲ್ಲಿ ದಿಢೀರ್​ ಟ್ರೆಂಡ್​ ಆದ ನಟಿ ಹನ್ಸಿಕಾ ಮೊಟ್ವಾನಿ: ಖಾಸಗಿ ವಿಡಿಯೋ ಸೋರಿಕೆಯದ್ದೇ ಚರ್ಚೆ! Hansika Motwani
Salary

ಬುಧವಾರದಂದು ಸಮೀರ್ ಖಾನ್ ತಮ್ಮ ಮೊಬೈಲ್ ರೀಚಾರ್ಜ್ ಮಾಡುವ ಸಲುವಾಗಿ ಬ್ಯಾಂಕಿಂಗ್ ಆ್ಯಪ್ ಓಪನ್ ಮಾಡಿ ಪಿನ್ ನಮೂದಿಸಿ ಬ್ಯಾಲೆನ್ಸ್ ತಪಾಸಣೆ ನಡೆಸಿದ್ದಾರೆ. ಆದರೆ, ಆ್ಯಪ್‌ನಲ್ಲಿ ಅವರ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್​ ತೋರಿಸಿದೆ. ತಕ್ಷಣವೇ ಗಾಬರಿಗೊಂಡು ಖಾತೆಯ ವಿವರಗಳನ್ನು ಆಳವಾಗಿ ಪರಿಶೀಲಿಸಿದಾಗ, ಅವರ ಖಾತೆಯ ಮೇಲೆ 10,000 ಕೋಟಿಗೂ (1,00,00,00,00,000) ಹೆಚ್ಚು ಮೊತ್ತದ 'ಲಿಯನ್' (Lien/Hold) ವಿಧಿಸಿರುವುದು ಕಂಡುಬಂದಿದೆ. ಇದರಿಂದಾಗಿ ಅವರ ಖಾತೆಯಲ್ಲಿದ್ದ ಸ್ವಂತ ಉಳಿತಾಯದ ಹಣ ಸುಮಾರು 55,000 ಕೂಡ ನೆಗೆಟಿವ್ ಬ್ಯಾಲೆನ್ಸ್ ತೋರಿಸಿ, ಅದನ್ನು ಬಳಸಲಾಗದಂತೆ ಸಂಪೂರ್ಣವಾಗಿ ಬ್ಲಾಕ್ ಆಗಿತ್ತು.

ತನ್ನ ಖಾತೆಯಲ್ಲಿ ಈ ಪರಿ ಮೊತ್ತದ ವ್ಯತ್ಯಾಸ ಹಾಗೂ ಮೈನಸ್ ಬ್ಯಾಲೆನ್ಸ್ ನೋಡಿ ದಿಗ್ಭ್ರಮೆಗೊಂಡ ಸಮೀರ್, ತಕ್ಷಣವೇ ವಿಷಯವನ್ನು ತಮ್ಮ ಯಜಮಾನರಾದ ಧೀರಜ್ ಶರ್ಮಾ ಅವರಿಗೆ ತಿಳಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಇಬ್ಬರೂ ಕೂಡಲೇ ಸಿಕಾರ್ ಸೈಬರ್ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಆದರೆ, ದೂರು ಆಲಿಸಿದ ಪೊಲೀಸರು ಇದು ಬ್ಯಾಂಕಿಂಗ್ ವ್ಯವಸ್ಥೆಯ ವಿಷಯವಾದ್ದರಿಂದ ತಕ್ಷಣವೇ ನೇರವಾಗಿ ಸಂಬಂಧಪಟ್ಟ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ಅವರು ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿ ವಿಚಾರಣೆ ನಡೆಸಿದಾಗ, ಇದು ತಾಂತ್ರಿಕ ದೋಷದಿಂದ ಸಂಭವಿಸಿದ ಯಡವಟ್ಟು ಎಂಬುದು ಬೆಳಕಿಗೆ ಬಂದಿದೆ.

ಬ್ಯಾಂಕ್ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆ ತಾಂತ್ರಿಕ ದೋಷವನ್ನು ಸರಿಪಡಿಸಿದ್ದು, ಸಮೀರ್ ಖಾನ್ ಅವರ ಖಾತೆಯ ಮೇಲಿದ್ದ ಲಿಯನ್ ತೆರವುಗೊಳಿಸಿದ್ದಾರೆ. ಇದರಿಂದಾಗಿ ಅವರ ಖಾತೆಯಲ್ಲಿದ್ದ ನೈಜ ಉಳಿತಾಯದ 55,000 ರೂ. ಹಣ ಮರಳಿ ಲಭ್ಯವಾಗಿದ್ದು, ವಹಿವಾಟು ನಡೆಸಲು ಅನುಕೂಲವಾಗಿದೆ.

Also Read
ಭೂಮಿಯ ಆಳದಲ್ಲಿ 3 ಡ್ರಮ್​ಗಳಲ್ಲಿ ಹೂತಿಟ್ಟಿದ್ದ ಕಂತೆ ಕಂತೆ ನೋಟಿನ ರಹಸ್ಯವನ್ನು ಬಯಲು ಮಾಡಿತು ಒಂದು ಚಿಕ್ಕ ಜಗಳ! Prayagraj Cash in Drums
Salary

ನನ್ನ ಖಾತೆಯಲ್ಲಿ ಸುಮಾರು 55,000 ರೂ. ಇತ್ತು, ಆದರೆ ಇದ್ದಕ್ಕಿದ್ದಂತೆ 10,000 ಕೋಟಿ ರೂ. ಕೊರತೆ ತೋರಿಸಿ ಸ್ವಂತ ಹಣವನ್ನೂ ಬಳಸಲಾಗಲಿಲ್ಲ. ನಂತರ ಪೊಲೀಸರು ಹಾಗೂ ಬ್ಯಾಂಕ್ ಮೆಟ್ಟಿಲೇರಿ ಸಮಸ್ಯೆಯನ್ನು ಬಗೆಹರಿಸಿಕೊಂಡೆ ಎಂದು ಸಮೀರ್ ಖಾನ್ ನಿಟ್ಟುಸಿರು ಬಿಟ್ಟಿದ್ದಾರೆ. ಸಮೀರ್ ಕಳೆದ ಜನವರಿಯಿಂದ ನನ್ನ ಬಳಿ 10,000 ಸಂಬಳಕ್ಕೆ ಕೆಲಸ ಮಾಡುತ್ತಿದ್ದಾನೆ ಎಂದು ಅವರ ಮಾಲೀಕ ಧೀರಜ್ ಶರ್ಮಾ ಮಾಹಿತಿ ನೀಡಿದ್ದಾರೆ, (ಏಜೆನ್ಸೀಸ್​).