29 ವರ್ಷಗಳ ನಂತರ ಕರ್ಮಫಲದಾತ ಶನಿಯ ಸಂಚಾರ: ಈ 4 ರಾಶಿಗಳಿಗೆ ಶುರುವಾಗಲಿದೆ ಸುವರ್ಣ ಯುಗ..! Astrology

Astrology
ಸಾಂದರ್ಭಿಕ ಚಿತ್ರ
Published on: 

Astrology : ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದೇವತೆ ಹಾಗೂ ಕರ್ಮಫಲದಾತ ಎಂದು ಕರೆಯುತ್ತಾರೆ. ವ್ಯಕ್ತಿಯು ಮಾಡುವ ಸತ್ಕರ್ಮಗಳು ಮತ್ತು ದುಷ್ಕರ್ಮಗಳಿಗೆ ಅನುಗುಣವಾಗಿ ತಕ್ಕ ಫಲಗಳನ್ನು ನೀಡುವ ಶನಿಯು ಮಕರ ಮತ್ತು ಕುಂಭ ರಾಶಿಗಳ ಅಧಿಪತಿಯಾಗಿದ್ದಾನೆ. ಒಂದು ರಾಶಿಯಲ್ಲಿ ಸುಮಾರು ಎರಡುವರೆ ವರ್ಷಗಳ ಕಾಲ ಸಂಚರಿಸುವ ಶನಿ ದೇವನ ನಡೆ, ಪ್ರತಿಯೊಬ್ಬರ ಜೀವನದಲ್ಲಿಯೂ ಅತ್ಯಂತ ಪ್ರಮುಖ ಹಾಗೂ ಮಹತ್ವದ ಬದಲಾವಣೆಗಳನ್ನು ತರುತ್ತದೆ. ಪ್ರಸ್ತುತ ಮೀನ ರಾಶಿಯಲ್ಲಿ ಚಲಿಸುತ್ತಿರುವ ಶನಿಯು 2026ರ ಉದ್ದಕ್ಕೂ ಅಲ್ಲೇ ಇರಲಿದ್ದು, 2027ರ ಜೂನ್ 3ರಂದು ಮಂಗಳನ ಅಧಿಪತ್ಯದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಸುಮಾರು 29 ವರ್ಷಗಳ ಸುದೀರ್ಘ ಅವಧಿಯ ನಂತರ ನಡೆಯುತ್ತಿರುವ ಈ ಬೃಹತ್ ಶನಿ ಸಂಚಾರವು ಹಲವು ರಾಶಿಗಳ ಭವಿಷ್ಯವನ್ನೇ ಬದಲಾಯಿಸಲಿದೆ.

ಮೇಷ ರಾಶಿಗೆ ಶನಿಯು ಪ್ರವೇಶ ಪಡೆಯುತ್ತಿದ್ದಂತೆ ಮುಂದಿನ ಎರಡುವರೆ ವರ್ಷಗಳ ಕಾಲ ಅಲ್ಲೇ ನೆಲೆಸಲಿದ್ದಾನೆ. ಈ ಸಂಚಾರದ ಪ್ರಭಾವವು ಧನುಸ್ಸಿನಿಂದ ಹಿಡಿದು ಮೀನದವರೆಗಿನ ಎಲ್ಲಾ 12 ರಾಶಿಗಳ ಮೇಲೆಯೂ ಕಂಡುಬಂದರೂ, ನಿರ್ದಿಷ್ಟವಾಗಿ ನಾಲ್ಕು ರಾಶಿಗಳ ಜಾತಕದವರಿಗೆ ವೃತ್ತಿ, ಹಣಕಾಸು ಹಾಗೂ ವೈಯಕ್ತಿಕ ಜೀವನದಲ್ಲಿ ಅಭೂತಪೂರ್ವ ಯಶಸ್ಸನ್ನು ನೀಡಲಿದೆ. ಈ ಅವಧಿಯಲ್ಲಿ ಈ ಅದೃಷ್ಟದ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ಹಠಾತ್ ಧನಲಾಭ ಹಾಗೂ ಕುಟುಂಬದಲ್ಲಿ ನೆಮ್ಮದಿ ದೊರೆಯಲಿದ್ದು, ಸುವರ್ಣ ಯುಗದಂತಹ ದಿನಗಳು ಆರಂಭವಾಗಲಿವೆ.

Also Read
12 ವರ್ಷಗಳ ಬಳಿಕ ಗುರು-ಮಂಗಳ ಯೋಗ: ಈ 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು, ನಿಮ್ದೂ ಇದೇ ರಾಶಿನಾ? Astrology
Astrology

ಹಾಗಾದರೆ, 2027ರ ಶನಿ ಸಂಚಾರದಿಂದ ಅತ್ಯಧಿಕ ಶುಭ ಫಲಗಳನ್ನು ಪಡೆಯಲಿರುವ ಆ 4 ರಾಶಿಗಳು ಯಾವುವು ಅನ್ನೋದನ್ನು ನಾವೀಗ ಕಂಪ್ಲೀಟ್​ ಆಗಿ ತಿಳಿದುಕೊಳ್ಳೋಣ.

ಕರ್ಕಾಟಕ ರಾಶಿ

2027ರ ಶನಿ ಸಂಚಾರದ ವೇಳೆಯಲ್ಲಿ ಶನಿ ದೇವನು ಕರ್ಕಾಟಕ ರಾಶಿಯವರ 10ನೇ ಮನೆಗೆ (ಕರ್ಮ ಸ್ಥಾನ) ಪ್ರವೇಶಿಸಲಿದ್ದಾನೆ. ಈ ಸಂಚಾರವು ಈ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆ ಮತ್ತು ಬಲವನ್ನು ತರಲಿದೆ. ಆದಾಯದ ಹೊಸ ಹೊಸ ಮೂಲಗಳು ತೆರೆದುಕೊಳ್ಳಲಿದ್ದು, ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಶ್ಲಾಘನೆ ಹಾಗೂ ಪ್ರಶಂಸೆಗಳು ಲಭಿಸಲಿವೆ. ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವವರಿಗೆ ಕೆಲಸದ ಸ್ಥಳದಲ್ಲಿ ದೊಡ್ಡ ಮಟ್ಟದ ಮನ್ನಣೆ ಸಿಗಲಿದೆ. ವ್ಯಾಪಾರ-ವಹಿವಾಟಿನಲ್ಲಿ ನಿರೀಕ್ಷೆಗೂ ಮೀರಿದ ಲಾಭ ದೊರೆಯಲಿದ್ದು, ವಿದೇಶಕ್ಕೆ ಪ್ರಯಾಣಿಸುವ ಅಪರೂಪದ ಅವಕಾಶಗಳು ಒದಗಿಬರಲಿವೆ. ಕುಟುಂಬ ಸದಸ್ಯರಿಂದ ಸಂಪೂರ್ಣ ಬೆಂಬಲ ಸಿಗಲಿದ್ದು, ನೀವು ಕೈಗೊಳ್ಳುವ ಎಲ್ಲಾ ಕೆಲಸಗಳೂ ಯಶಸ್ವಿಯಾಗಲಿವೆ.

ತುಲಾ ರಾಶಿ

Libra

2027ರ ಶನಿ ಗ್ರಹದ ಸಂಚಾರವು ತುಲಾ ರಾಶಿಯ ಜಾತಕದವರಿಗೆ 7ನೇ ಮನೆಯಲ್ಲಿ ನಡೆಯಲಿದೆ. ಈ ಗೋಚಾರ ಫಲವು ತುಲಾ ರಾಶಿಯವರಿಗೆ ಅತ್ಯಂತ ಅನುಕೂಲಕರ ಹಾಗೂ ಶುಭ ಫಲಿತಾಂಶಗಳನ್ನು ತರಲಿದೆ. ಉದ್ಯಮಿಗಳು ಹಾಗೂ ವ್ಯಾಪಾರಿಗಳು ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಭಾರಿ ಲಾಭವನ್ನು ಗಳಿಸಲಿದ್ದಾರೆ. ಅಲ್ಲದೆ, ನಿರೀಕ್ಷಿಸದ ಮಾರ್ಗಗಳಿಂದ ಹಠಾತ್ ಹಣದ ಹರಿವು ಹೆಚ್ಚಾಗಲಿದೆ. ಈಗಾಗಲೇ ಮಾಡಿಟ್ಟಿರುವ ಹೂಡಿಕೆಗಳಿಂದ ಉತ್ತಮ ಲಾಭಾಂಶ ದೊರೆಯುವುದಷ್ಟೇ ಅಲ್ಲದೆ, ಹೊಸ ಹೂಡಿಕೆಗಳಿಗೂ ಇದು ಸೂಕ್ತ ಸಮಯವಾಗಿದ್ದು ಧನಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಸುದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಪ್ರಮುಖ ಕೆಲಸ ಕಾರ್ಯಗಳು ಮತ್ತು ಯೋಜನೆಗಳು ಈ ಅವಧಿಯಲ್ಲಿ ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ಮಕರ ರಾಶಿ

Capricorn Zodiac Signs

ಮಕರ ರಾಶಿಯವರಿಗೆ ಈ ಶನಿ ಸಂಚಾರವು ಅವರ 4ನೇ ಮನೆಯಲ್ಲಿ ನಡೆಯಲಿದೆ. ಶನಿಯ ಅಧಿಪತ್ಯದ ಮಕರ ರಾಶಿಯವರಿಗೆ ಈ ಸಮಯವು ಕಳೆದ ಕೆಲವು ಸಮಯದಿಂದ ಎದುರಿಸುತ್ತಿದ್ದ ಬಹುತೇಕ ಸಮಸ್ಯೆಗಳಿಗೆ ಅಂತ್ಯ ಹಾಡಲಿದೆ. ಉದ್ಯೋಗ ಮತ್ತು ವೃತ್ತಿಕ್ಷೇತ್ರದಲ್ಲಿ ಅದ್ಭುತವಾದ ಸುಧಾರಣೆ ಕಾಣಿಸಿಕೊಳ್ಳಲಿದ್ದು, ವೇತನ ಹೆಚ್ಚಳ ಹಾಗೂ ಆದಾಯ ವೃದ್ಧಿಯಾಗುವ ಬಲವಾದ ಯೋಗವಿದೆ. ಹಣ ಗಳಿಸಲು ಹೊಸ ಮಾರ್ಗಗಳು ಮತ್ತು ಅವಕಾಶಗಳು ನಿಮ್ಮ ಹುಡುಕಿಕೊಂಡು ಬರಲಿವೆ. ಕುಟುಂಬದ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವಿರಿ. ಮಕ್ಕಳಿಂದ ಉತ್ತಮ ಬೆಂಬಲ ಹಾಗೂ ಪ್ರಗತಿಯ ಸುದ್ದಿ ಸಿಗಲಿದ್ದು, ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಧೈರ್ಯದಿಂದ ಹೊಸ ಸಾಹಸಗಳಿಗೆ ಕೈಹಾಕಿ ಜಯಗಳಿಸುವಿರಿ.

Also Read
ದೀಪಾವಳಿ ಹಬ್ಬದ ಮುನ್ನ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕಾ?; ಹಾಗಾದರೆ ಮೊದಲು ಈ ಮೂಲೆಯನ್ನು ಸ್ವಚ್ಛಗೊಳಿಸಿ..Vastu Before Diwali
Astrology

ಕುಂಭ ರಾಶಿ

Aquarius Zodiac Signs

ಕುಂಭ ರಾಶಿಯ ಜಾತಕದವರಿಗೆ ಶನಿ ದೇವನು 3ನೇ ಮನೆಗೆ ಪ್ರವೇಶಿಸಲಿದ್ದಾನೆ. ಇದರರ್ಥ ಕುಂಭ ರಾಶಿಯವರ ಬಹುದಿನಗಳ ಕನಸುಗಳು ಮತ್ತು ಆಸೆಗಳು ಈ ಅವಧಿಯಲ್ಲಿ ಈಡೇರುವ ಸಮಯ ಹತ್ತಿರವಾಗಿದೆ. ನಿಮ್ಮ ಶತ್ರುಗಳು ಹಾಗೂ ಸ್ಪರ್ಧಿಗಳನ್ನು ಸುಲಭವಾಗಿ ಮೆಟ್ಟಿ ನಿಂತು ಮುನ್ನಡೆಯುವ ಸಾಮರ್ಥ್ಯ ನಿಮಗೆ ಸಿಗಲಿದೆ. ಕೋರ್ಟ್-ಕಚೇರಿ ಅಥವಾ ಕಾನೂನುಬದ್ಧ ವ್ಯಾಜ್ಯಗಳಲ್ಲಿ ನಿಮಗೆ ಅನುಕೂಲಕರವಾದ ತೀರ್ಪುಗಳು ಬರಲಿವೆ. ಹಳೆಯ ಆರ್ಥಿಕ ಕಿರಿಕಿರಿಗಳು ನಿವಾರಣೆಯಾಗಿ, ಬರಬೇಕಾಗಿದ್ದ ಕೈಕೊಟ್ಟ ಹಣ ಅಥವಾ ಸಾಲವಾಗಿ ನೀಡಿದ್ದ ಹಣ ನಿಮ್ಮ ಕೈಗೆ ಮರಳಿ ಸೇರಲಿದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಆತುರ ಪಡದೆ ಪ್ರಶಾಂತ ಮನಸ್ಸಿನಿಂದ ಆಲೋಚಿಸಿ ಹೆಜ್ಜೆ ಇಟ್ಟರೆ ಅಭೂತಪೂರ್ವ ಯಶಸ್ಸು ನಿಮ್ಮದಾಗಲಿದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.