ದೀಪಾವಳಿ ಹಬ್ಬದ ಮುನ್ನ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕಾ?; ಹಾಗಾದರೆ ಮೊದಲು ಈ ಮೂಲೆಯನ್ನು ಸ್ವಚ್ಛಗೊಳಿಸಿ..Vastu Before Diwali

ದೀಪಾವಳಿ ಹಬ್ಬದ ಮುನ್ನ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕಾ?; ಹಾಗಾದರೆ ಮೊದಲು ಈ ಮೂಲೆಯನ್ನು ಸ್ವಚ್ಛಗೊಳಿಸಿ..Vastu Before Diwali
Published on: 
  • ದೀಪಾವಳಿ ಹಬ್ಬದ ಮುನ್ನ ಮನೆಯ ಈ ಮೂಲೆಯಿಂದ ಸ್ವಚ್ಛಗೊಳಿಸಿ.

  • ಈಶಾನ್ಯ ಮೂಲೆಯನ್ನು ಮೊದಲು ಸ್ವಚ್ಛಗೊಳಿಸುವುದು ನಕರಾತ್ಮಕ ಶಕ್ತಿ ನಿರ್ಮೂಲನೆಗೆ ಸಹಕಾರಿ.

  • ಪೂರ್ವ ದಿಕ್ಕು ಮತ್ತು ತಂಪಾದ ಶಕ್ತಿ ನೀಡುವ ಉತ್ತರ ದಿಕ್ಕು ಸಂಧಿಸುವ ಜಾಗವೇ ಈಶಾನ್ಯ.

Vastu Before Diwali: ಭಾರತೀಯರು ದೀಪಾವಳಿ ಹತ್ತಿರ ಬರುತ್ತಿದ್ದಂತೆ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದು, ಫ್ಯಾನ್ ಒರೆಸುವುದು ಮತ್ತು ಹಳೆಯ ವಸ್ತುಗಳನ್ನು ವಿಲೇವಾರಿ ಮಾಡುವುದು, ಅನಾದಿಕಾಲದಿಂದಲೂ ಮೂಲೆಯಲ್ಲಿಟ್ಟಿರುವ ಪಾತ್ರೆ ತೆಗೆದು ತೊಳೆದು ಸ್ವಚ್ಛಂದ ಮಾಡಿ ನಂತರ, ಹೊಸ ಬಟ್ಟೆ ಸೇರಿದಂತೆ ಮುಂದಿನ ಕಾರ್ಯಗಳನ್ನು ಕೈಗೊಳ್ಳೋದು ವಾಡಿಕೆ. ಆದರೆ, ಅಡುಗೆಮನೆ ಅಥವಾ ಬಾಲ್ಕನಿಯಿಂದ ಸ್ವಚ್ಛತೆಯನ್ನು ಆರಂಭಿಸುವ ಬದಲು, ವಾಸ್ತು ಶಾಸ್ತ್ರದ ಪ್ರಕಾರ ಯಾವ ಮೂಲೆಯಿಂದ ಕೆಲಸ ಆರಂಭಿಸಬೇಕು ಎಂಬ ನಿಯಮವಿದೆ.

ಹೌದು, ಇಂದು ಯಾವ ಮೂಲೆಯಿಂದ ದೀಪಾವಳಿ ಹಬ್ಬಕ್ಕೂ ಮುನ್ನ ಶುಚಿಗೊಳಿಸಿದರೆ, ಲಕ್ಷ್ಮಿ ನೆಲೆಸುತ್ತಾಳೆ. ಮನೆಗೆ ಅಂಟಿರುವ ನಕರಾತ್ಮಕ ಶಕ್ತಿ ದೂರವಾಗುತ್ತದೆ ಎನ್ನುವುದಕ್ಕೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಈಶಾನ್ಯ ಮೂಲೆ ಮುಖ್ಯ ಯಾಕೆ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ದಿಕ್ಕಿಗೂ ಅದರದ್ದೇ ಆದ ದೇವತೆ ಮತ್ತು ಅಂಶವಿರುತ್ತದೆ. ಮನೆಯ ಅತ್ಯಂತ ಪವಿತ್ರವಾದ ಜಾಗವೆಂದರೆ ಅದು ಈಶಾನ್ಯ ಮೂಲೆ. ಹೀಗಾಗಿ, ದೀಪಾವಳಿ ಶುಚಿಗೊಳಿಸುವಿಕೆಯನ್ನು ಈಶಾನ್ಯ ಮೂಲೆಯಿಂದಲೇ ಆರಂಭಿಸಬೇಕು ಎನ್ನಲಾಗುತ್ತದೆ. ಈ ದಿಕ್ಕಿನ ಅಧಿಪತಿ ಶಿವನ ರೂಪವಾದ ಈಶಾನ ಮತ್ತು ಇದರ ಪ್ರಮುಖ ಅಂಶ ನೀರು.

ಪಾಸಿಟಿವ್​ ಎನರ್ಜಿ ಪ್ರವೇಶಕ್ಕೆ ಒತ್ತು

ಸೂರ್ಯನ ಕಿರಣ ಎಂಟ್ರಿಯಾಗುವ ಪೂರ್ವ ದಿಕ್ಕು ಮತ್ತು ತಂಪಾದ ಶಕ್ತಿ ನೀಡುವ ಉತ್ತರ ದಿಕ್ಕು ಸಂಧಿಸುವ ಜಾಗವೇ ಈಶಾನ್ಯ. ಇದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ಪ್ರವೇಶಿಸುವಂತೆ ಮಾಡುವ ದಿಕ್ಕು.ಈ ಮೂಲೆ ಕತ್ತಲಿಂದ ಕೂಡಿದ್ದರೆ ಅಥವಾ ಅಸ್ತವ್ಯಸ್ತವಾಗಿದ್ದರೆ ಮನೆಗೆ ನೆಗೆಟಿವ್​ ಎನರ್ಜಿ ಬರೋದಂತು ಗ್ಯಾರಂಟಿ. ನಂತರ ಅಶಾಂತಿ, ನೆಮ್ಮದಿ ಹಾಗೂ ಗೊಂದಲದಿಂದ ಕೂಡಿರುತ್ತದೆ, ದೀಪಾವಳಿಯಲ್ಲಿ ಲಕ್ಷ್ಮಿ ದೇವಿಯನ್ನು ಸ್ವಾಗತಿಸುವ ಮುನ್ನ ಈ ಮೂಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ.

Also Read
ಮನೆಯಲ್ಲಿ ಪೂಜೆ ಮಾಡುವಾಗ ಯಾವ ದಿಕ್ಕಿಗೆ ಕುಳಿತುಕೊಳ್ಳಬೇಕು; ವಾಸ್ತು ಶಾಸ್ತ್ರ ಹೇಳೋದೇನು?..Vastu Tips
ದೀಪಾವಳಿ ಹಬ್ಬದ ಮುನ್ನ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕಾ?; ಹಾಗಾದರೆ ಮೊದಲು ಈ ಮೂಲೆಯನ್ನು ಸ್ವಚ್ಛಗೊಳಿಸಿ..Vastu Before Diwali

ಈಶಾನ್ಯ ಮೂಲೆ ಸ್ವಚ್ಛಗೊಳಿಸುವುದು ಹೇಗೆ?

ಮೊದಲು ಮನೆಯ ಮಧ್ಯಭಾಗದಲ್ಲಿ ನಿಂತು ಕಂಪಾಸ್ ಅಥವಾ ಫೋನ್ ಆ್ಯಪ್ ಮೂಲಕ ಉತ್ತರ ಮತ್ತು ಪೂರ್ವದ ನಡುವಿನ ಈಶಾನ್ಯ ಮೂಲೆಯನ್ನು ಖಚಿತಪಡಿಸಿಕೊಳ್ಳಿ.ಈ ಮೂಲೆಯಲ್ಲಿರುವ ಅನಗತ್ಯ ವಸ್ತುಗಳು, ಭಾರವಾದ ಪೆಟ್ಟಿಗೆಗಳು, ಹಳೆಯ ಪತ್ರಿಕೆಗಳು ಹಾಗೂ ಶೂ ರಾಕ್‌ಗಳನ್ನು ಮೊದಲು ತೆಗೆದುಹಾಕಿ. ಭಾರವಾದ ಅಲ್ಮೆರಾ ಅಥವಾ ಕಬೋರ್ಡ್ ಇದ್ದರೆ ಅವುಗಳನ್ನು ನೈಋತ್ಯ ದಿಕ್ಕಿಗೆ ಬದಲಾಯಿಸಿ.

ಗೋಡೆ ಹಾಗೂ ನೆಲವನ್ನು ಚೆನ್ನಾಗಿ ತೊಳೆಯಿರಿ. ನೀರಿನಲ್ಲಿ ಸ್ವಲ್ಪ ಸಮುದ್ರದ ಉಪ್ಪು ಬೆರೆಸಿ ಒರೆಸುವುದರಿಂದ ನಕಾರಾತ್ಮಕ ಶಕ್ತಿ ದೂರಾಗುತ್ತದೆ ಎಂದು ನಂಬಲಾಗಿದೆ. ಒಣಗಿದ ಬಳಿಕ ಗಂಗಾಜಲ ಪ್ರೋಕ್ಷಣೆ ಮಾಡಿ. ಈ ಮೂಲೆ ಸದಾ ಪ್ರಕಾಶಮಾನವಾಗಿರಬೇಕು. ಸಂಜೆ ದೀಪ ಹಚ್ಚಿ. ಹಾಗೆಯೇ, ತಾಮ್ರ ಪಾತ್ರೆಯಲ್ಲಿ ಶುದ್ಧ ನೀರು ಮತ್ತು ತಾಜಾ ಹೂವುಗಳನ್ನು ಇರಿಸಿ. ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ನೀರನ್ನು ಬದಲಾಯಿಸಿ.

ಈಶಾನ್ಯ ಮೂಲೆಯಲ್ಲಿ ಏನಿಡಬಾರದು?

ಶೌಚಾಲಯ, ಅಡುಗೆಮನೆ ಅಥವಾ ಮೆಟ್ಟಿಲುಗಳು ಈ ಮೂಲೆಯಲ್ಲಿ ಬರದಂತೆ ನೋಡಿಕೊಳ್ಳುವುದು ಉತ್ತಮ. ಒಂದು ವೇಳೆ ಈಗಾಗಲೇ ಇದ್ದರೆ, ಆ ಜಾಗವನ್ನು ಸದಾ ಸ್ವಚ್ಛವಾಗಿ ಮತ್ತು ಚೆನ್ನಾಗಿ ಬೆಳಕು ಬರುವಂತೆ ನೋಡಿಕೊಳ್ಳಿ ಈಶಾನ್ಯ ದಿಕ್ಕಿನಲ್ಲಿ ಪಾದರಕ್ಷೆಗಳು, ಪೊರಕೆಗಳು, ಭಾರವಾದ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಚೂಪಾದ ಲೋಹದ ವಸ್ತುಗಳನ್ನು ಇಡುವುದನ್ನು ತಪ್ಪಿಸಿ, (ಏಜೆನ್ಸೀಸ್).