

ನವದೆಹಲಿ: ಸಂಸತ್ ಭವನದ ಭದ್ರತೆಯಲ್ಲಿ ಭಾರಿ ಭದ್ರತಾ ಲೋಪವಾಗಿರುವ ಘಟನೆ ಇಂದು ನಡೆದಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದಾಗ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ದಿಢೀರನೆ ಸದನಕ್ಕೆ ಜಿಗಿದಿದ್ದಾರೆ. ಇಬ್ಬರು ವ್ಯಕ್ತಿಗಳು ಜಿಗಿದ ತಕ್ಷಣ ಅಲ್ಲಿ ಗೊಂದಲದ ವಾತವರಣದ ಉಂಟಾಗಿತ್ತು. ಈ ವೇಳೆ ಇಬ್ಬರೂ ಸೇರಿ ಏನೋ ಸಿಂಪರಣೆ ಮಾಡತೊಡಗಿದರು. ಆಗ ಸಂಸತ್ತಿನ ಒಳಗೆ ಹಳದಿ ಹೊಗೆ ಹರಡಿತು. ಸಂಸತ್ತಿನ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು. ನಂತರ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡರು.
ಈ ಗದ್ದಲದ ವೇಳೆ ಹಲವು ಸಂಸದರು ಸದನದಿಂದ ಹೊರ ಬಂದರು. ಇಂತಹ ದೊಡ್ಡ ಭದ್ರತಾ ಲೋಪದ ನಂತರ ಸಂಸತ್ತಿನ ಕಲಾಪವನ್ನು ಮುಂದೂಡಲಾಯಿತು.
ಸಂಸತ್ತಿನ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ, ಇಬ್ಬರೂ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡರು. ಈ ಗದ್ದಲದ ವೇಳೆ ಹಲವು ಸಂಸದರು ಸದನದಿಂದ ಹೊರ ಬಂದರು. ಸಂಸತ್ತಿನ ಮೇಲಿನ ದಾಳಿಯಾಗಿ ಸುಮಾರು 22 ವರ್ಷವಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ದೇಶದಲ್ಲೇ ಅತ್ಯಂತ ಸುರಕ್ಷಿತ ಸ್ಥಳ ಎನ್ನಲಾದ ಸಂಸತ್ ಭವನದಲ್ಲಿ ಈ ಗದ್ದಲ ನಡೆದ ನಂತರ ಸಂಸತ್ತಿನ ಭದ್ರತೆಯಲ್ಲಿ ನಿರತರಾಗಿದ್ದ ದೆಹಲಿ ಪೊಲೀಸ್ ಸಿಬ್ಬಂದಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸದನದ ಹೊರಗೆ ನಡೆದ ಪ್ರತಿಭಟನೆಯಲ್ಲಿ ಒರ್ವ ಮಹಿಳೆ ಮತ್ತು ಪುರುಷ ಇದ್ದರು. ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. 2001ರಲ್ಲಿ ಇದೇ ದಿನ ಸಂಸತ್ತಿನ ಮೇಲೆ ಉಗ್ರರ ದಾಳಿ ನಡೆದಿತ್ತು ಎಂಬುದು ಗಮನಾರ್ಹ.
ಮಾಹಿತಿಯ ಪ್ರಕಾರ, ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದು ಏನೋ ಸಿಂಪಡಿಸಲು ಪ್ರಾರಂಭಿಸಿದರು. ಮನೆಯೊಳಗೆ ಹಳದಿ ಬಣ್ಣದ ಅನಿಲ ಹರಡಿದೆ. ಗೊಂದಲದ ನಡುವೆಯೇ ಇಬ್ಬರೂ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ. ಮತ್ತೊಂದೆಡೆ, ಕೆಲವರು ಸಂಸತ್ತಿನ ಹೊರಗೆ ಗದ್ದಲ ಸೃಷ್ಟಿಸುತ್ತಿದ್ದಾರೆ. ಗಲಾಟೆ ಸೃಷ್ಟಿಸಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭದ್ರತಾ ಲೋಪ: ಅಧೀರ್ ರಂಜನ್ ಚೌಧರಿ
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಜಿಗಿದಿದ್ದು, ಗ್ಯಾಸ್ ಹೊರ ಬರುತ್ತಿದ್ದ ಏನನ್ನೋ ಎಸೆದಿದ್ದಾರೆ. ಅವರನ್ನು ಹಿಡಿದು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ದರು. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇದು ಖಂಡಿತವಾಗಿಯೂ ಭದ್ರತೆಯ ಉಲ್ಲಂಘನೆಯಾಗಿದೆ, ಏಕೆಂದರೆ ಇಂದು ನಾವು 2001 ರಲ್ಲಿ (ಸಂಸತ್ತಿನ ದಾಳಿ) ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರ ಪುಣ್ಯತಿಥಿಯನ್ನು ಆಚರಿಸುತ್ತಿದ್ದೇವೆ.