

ನವದೆಹಲಿ: ನಿನ್ನೆ ಅಂದರೆ ಅ.13 ರಂದು ದೇಶದಾದ್ಯಂತ ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಾಯಿತು. 'ಜವಾನ್' ನಿಂದ 'ಗದರ್ 2' ವರೆಗಿನ ತಮ್ಮ ನೆಚ್ಚಿನ ಸಿನಿಮಾಗಳನ್ನು ಕೇವಲ 99 ರೂಪಾಯಿಗೆ ಲಕ್ಷಾಂತರ ಜನರು ಥಿಯೇಟರ್‌ಗಳಿಗೆ ಹೋಗಿ ವೀಕ್ಷಿಸಿದರು.
ಇದೀಗ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ರಾಷ್ಟ್ರೀಯ ಸಿನಿಮಾ ದಿನದ ಸಂದರ್ಭದಲ್ಲಿ, ಸಿನಿಮಾ ಪ್ರೇಮಿಗಳು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ. ಹೌದು, ಈ ಅವಧಿಯಲ್ಲಿ ಥಿಯೇಟರ್‌ಗಳಲ್ಲಿ ಸಿನಿಮಾಪ್ರೇಮಿಗಳ ವಿಪರೀತ ಕ್ರೇಜ್ ಕಾಣಿಸಿಕೊಂಡಿದ್ದು, ಎಲ್ಲೆಡೆ ಕಿಕ್ಕಿರಿದು ತುಂಬಿದ ವಾತಾವರಣವಿತ್ತು. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕೂಡ ಈ ಸಿನಿಮಾ ಉತ್ಸವದಲ್ಲಿ 4000 ಕ್ಕೂ ಹೆಚ್ಚು ಸ್ಕ್ರೀನ್‌ಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದೆ. PVR Inox, Cinepolis, Mirage, CityPride, Mukta A2, Movie Time, Wave, M2K, MovieMax, Rajhans, NY Cinemas, Delight ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್‌ಗಳು ಮತ್ತು ಥಿಯೇಟರ್‌ಗಳು ಇದರಲ್ಲಿ ಸೇರಿದ್ದವು.
ಎಲ್ಲ ವಯೋಮಾನದವರಿಂದ ಚಿತ್ರ ವೀಕ್ಷಣೆ
ಪತ್ರಿಕಾ ಪ್ರಕಟಣೆಯಲ್ಲಿ, MAI ಎರಡನೇ ರಾಷ್ಟ್ರೀಯ ಸಿನಿಮಾ ದಿನವನ್ನು ದೇಶಾದ್ಯಂತ ಸಿನಿಮಾ ಪ್ರೇಮಿಗಳು ಹೆಚ್ಚು ಮೆಚ್ಚಿದ್ದಾರೆ ಎಂದು ಹೇಳಿದೆ. ಪ್ರದರ್ಶನಗಳೂ ಬೆಳಗ್ಗೆ 6ರಿಂದಲೇ ಆರಂಭವಾದವು. ದೊಡ್ಡ ಪರದೆಯ ಮೇಲೆ ಚಲನಚಿತ್ರಗಳನ್ನು ಆನಂದಿಸಲು ಎಲ್ಲಾ ವಯಸ್ಸಿನ ಲಕ್ಷಾಂತರ ಚಲನಚಿತ್ರ ಅಭಿಮಾನಿಗಳನ್ನು ಒಟ್ಟುಗೂಡಿಸುವಲ್ಲಿ ಇದು ಪ್ರಮುಖ ಯಶಸ್ಸನ್ನು ಕಂಡಿತು. ಈ ಬಾರಿ ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಿ 6 ದಶಲಕ್ಷಕ್ಕೂ ಹೆಚ್ಚು ಚಿತ್ರ ವೀಕ್ಷಕರು ತಮ್ಮ ಸಮೀಪದ ಚಿತ್ರಮಂದಿರಗಳಿಗೆ ಬಂದಿದ್ದರು. ರಾಷ್ಟ್ರೀಯ ಸಿನಿಮಾ ದಿನದ ಯಶಸ್ಸು ನಾವು ಚಿತ್ರಮಂದಿರಗಳಿಗೆ ಹೋಗುವುದನ್ನು ಎಷ್ಟು ಇಷ್ಟಪಡುತ್ತೇವೆ ಎಂಬುದನ್ನು ನೆನಪಿಸುತ್ತದೆ. ಈ ವರ್ಷದ ರಾಷ್ಟ್ರೀಯ ಸಿನಿಮಾ ದಿನವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದ ಲಕ್ಷಾಂತರ ಚಿತ್ರ ಅಭಿಮಾನಿಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಹಲವು ಚಿತ್ರಗಳ ಕಲೆಕ್ಷನ್ ನಲ್ಲಿ ಜಿಗಿತ
ರಾಷ್ಟ್ರೀಯ ಸಿನಿಮಾ ದಿನದ ಕಾರಣ , 'ಗದರ್ 2' , ಶಾರುಖ್ ಖಾನ್ ಅವರ 'ಜವಾನ್' ಮತ್ತು ಅಕ್ಷಯ್ ಅವರ 'ಮಿಷನ್ ರಾಣಿಗಂಜ್' ಸೇರಿದಂತೆ ಹಲವು ಹೊಸ ಮತ್ತು ಹಳೆಯ ಚಿತ್ರಗಳ ಸಂಗ್ರಹದಲ್ಲಿ ಜಿಗಿತ ಕಂಡುಬಂದಿದೆ.