PHOTOS| 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ಫೋಟೋ ಝಲಕ್​ ಇಲ್ಲಿದೆ…

Film Award
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿಜೇತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕಳೆದ ಆಗಸ್ಟ್​ ತಿಂಗಳಲ್ಲಿ 2021ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ವಿಜೇತರನ್ನು ಘೋಷಣೆ ಮಾಡಲಾಯಿತು. ವಿಜೇತರ ಪಟ್ಟಿಯಲ್ಲಿ ಅಲ್ಲು ಅರ್ಜುನ್​ ( ಪುಷ್ಪ ಸಿನಿಮಾಕ್ಕಾಗಿ ಉತ್ತಮ ನಟ), ಆಲಿಯಾ ಭಟ್​ (ಗಂಗೂಬಾಯಿ ಕಥಿಯಾವಾಡಿ) ಮತ್ತು ಕೃತಿ ಸನೂನ್​ (ಮಿಮಿ) ಉತ್ತಮ ನಟಿ ಪ್ರಶಸ್ತಿಯನ್ನು ಸ್ವೀಕಾರ ಮಾಡಿದರು.

ಇದಲ್ಲದೆ, ಆರ್​ಆರ್​ಆರ್​, ಸರ್ದಾರ್​ ಉಧಾಮ್​, ಗಂಗೂಬಾಯಿ ಕಥಿಯಾವಾಡಿ ಮತ್ತು ಕಾಶ್ಮೀರ ಫೈಲ್ಸ್​ ಸಿನಿಮಾಗಳು ಒಂದಕ್ಕಿಂತ ಹೆಚ್ಚಿನ ಪ್ರಶಸ್ತಿಗೆ ಭಾಜನವಾದವು. ಮಾಧವನ್​ ನಿರ್ದೇಶಿಸಿ, ನಟಿಸಿರುವ ರಾಕೆಟ್ರಿ: ದಿ ನಂಬಿ ಎಫೆಕ್ಟ್​ ಸಿನಿಮಾ ಬೆಸ್ಟ್​ ಫೀಚರ್​ ಸಿನಿಮಾ ಅವಾರ್ಡ್​ ಮುಡಿಗೇರಿಸಿಕೊಂಡಿದೆ. ಚಾರ್ಲಿ 777  ಉತ್ತಮ ಪ್ರಾದೇಶಿಕ ಕನ್ನಡ ಚಿತ್ರದ ಪ್ರಶಸ್ತಿ ಗೆದ್ದಿದ್ದು, ನಟ ಹಾಗೂ ನಿರ್ಮಾಪಕ ರಕ್ಷಿತ್​ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಬಾಳೆ ಬಂಗಾರ ಸಾಕ್ಷ್ಯಚಿತ್ರಕ್ಕಾಗಿ ಅನಿರುದ್ಧ ಜತ್ಕರ್ ಪ್ರಶಸ್ತಿ ಪಡೆದರು. ಹಿರಿಯ ನಟಿ ವಹೀದಾ ರೆಹಮಾನ್​ ಅವರಿಗೆ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಸಹ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದ ಫೋಟೋ ಝಲಕ್​ ಇಲ್ಲಿದೆ....

Allu Arjun 1
Alia Bhat
RRR Madhavan
Rakshit Shetty
Anirudhdha
Charli
Allu Arjun 2
Alia Bhat 2
Kruthi
Madhavan

ರಾಷ್ಟ್ರಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಚಲನಚಿತ್ರ : ರಾಕೆಟ್ರಿ : ದಿ ನಂಬಿ ಎಫೆಕ್ಟ್​ (ನಿರ್ದೇಶನ: ಆರ್​. ಮಾಧವನ್​)

ಇಂದಿರಾ ಗಾಂಧಿ ಪ್ರಶಸ್ತಿ ಯುವನಿರ್ದೇಶಕ ಪ್ರಶಸ್ತಿ : ವಿಷ್ಣು ಮೋಹನ್​ (ಮೆಪ್ಪಡೈಯಾನ್​ ಚಿತ್ರ)

ಅತ್ಯುತ್ತಮ ಜನಪ್ರಿಯ ಸಿನಿಮಾ : ಆರ್​ಆರ್​ಆರ್​

ನರ್ಗಿಸ್​ ದತ್​ ಪ್ರಶಸ್ತಿ : ದಿ ಕಾಶ್ಮೀರ್​ ಫೈಲ್ಸ್​

ಅತ್ಯುತ್ತಮ ಸಾಮಾಜಿಕ ಸಿನಿಮಾ : ಅನುನಾದ್​ ದಿ ರೆಸೊನೆನ್ಸ್​

ಅತ್ಯುತ್ತಮ ಪರಿಸರ ಸಂರಕ್ಷಣೆ ಕುರಿತ ಚಿತ್ರ : ಗಾಂಧಿ ಆ್ಯಂಡ್​ ಕೋ.

ಅತ್ಯುತ್ತಮ ನಿರ್ದೇಶಕ : ನಿಖಿಲ್​ ಮಹಾಜನ್​ (ಮರಾಠಿ ಸಿನಿಮಾ “ಗೋದಾವರಿ’)

ಅತ್ಯುತ್ತಮ ನಟ : ಅಲ್ಲು ಅರ್ಜುನ್​ (ಪುಷ್ಪ : ದಿ ರೈಸ್​)

ಅತ್ಯುತ್ತಮ ನಟಿ : ಆಲಿಯಾ ಭಟ್​ (ಗಂಗೂಬಾಯಿ ಕಾಥಿಯಾವಾಡಿ) ಮತ್ತು ಕೃತಿ ಸನೊನ್​ (ಮಿಮಿ)

ಅತ್ಯುತ್ತಮ ಪೋಷಕ ನಟ : ಪಂಕಜ್​ ತ್ರಿಪಾಠಿ (ಮಿಮಿ)

ಅತ್ಯುತ್ತಮ ಪೋಷಕ ನಟಿ : ಪಲ್ಲವಿ ಜೋಶಿ (ದಿ ಕಾಶ್ಮೀರ್​ ಫೈಲ್ಸ್​)

ಅತ್ಯುತ್ತಮ ಬಾಲ ನಟ : ಭವಿನ್​ ರಬಾರಿ (ಛೆಲ್ಲೋ ಶೋ)

ಅತ್ಯುತ್ತಮ ಹಿನ್ನೆಲೆ ಗಾಯಕ : ಕಾಲಭೈರವ (“ಆರ್​ಆರ್​ಆರ್​’ ಚಿತ್ರದ “ಕೊಮರಮ್​ ಭೀಮುಡೊ’)

ಅತ್ಯುತ್ತಮ ಹಿನ್ನೆಲೆ ಗಾಯಕಿ : ಶ್ರೇಯಾ ಘೋಶಾಲ್​ (“ಇರವಿನ್​ ನಿಜಳ್​’ ಚಿತ್ರದ “ಮಾಯಾವ ಚಾಯಾವ’)

ಅತ್ಯುತ್ತಮ ಛಾಯಾಗ್ರಹಣ : ಅವಿಕ್​ ಮುಖ್ಯೋಪಾಧ್ಯಾಯ್​ (ಸರ್ದಾರ್​ ಉಧಮ್​)

ಅತ್ಯುತ್ತಮ ಚಿತ್ರಕಥೆ : ಶಾಹಿ ಕಬೀರ್​ (ನಾಯಟ್ಟು), ಸಂಜಯ್​ ಲೀಲಾ ಭನ್ಸಾಲಿ ಮತ್ತು ಉತ್ಕರ್ಷಿನಿ ವಸಿಷ್ಠ (ಗಂಗೂಬಾಯಿ ಕಾಥಿಯಾವಾಡಿ)

ಅತ್ಯುತ್ತಮ ಸಂಭಾಷಣೆ : ಉತ್ಕರ್ಷಿನಿ ವಸಿಷ್ಠ ಮತ್ತು ಪ್ರಕಾಶ್​ ಕಪಾಡಿಯಾ (ಗಂಗೂಬಾಯಿ ಕಾಥಿಯಾವಾಡಿ)

ಅತ್ಯುತ್ತಮ ಸಂಕಲನ : ಸಂಜಯ್​ ಲೀಲಾ ಭನ್ಸಾಲಿ (ಗಂಗೂಬಾಯಿ ಕಾಥಿಯಾವಾಡಿ)

ಅತ್ಯುತ್ತಮ ನಿರ್ಮಾಣ ವಿನ್ಯಾಸ : ಡಿಮಿಟ್ರಿ ಮಲಿಚ್​ ಮತ್ತು ಮಾನ್ಸಿ (ಸರ್ದಾರ್​ ಉದ್ಧಂ)

ಅತ್ಯುತ್ತಮ ವಸ್ತ್ರವಿನ್ಯಾಸ : ವೀರ ಕಪೂರ್​ (ಸರ್ದಾರ್​ ಉದ್ಧಂ)

ಅತ್ಯುತ್ತಮ ಪ್ರಸಾದನ : ಪ್ರೀತಿಶೀಲ್​ ಸಿಂಗ್​ ಡಿಸೋಜಾ (ಗಂಗೂಬಾಯಿ ಕಾಥಿಯಾವಾಡಿ)

ಅತ್ಯುತ್ತಮ ಸಂಗೀತ : ದೇವಿಶ್ರೀ ಪ್ರಸಾದ್​ (ಪುಷ್ಪ : ದಿ ರೈಸ್​)

ಅತ್ಯುತ್ತಮ ಹಿನ್ನೆಲೆ ಸಂಗೀತ : ಎಂ.ಎಂ. ಕೀರವಾಣಿ (ಆರ್​ಆರ್​ಆರ್​)

ಅತ್ಯುತ್ತಮ ಸಾಹಿತ್ಯ : ಚಂದ್ರಬೋಸ್​ (ಕೊಂಡಪೋಲಂ ಚಿತ್ರದ ಧಮ್​ ಧಮ್​ ಹಾಡು)

ತೀರ್ಪುಗಾರರ ವಿಶೇಷ ಪ್ರಶಸ್ತಿ : ವಿಷ್ಣುವರ್ಧನ್​ (ಶೇರ್​ಶಾಹ್​)

ಅತ್ಯುತ್ತಮ ಸ್ಪೆಷಲ್​ ಎಫೆಕ್ಟ್ಸ್​: ಶ್ರೀನಿವಾಸ್​ ಮೋಹನ್​ (ಆರ್​ಆರ್​ಆರ್​)

ಅತ್ಯುತ್ತಮ ನೃತ್ಯಸಂಯೋಜನೆ : ಪ್ರೇಮ್​ ರಕ್ಷಿತ್​ (ಆರ್​ಆರ್​ಆರ್​)

ಅತ್ಯುತ್ತಮ ಸಾಹಸ ನಿರ್ದೇಶನ : ಕಿಂಗ್​ ಸೊಲೊಮನ್​ (ಆರ್​ಆರ್​ಆರ್​)

ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ : ರಾಜೀವ್​ ವಿಜಯಕರ್​ (ಮ್ಯೂಸಿಕ್​ ಬೈ ಲಕ್ಷಿ$್ಮಕಾಂತ್​ ಪ್ಯಾರೇಲಾಲ್​ : ದಿ ಇನ್​ಕ್ರೆಡಿಬಲ್​ ಮೆಲೋಡಿಯಸ್​ ಜರ್ನಿ)

ಅತ್ಯುತ್ತಮ ಸಿನಿಮಾ ವಿಮರ್ಶಕ : ಪುರುಷೋತ್ತಮ ಚರ್ಯುಲು (ತೆಲುಗು)

ವಿಶೇಷ ಉಲ್ಲೇಖ (ವಿಮರ್ಶಕ) : ಸುಬ್ರಹ್ಮಣ್ಯ ಬಾದೂರು (ಕನ್ನಡ)

ವಿಶೇಷ ಉಲ್ಲೇಖ : ಅನಿರುದ್ಧ ಜತ್ಕರ್​ (“ಬಾಳೆ ಬಂಗಾರ’ ಸಾಕ್ಷ್ಯಚಿತ್ರ )

ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು :

777 ಚಾರ್ಲಿ (ಕನ್ನಡ), ಸರ್ದಾರ್​ ಉಧಮ್​ (ಹಿಂದಿ), ಉಪ್ಪೇನಾ (ತೆಲುಗು), ಕಡೈಸಿ ವಿವಸಾಯಿ (ತಮಿಳು), ಹೋಮ್​ (ಮಲಯಾಳಂ), ಅನುರ್​ (ಅಸಾಮೀಸ್​), ಕಲ್ಕೊಖೋ (ಬೆಂಗಾಲಿ), ಛೆಲ್ಲೋ ಶೋ (ಗುಜರಾತಿ), ಸಮಾನಾಂತರ್​ (ಮೈಥಿಲಿ), ಏಕ್ಡಾ ಕಾಯ್​ ಜಲಾ (ಮರಾಠಿ), ಪ್ರತಿಾ (ಒಡಿಯಾ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net