More

  ಇದೇ ನೋಡಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದ ಏಷ್ಯಾದ ಮೊದಲ ರಾಷ್ಟ್ರ!

  ನವದೆಹಲಿ: ಸಲಿಂಗ ವಿವಾಹ ವಿಚಾರದಲ್ಲಿ ಸುಪ್ರೀಂಕೋರ್ಟ್​ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಹೇಳಿದೆ. ಈ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು ಮತ್ತು ಹೊಸ ವಿವಾಹ ವ್ಯವಸ್ಥೆಯನ್ನು ರಚಿಸುವಂತೆ ಸಂಸತ್ತು ಅಥವಾ ಸರ್ಕಾರವನ್ನು ನಾವು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಲಿಂಗ ವಿವಾಹ ಮಾನ್ಯತೆಯ ನಿರ್ಧಾರವನ್ನು ನ್ಯಾಯಾಲಯ ಸರ್ಕಾರಕ್ಕೆ ಬಿಟ್ಟಿದೆ.

  ಇದರ ನಡುವೆ ಯಾವ ಯಾವ ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನ ಮಾನ್ಯತೆ ಇದೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಬ್ರಿಟನ್​, ಡೆನ್ಮಾರ್ಕ್​, ಫಿನ್​ಲ್ಯಾಂಡ್​, ಫ್ರಾನ್ಸ್​, ಜರ್ಮನಿ, ಐಸ್​ಲ್ಯಾಂಡ್​, ಐರ್ಲೆಂಡ್​ ಮತ್ತು ಲಕ್ಷಂಬರ್ಗ್​, ದಕ್ಷಿಣ ಆಫ್ರಿಕಾ, ಯುಎಸ್ಎ, ಬ್ರೆಜಿಲ್, ಅರ್ಜೆಂಟೀನಾ, ಕೆನಡಾ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಸ್ಪೇನ್​, ಸ್ವೀಡನ್​, ಪೋರ್ಚುಗಲ್, ಉರುಗ್ವೆ ಸೇರಿದಂತೆ ದೇಶಗಳಲ್ಲಿ ಕಾನೂನು ಮಾನ್ಯತೆ ನೀಡಲಾಗಿದೆ.

  ಏಷ್ಯಾದ ಮೊದಲ ದೇಶ ತೈವಾನ್​
  ಇನ್ನೂ ಏಷ್ಯಾದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಮೊದಲ ದೇಶ ಹೆಸರಿಗೆ ತೈವಾನ್​ ಪಾತ್ರವಾಗಿದೆ. 2019ರ ಮೇ 24ರಿಂದ ಸಲಿಂಗ ವಿವಾಹವನ್ನು ತೈವಾನ್​ ಕಾನೂನುಬದ್ಧಗೊಳಿಸಿದೆ. ಏಷ್ಯಾದಲ್ಲಿ ತೈವಾನ್​ ಒಂದೇ ರಾಷ್ಟ್ರ ಸಲಿಂಗ ವಿವಾಹವನ್ನು ಗುರುತಿಸಿರುವುದು. ಇತರೆ ಏಷ್ಯಾ ರಾಷ್ಟ್ರಗಳಲ್ಲಿ ಸಲಿಂಗ ವಿವಾಹವನ್ನು ನಿರ್ಬಂಧಿಸಲಾಗಿದೆ.

  ಇದನ್ನೂ ಓದಿ: ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..

  ಇಂದು ಸುಪ್ರೀಂಕೋರ್ಟ್​ ಹೇಳಿದ್ದೇನು?
  ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಹಕ್ಕನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂಬ ಕಾರಣದಿಂದ ವಿಶೇಷ ವಿವಾಹ ಕಾಯ್ದೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಸಲಿಂಗ ವಿವಾಹ ಮಾನ್ಯತೆಯ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು. ಹೊಸ ವಿವಾಹ ವ್ಯವಸ್ಥೆಯನ್ನು ರಚಿಸುವಂತೆ ಸಂಸತ್ತು ಅಥವಾ ಸರ್ಕಾರವನ್ನು ನಾವು ಒತ್ತಾಯಿಸಲು ಸಾಧ್ಯವಿಲ್ಲ. ವಿಶೇಷ ವಿವಾಹ ಕಾಯ್ದೆಯ (SMA) ಸೆಕ್ಷನ್ 4 ಸಲಿಂಗ ದಂಪತಿಗಳನ್ನು ಒಳಗೊಂಡಿಲ್ಲ ಎಂಬ ಕಾರಣಕ್ಕೆ ಅಸಾಂವಿಧಾನಿಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದು, ಸದ್ಯ ಸಲಿಂಗ ವಿವಾಹದ ನಿರ್ಧಾರವೂ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. (ಏಜೆನ್ಸೀಸ್​)

  ಏಷ್ಯನ್​ ಗೇಮ್ಸ್​ ಪದಕ ವಿಜೇತರಿಗೆ ಭಾರೀ ನಗದು ಬಹುಮಾನ ಘೋಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​

  ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts