1997ರಲ್ಲಿ ಪ್ಯಾರಾಗ್ಲೈಡಿಂಗ್ ಸಾಹಸ ಮಾಡಿದ್ದ ಮೋದಿ...

PM Modi Paraglyding
Published on

ಮನಾಲಿ: 1997ರ ಸಮಯದಲ್ಲಿ ಹಿಮಾಚಲ ಪ್ರದೇಶದ ಬಿಜೆಪಿ ಉಸ್ತುವಾರಿಯಾಗಿದ್ದ ನರೇಂದ್ರ ಮೋದಿ ಸೋಲಾಂಗ್‌ನಲ್ಲಿ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಿದ್ದರು. ಆ ವೇಳೆ ಅವರಿಗೆ ಬುಧಿ ಪ್ರಕಾಶ್ ಎಂಬುವವರು ಮಾರ್ಗದರ್ಶಕರಾಗಿದ್ದರು.

ಅಂದಿನ ಛಾಯಾಚಿತ್ರಗಳನ್ನು ಬುಧಿ ಪ್ರಕಾಶ್ ಈಗ ಹಂಚಿಕೊಂಡಿದ್ದಾರೆ. ‘‘ಮೊದಲ ಹಾರಾಟವಾದರೂ ಮೋದಿಯವರು ಅತ್ಯಂತ ಧೈರ್ಯವಾಗಿದ್ದರು. ಇದೊಂದು ಉತ್ತಮ ಅನುಭವ ಎಂದಿದ್ದರು’’ ಎಂದು ಬುಧಿ ತಿಳಿಸಿದ್ದಾರೆ. ‘‘ಸುಮಾರು ಎರಡು ನಿಮಿಷ ಮೋದಿ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಿದ್ದರು. ಮತ್ತೆ ಬರುತ್ತೇನೆ ಅಂತಲೂ ತಿಳಿಸಿದ್ದರು. ಆದರೆ ಅವರು ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ಮತ್ತೆ ಸೋಲಾಂಗ್‌ಗೆ ಬರಲು ಆಗಲಿಲ್ಲ’’ ಎಂದು ಪ್ರಕಾಶ್ ಹೇಳಿದ್ದಾರೆ.

ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ರೋಹ್ಟಾಂಗ್ ಸುರಂಗದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 3ರಂದು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಬುಧಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net