ಹೆಂಡತಿಯೊಂದಿಗೆ ಜಗಳ ಮಾಡಿಕೊಂಡ ನಟ ನೇಣಿಗೆ ಶರಣು..

Thennarasu
Published on

ಚೆನ್ನೈ: ಪತ್ನಿಯ ಜತೆ ಜಗಳ ಮಾಡಿಕೊಂಡ ಯುವನಟ ಕೊನೆಗೆ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳು ಚಿತ್ರರಂಗದ ಯುವನಟ ತೆನ್ನರಸು ಹಾಗೂ ಅವರ ಪತ್ನಿ ಮಧ್ಯೆ ವಾಗ್ವಾದ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದ್ದು, ಬಳಿಕ ಇದರಿಂದ ತೀವ್ರ ಬೇಸರಗೊಂಡ ತೆನ್ನರಸು ನೇಣಿಗೆ ಶರಣಾಗಿದ್ದಾರೆ. ಚೆನ್ನೈನ ಮೈಲಾಪುರದ ತಮ್ಮ ಮನೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕ್ಷಣಿಕ ಕೋಪಕ್ಕೆ ಜೀವನವನ್ನೇ ಕೊನೆಗಾಣಿಸಿಕೊಂಡ ನಟನ ಬಗ್ಗೆ ಅಭಿಮಾನಿಗಳು, ಸಿನಿಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪಾಂಡಿರಾಜ್​ ನಿರ್ದೇಶನದಲ್ಲಿ ಶಿವಕಾರ್ತಿಕೇಯನ್​ ಹಾಗೂ ಒವಿಯಯ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ 'ಮರಿನ' ಚಿತ್ರದಲ್ಲಿ ಬಾಲಕನಾಗಿ ನಟಿಸುವ ಮೂಲಕ ತೆನ್ನರಸು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಇವರಿಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, 2 ವರ್ಷದ ಮಗುವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net