ಮೊಬೈಲ್ ಮೂಲಕವೇ ನರೇಗಾ ಕಾಮಗಾರಿ ಅಳವಡಿಕೆ

AD MANISH
Published on

ಎನ್.ಆರ್.ಪುರ: ಮುಂದಿನ ವರ್ಷದ ನರೇಗಾ ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಜಾಬ್ ಕಾರ್ಡ್ ಹೊಂದಿರುವವರು ಸ್ವಂತ ಮೊಬೈಲ್ ನಂಬರ್ ಮೂಲಕ ಸಂಬಂಧಪಟ್ಟ ಲಿಂಕ್ ಬಳಿಸಿ ಒಟಿಪಿ ಮೂಲಕ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಅಳವಡಿಸಬಹುದಾಗಿದೆ ಎಂದು ತಾಪಂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ ತಿಳಿಸಿದ್ದಾರೆ.
ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಎಂಬ ಅಭಿಯಾನ ಪ್ರಾರಂಭಿಸಲಾಗಿದೆ. ಗ್ರಾಮೀಣ ಭಾಗದ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಗ್ರಾಪಂನಿಂದ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. 2025-26ನೇ ಸಾಲಿನ ಕ್ರಿಯಾ ಯೋಜನೆಲ್ಲಿ ಕ್ಯೂಆರ್ ಕೋಡ್ ಬಳಸಿಕೊಂಡು ಕೃಷಿ ಹೊಂಡ, ಬದು ನಿರ್ಮಾಣ, ಜಾನುವಾರು ಕೊಟ್ಟಿಗೆ, ಕುರಿ, ಕೋಳಿ ಶೆಡ್ ನಿರ್ಮಾಣ, ಇಂಗುಗುಂಡಿ, ತೋಟಗಾರಿಕೆ ಬೆಳೆಗಳ ವೈಯಕ್ತಿಕ ಕಾಮಗಾರಿಗಳಿಗೆ ಹೆಸರನ್ನು ನಮೂದಿಸಬಹುದು. ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಸ್ವ (ಸಮುದಾಯ ವೈಯಕ್ತಿಕ) ಕಾಮಗಾರಿಗೆ ಮೊಬೈಲ್ ನಂಬರ್ ಮೂಲಕ ಲಿಂಕ್ ಬಳಸಿ ಒಟಿಪಿ ಮೂಲಕ ಕಾಮಗಾರಿಯನ್ನು ಅಳವಡಿಸಿಕೊಳ್ಳಬಹುದಾಗಿದೆ. ನಂತರ ಇಂಜಿನಿಯರ್ ಸ್ಥಳ ಪರಿಶೀಲಿಸಲಿದ್ದಾರೆ. ಗ್ರಾಮಸಭೆಯಲ್ಲಿ ಅನುಮೋದನೆಯ ಆದ್ಯತೆ ಪರಿಗಣಿಸಿ ಕ್ರಿಯಾಯೋಜನೆಯ ಅನುಮೋದನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಕಾಮಗಾರಿಗಳ ಬೇಡಿಕೆಯನ್ನು ಅಕ್ಟೋಬರ್ ಕೊನೆಯ ಒಳಗೆ ಇ-ತಂತ್ರಾಂಶದ ಮೂಲಕ ಸಲ್ಲಿಸಬೇಕು. ಸಾರ್ವಜನಿಕರು ಅವಕಾಶ ಬಳಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಗ್ರಾಪಂ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net