

ಕಲ್ಯಾಣ ಕರ್ನಾಟಕದಲ್ಲಿ ನರೇಂದ್ರ ಮೋದಿ ಮೇನಿಯಾ ಕಳೆಗಟ್ಟಿದೆ. ವಿವಿಧ ಮಹತ್ತರ ಯೋಜನೆಗಳಿಗೆ ಯಾದಗಿರಿಯಲ್ಲಿ ಚಾಲನೆ ನೀಡಿದ ಮೋದಿ ಅವರು ಇದೀಗ ಕಲಬುರಗಿಯ ಮಳಖೇಡಕ್ಕೆ ಆಗಮಿಸಿದ್ದಾರೆ. ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಕೊಪ್ಪಳ, ರಾಯಚೂರು ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಮೋದಿ ಹಕ್ಕುಪತ್ರ ವಿತರಿಸಲಿದ್ದಾರೆ. ಇದು ಗಿನ್ನೆಸ್ ದಾಖಲೆಯಾಗಲಿದೆ. ಇದುವರೆಗೆ ಏಕಕಾಲಕ್ಕೆ ಇಷ್ಟೊಂದು ಜನರಿಗೆ ಹಕ್ಕುಪತ್ರ ವಿತರಣೆ ಮಾಡಿದ ಉದಾಹರಣೆಗಳಿಲ್ಲ.