ಕಲಬುರಗಿಗೆ ಆಗಮಿಸಿದ ಮೋದಿ: 51,900 ತಾಂಡಾ ನಿವಾಸಿಗಳಿಗೆ ಸಿಗಲಿದೆ ಹಕ್ಕುಪತ್ರ

PM Modi
Published on

ಕಲಬುರಗಿ: ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆಗಾಗಿ ಹುಬ್ಬಳ್ಳಿಗೆ ಕಳೆದ ವಾರ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಗುರುವಾರ) ಕಲ್ಯಾಣ ಕರ್ನಾಟಕಕ್ಕೆ ಆಗಮಿಸಿ ಮಹತ್ತರ ಯೋಜನೆಗಳಿಗೆ ಯಾದಗಿರಿ ಜಿಲ್ಲೆಯಲ್ಲಿ ಚಾಲನೆ ನೀಡಿದ್ದಾರೆ. ಇದೀಗ ಕಲಬುರಗಿಗೆ ಆಗಮಿಸಿರುವ ಮೋದಿ, ಮಳಖೇಡದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಲಬುರಗಿ, ಬೀದರ್​, ಯಾದಗಿರಿ, ವಿಜಯಪುರ, ಕೊಪ್ಪಳ, ರಾಯಚೂರು ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಮೋದಿ ಹಕ್ಕುಪತ್ರ ವಿತರಿಸಲಿದ್ದಾರೆ. ಇದು ಗಿನ್ನೆಸ್​ ದಾಖಲೆಯಾಗಲಿದೆ.

ನರೇಂದ್ರ ಮೋದಿ ಅವರನ್ನ ಕಣ್ತುಂಬಿಕೊಳ್ಳಲು ಯಾದಗಿರಿಯಲ್ಲೂ ಲಕ್ಷಾಂತರ ಜನ ಸೇರಿದ್ದರು. ಕಲಬುರಗಿಯ ಮಳಖೇಡದಲ್ಲೂ ಜನಸಾಗರವೇ ಹರಿದುಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೇಕಲ್​-ನಾರಾಯಣಪುರ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಕಾಡಾ ಗೇಟ್​ಗಳ ಲೋಕಾರ್ಪಣೆ ಮತ್ತು ಚೆನ್ನೈ-ಸುರತ್​ ಎಕ್ಸ್​ಪ್ರೆಸ್​ ವೇ ಕಾರಿಡಾರ್​ಗೆ ಭೂಮಿಪೂಜೆ, ನಾರಾಯಣಪುರದ ಬಸವಸಾಗರ ಜಲಾಶಯದ ಕಾಲುವೆಗೆ ನಿರ್ಮಿಸಿದ ಸ್ಕಾಡಾ ತಂತ್ರಜ್ಞಾನದ ಗೇಟ್​ಗಳನ್ನು ರಾಷ್ಟ್ರಕ್ಕೆ ಸಮರ್ಪಣೆ ಸೇರಿದ್ದಂತೆ ಹಲವು ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net