

ಧರ್ಮಶಾಲಾ: ಕೇಂದ್ರ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಹಿಮಾಚಲಪ್ರದೇಶದ ಹಮೀರ್ಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಮೋ ಟೀ-ಸ್ಟಾಲ್ಗಳನ್ನು ಸ್ಥಾಪಿಸಿರುವುದಾಗಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ವಕ್ತಾರರು ತಿಳಿಸಿದ್ದಾರೆ.
ಹಮೀರ್ಪುರದ ಗಾಂಧಿ ಚೌಕ್, ನಾದೌನ್ನ ಇಂದ್ರಪಾಲ್ ಚೌಕ್, ಭೋರಂಜ್, ಬದ್ಸರ್ ಬಜಾರ್ ಮತ್ತು ಸುಜಾನ್ಪುರದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರಧಾನಿ ಮೋದಿ ಹೆಸರಿನ ನಮೋ ಟೀ ಸ್ಟಾಲ್ಗಳನ್ನು ಸ್ಥಾಪಿಸಲಾಗಿದೆ.
ಮೋದಿ ಸರ್ಕಾರ ದೇಶದ ಪ್ರತಿ ವರ್ಗಕ್ಕೂ ಕಲ್ಯಾಣ ಯೋಜನೆ ಪ್ರಾರಂಭಿಸಿದೆ. ಅದರ ಲಾಭ ದೇಶದ ಜನತೆಗೆ ಸಿಗುತ್ತಿದೆ. ಈ ಯೋಜನೆಗೆಳನ್ನು ಉತ್ತೇಜಿಸಲು ಚರ್ಚೆ ನಡೆಸಲಾಗುವುದು. ಜತೆಗೆ ಈ ಮಳಿಗೆಗಳಲ್ಲಿ ಬಿಜೆಪಿಯ ಯುವ ಟಕವು ಹಲವು ಚಟುವಟಿಕೆಗಳನ್ನು ಆಯೋಜಿಸುತ್ತದೆ. 2024ರ ಲೋಕಸಭೆ ಚುನಾವಣೆಯಲ್ಲಿ ನಮೋ ಟೀ ಸ್ಟಾಲ್ಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದ್ದಾರೆ.