More

    ಖೇಲ್ ರತ್ನ, ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸಿದ ವಿನೀಶಾ ಫೋಗಟ್! ಪ್ರಧಾನಿಗೆ ಪತ್ರ ಬರೆದ ಕುಸ್ತಿಪಟು

    ಹೊಸದಿಲ್ಲಿ: ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆಯಾದ ಬೆನ್ನಲ್ಲೇ ಭಾರತೀಯ ಕುಸ್ತಿ ಸಂಸ್ಥೆಯನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿತು. ಈ ವಿವಾದದ ಮಧ್ಯೆ ಇದೀಗ ಚಿನ್ನದ ಪದಕ ಪಡೆದಿದ್ದ ಕ್ರೀಡಾಪಟು ವಿನೀಶಾ ಫೋಗಟ್ ಮಂಗಳವಾರ ತಮ್ಮ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.

    ಇದನ್ನೂ ಓದಿ: 5,8,9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ: ವೇಳಾಪಟ್ಟಿ ಪ್ರಕಟಿಸಿದ ಪರೀಕ್ಷಾ ಮಂಡಳಿ

    ಭಾರತೀಯ ಡಬ್ಲ್ಯುಎಫ್‌ಐ ಅಧ್ಯಕ್ಷರ ಆಯ್ಕೆಯಲ್ಲಿ ನಡೆದ ಪ್ರಕ್ರಿಯೆ ಕುರಿತು ತೀವ್ರ ಅಸಮಾಧಾನ ಹೊರಹಾಕಿದ ಭಜರಂಗ್ ಪೂನಿಯಾ ನಂತರದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ತ್ಯಜಿಸಿದ ಎರಡನೇ ಕುಸ್ತಿಪಟು ವಿನೀಶಾ ಫೋಗಟ್ ಆಗಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂಜಯ್ ಸಿಂಗ್ ನೇಮಕವನ್ನು ವಿರೋಧಿಸಿ ಪುನಿಯಾ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಪದ್ಮಶ್ರೀ ಪ್ರಶಸ್ತಿಯನ್ನು ಇರಿಸಿ, ಪ್ರತಿಭಟಿಸಿದ್ದರು.

    “ನಾನು ನನ್ನ ಮೇಜರ್ ಧ್ಯಾನಚಂದ್ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ” ಎಂದು ವಿನೀಶಾ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಎಕ್ಸ್​ನಲ್ಲಿ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts