More

    ನಕಲಿ ಇ ಮೇಲ್ ಕಳುಹಿಸಿ 66 ಲಕ್ಷ ದೋಚಲು ಯತ್ನ

    ಬೆಂಗಳೂರು: ನೆಹರು ಯುವ ಕೇಂದ್ರ ಸಂಘ ಹಾಗೂ ಕೇಂದ್ರ ಯುವ ಮತ್ತು ಕ್ರೀಡಾ ಸಚಿವಾಲಯ ಪ್ರಾದೇಶಿಕ ನಿರ್ದೇಶಕರಿಗೆ ನಕಲಿ ಇ ಮೇಲ್ ಕಳುಹಿಸಿ 66 ಲಕ್ಷ ರೂ. ವಂಚನೆಗೆ ಸೈಬರ್ ಕಳ್ಳರು ಯತ್ನಿಸಿದ್ದಾರೆ.

    ವಸಂತನಗರದ ಟ್ಯಾಂಕ್ ರಸ್ತೆ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಈ ಕುರಿತು ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೂರ್ವ ಸಿಇಎನ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಪ್ರಾದೇಶಿಕ ನಿರ್ದೇಶಕರ ಇ ಮೇಲ್ ಐಡಿಗೆ ಎನ್‌ವೈಕೆಎಸ್-ಎನ್‌ಎಲ್‌ಎಂ ಯೋಜನೆಯ ಹಣಕಾಸು ಮತ್ತು ಬ್ಯಾಂಕ್ ಖಾತೆಗಳ ಮಾಹಿತಿಯನ್ನು ನೀಡುವಂತೆ ನವದೆಹಲಿ ಯುವ ಮತ್ತು ಕ್ರೀಡಾ ಸಚಿವಾಲಯ ನಕಲಿ ಸಂದೇಶ ಬಂದಿದೆ. ಅದರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಎಜಿ ವಿಶೇಷ ಲೆಕ್ಕಪರಿಶೋದನೆ ಪ್ರಾರಂಭಿಸಲಾಗಿದೆ. ತಕ್ಷಣವೇ ಹಣವನ್ನು ಪಾವತಿಸಬೇಕು. 10 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಡಿಡಿಗಳನ್ನು ಕಳುಹಿಸುವಂತೆ ನಕಲಿ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಗಮನಿಸಿದ ಎಂ.ಎನ್. ನಟರಾಜ್, ನವದೆಹಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ನಿರ್ದೇಶಕರ ಹೆಸರಿನಲ್ಲಿ 66.06 ಲಕ್ಷ ರೂ. ಮೌಲ್ಯದ ಎಂಟು ಡಿಮ್ಯಾಂಡ್ ಡ್ರ್‌ಟಾಗಳನ್ನು ಪಡೆದು ದೆಹಲಿಗೆ ಕಳುಹಿಸಿದ್ದರು.

    ಏಪ್ರಿಲ್ 18ರಂದು ಕೇಂದ್ರ ಶಿಕ್ಷಣ ಸಚಿವಾಲಯ ಅಧೀನ ಕಾರ್ಯದರ್ಶಿ, ತಮ್ಮ ವಿಳಾಸಕ್ಕೆ ಬಂದಿದ್ದ ಡಿಡಿಗಳನ್ನು ಕಂಡು ಅಶ್ಚರ್ಯ ಪಟ್ಟು ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕರಿಗೆ ಕರೆ ಮಾಡಿ ‘ಯಾವ ಉದ್ದೇಶಕ್ಕೆ ಈ ಡಿಡಿಗಳನ್ನು ಕಳುಹಿಸಿಕೊಟ್ಟಿದ್ದೀರ’ ಎಂದು ಪ್ರಶ್ನಿಸಿದ್ದಾರೆ. ಗಾಬರಿಗೊಂಡ ನಟರಾಜ್, ತಮಗೆ ಬಂದಿದ್ದ ಇ-ಮೇಲ್ ಸಂದೇಶವನ್ನು ತೆಗೆದು ಪರಿಶೀಲನೆ ನಡೆಸಿದಾಗ ಅದರೊಂದು ನಕಲಿ ಇ ಮೇಲ್ ಎಂಬುದು ಗೊತ್ತಾಗಿದೆ. ಸ್ವಲ್ಪ ಯಾಮಾರಿದ್ದರೂ 66.06 ಲಕ್ಷ ರೂ. ಮೌಲ್ಯದ ಡಿಡಿ ಸೈಬರ್ ಕಳ್ಳರ ಪಾಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts