More

    ಸರ್ವರೂ ಸಂಘಟಿತರಾದರೆ ಸಮಾಜದ ಉನ್ನತಿ

    ಶೃಂಗೇರಿ: ಸರ್ವರೂ ಸಂಘಟಿತರಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಉನ್ನತಿ ಸಾಧ್ಯ. ಧರ್ಮ ಹಾಗೂ ಕರ್ಮಗಳು ಎಲ್ಲವನ್ನೂ ಮೀರಿ ಬೆಳೆಯಬೇಕು. ಅಲ್ಲಿ ಜಾತಿ, ಮತ, ಪಂಥಗಳ ಗೋಡೆ ಇರಬಾರದು ಎಂದು ಗೌರಿಗದ್ದೆ ಸ್ವರ್ಣಪೀಠಿಕಾ ಆಶ್ರಮದ ಶ್ರೀ ವಿನಯ್ ಗುರೂಜಿ ತಿಳಿಸಿದರು.
    ಕನ್ನಡ ಭವನದಲ್ಲಿ ಶೃಂಗೇರಿ ಶ್ರೀ ಶಾರದಾಂಬಾ ಕಟ್ಟಡ ಮತ್ತು ಇತರ ನಿರ್ಮಾಣ ಸಂಘ ಸೋಮವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ನಮ್ಮ ದೃಷ್ಟಿಕೋನ ವಿಶಾಲತೆಯಿಂದ ಕೂಡಿರಬೇಕು. ಧರ್ಮ ಹಾಗೂ ಕರ್ಮವನ್ನು ಮೀರಿ ಬೆಳೆದ ಸಂಘ ಈ ಜಗತ್ತಿನಲ್ಲಿ ಇದ್ದರೆ ಅದು ಕಾರ್ಮಿಕರ ಸಂಘ ಮಾತ್ರ. ಸಮಾನತೆ ಸಾಮರಸ್ಯದ ಉನ್ನತಿಗೆ ಪೂರಕವಾಗುತ್ತದೆ. ಶ್ರೀ ಶಂಕರಾಚಾರ್ಯರು, ಪವಿತ್ರವಾದ ತುಂಗಾನದಿ ಸದಾ ಶಾಶ್ವತ. ನಮ್ಮ ಉಸಿರು ನಿಂತ ಮೇಲೆ ಶರೀರ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ನಾವು ಮಾಡಿದ ಉತ್ತಮ ಕೆಲಸ ಮಾತ್ರ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದರು.
    ವಿದ್ಯೆ, ಉದ್ಯೋಗ, ಆಶ್ರಯ ಪ್ರತಿಯೊಬ್ಬ ಮನುಷ್ಯನಿಗೆ ಅವಶ್ಯಕ. ಜತೆಗೆ ಮಾನವ ಸೇವೆ ಮಾಡಿ ಜನ್ಮ ಸಾರ್ಥಕಗೊಳಿಸಬೇಕು. ಮಾನವನ ಸೇವೆ ಮಾಧವನ ಸೇವೆ ಎಂದು ಹೇಳಿದರು.
    ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಚಂದ್ರನಾಯ್ಕ ಅವರನ್ನು ಗೌರವಿಸಲಾಯಿತು. ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಯಿತು. ಕಾರ್ಮಿಕ ಸಂಘದ ಅಧ್ಯಕ್ಷ ಮುನಿಸ್ವಾಮಿ, ಕಾರ್ಯದರ್ಶಿ ಶ್ರೀಧರ್, ಕೋಶಾಧ್ಯಕ್ಷ ಪ್ರಶಾಂತ್,
    ತಾಲೂಕು ಗುತ್ತಿಗೆದಾರ ಸಂಘದ ಅಧ್ಯಕ್ಷ ಭಾಸ್ಕರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ಶೋಭಾ, ಸುಬ್ರಹ್ಮಣ್ಯ ಆಚಾರ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts