ಪರಮೇಶ್ವರ್​ ಗೃಹ ಖಾತೆಯನ್ನು ಪ್ರಿಯಾಂಕ ಖರ್ಗೆಗೆ ಲೀಸ್​ ಕೊಟ್ಟಿದ್ಧಾರೆ: ನಳಿನ್​ ಕುಮಾರ್​ ಕಟೀಲ್​

Kharge Kateel
Published on

ಬೆಂಗಳೂರು: ಗೃಹ ಸಚಿವರಾದ ಪರಮೇಶ್ವರ್​ ಅವರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆಯೋ? ತಮ್ಮ ಖಾತೆಯ ಮೇಲೆ ಬೇಸರವೋ ತಿಳಿಯುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.

ಪೊಲೀಸ್ ಅಧಿಕಾರಗಳಿಗೆ ಮರಿ ಖರ್ಗೆಯವರು ಕ್ಲಾಸ್ ತಗೊತಿದ್ದಾರೆ ಎಂದರೆ ನನ್ನ ಊಹೆ ನಿಜ ಅಲ್ಲವೇ ಎಂದು ಪ್ರಶ್ನಿಸಿದ್ಧಾರೆ.

ಗೃಹ ಸಚಿವರಾದ ಪರಮೇಶ್ವರ್​ ಅವರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆಯೋ? ತಮ್ಮ ಖಾತೆಯ ಮೇಲೆ ಬೇಸರವೋ ತಿಳಿಯುತ್ತಿಲ್ಲ. ತಮ್ಮ ಗೃಹಖಾತೆಯ ಕೆಲಸಗಳನ್ನು ಪ್ರಿಯಾಂಕ ಖರ್ಗೆ ಅವರಿಗೆ ಲೀಸ್​ಗೆ ಕೊಟ್ಟಿದ್ದಾರೋ. ಪೊಲೀಸ್ ಅಧಿಕಾರಗಳಿಗೆ ಮರಿ ಖರ್ಗೆಯವರು ಕ್ಲಾಸ್ ತಗೊತಿದ್ದಾರೆ ಎಂದರೆ ನನ್ನ ಊಹೆ ನಿಜ ಅಲ್ಲವೇ ಸಿದ್ದರಾಮಯ್ಯನವರೇ.

ಪ್ರಿಯಾಂಕ ಖರ್ಗೆ ಅವರೇ ಪೊಲೀಸ್​ ಅಧಿಕಾರಿಗಳನ್ನು ಕಂಟ್ರೋಲ್​ ಮಾಡುವ ಕೆಲಸ ಬಿಟ್ಟು, ದನಕಳ್ಳರ ಮೇಲೆ ಕಠಿಣ ಕ್ರಮ ಕೈಗೊಳ್ಳಿ, ಅಕ್ರಮ ಕಸಾಯಿಖಾನೆಗಳ ಮೇಲೆ ಕ್ರಮ ಕೈಗೊಳ್ಳಿ, ಲವ್ ಜಿಹಾದ್ ಮಾಡುವವರ ಮೇಲೆ ಕ್ರಮ ಕೈಗೊಳ್ಳಿ, ಅಶಾಂತಿ ದೂತರ ಮೇಲೆ ಕ್ರಮ ಕೈಗೊಳ್ಳಿ. ಹಿಂದೂಪರ ಕಾರ್ಯಕರ್ತರ ಮೇಲೆ ಟಾರ್ಗೆಟ್ ಮಾಡೋದು ಬೇಡ ಎಂದು ಸರಣಿ ಟ್ವೀಟ್​ ಮೂಲಕ ಕಾಂಗ್ರೆಸ್ ಸರ್ಕಾರದ​ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net