VIDEO| ಸಿಂಹಗಳಿಂದ ತಪ್ಪಿಸಿಕೊಳ್ಳಲು ಭರ್ಜರಿ ಉಪಾಯ ಮಾಡಿದ ಕೋತಿಗಳು

Baboons
Published on

ದಕ್ಷಿಣ ಆಫ್ರಿಕಾ: ಘಟನೆಯೊಂದರಲ್ಲಿ ಕೋತಿಗಳು ಸಿಂಹಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್​ ಆಗಿರುವ ಸನ್ನಿವೇಶ ದಕ್ಷಿಣ ಆಫ್ರಿಕಾದ ಪ್ರಾಂತ್ಯ ಒಂದರಲ್ಲಿ ನಡೆದಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋವನ್ನು ಲೇಟೆಸ್ಟ್​ ಸೈಟಿಂಗ್ಸ್​ ಎಂಬ ಖಾತೆಯಿಂದ ಅಪ್ಲೋಡ್​ ಮಾಡಲಾಗಿದ್ದು, ಕೋತಿಗಳ ಚಾಣಾಕ್ಷ ನಡೆಗೆ ನೆಟ್ಟಿಗರು ಫಿದಾ ಆಗಿದ್ಧಾರೆ.

ವಿಡಿಯೋದಲ್ಲಿ ಏನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲಗ್​ ಆಗಿರುವ ವಿಡಿಯೋದಲ್ಲಿ ಸಿಂಹಗಳಲ ಹಿಂಡೊಂದು ಕೋತಿಗಳ ಗುಂಪಿನ ಮೇಲೆ ದಾಳಿ ಮಾಡುತ್ತದೆ. ಆಗ ಸಿಂಹಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಕೋತಿಗಳ ಗುಂಪು ಸೇತುವೆಯ ಅಡಿಯಲ್ಲಿ ಅಡಗಿ ಕುಳಿತುಕೊಳ್ಳುತ್ತಾವೆ.

ಸೇತುವೆಯ ಮೇಲ್ಭಾಗದಲ್ಲಿ ಸಿಂಹಗಳು ತಮ್ಮ ಬೇಟೆಗಾಗಿ ಹೊಂಚು ಹಾಕಿ ಕಾಯುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಆದರೆ, ಅದೇ ಸೇತುವೆಯ ಕೆಳಭಾಗದಲ್ಲಿ ಕೋತಿಗಳು ಅವಿತುಕೊಂಡು ಸಿಂಹಕ್ಕೆ ಚಳ್ಳೆಹಣ್ಣು ತಿನ್ನಿಸುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ನೆಟ್ಟಿಗರು ಫಿದಾ

ಕೊನೆಗೆ ಒಂದು ಕೋತಿಯೂ ಸೇತುವೆಯ ಮೇಲ್ಭಾಗಕ್ಕೆ ಬರಲು ಯತ್ನಿಸುತ್ತದೆ. ಆದರೆ, ಸಿಂಹ ಇರುವುದನ್ನು ಗಮನಿಸಿ ವಾಪಸ್​ ತೆರಳುತ್ತದೆ. ತನ್ನ ಬೇಟೆಗಾಗಿ ತುಂಬಾ ಹೊತ್ತು ಹೊಂಚು ಹಾಕಿ ಬಳಿಕ ಏನು ಸಿಗದೆ ಸಿಂಹಗಳು ವಾಪಸ್​ ತೆರಳುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ವೈರಲ್​ ಆಘಿರುವ ವಿಡಿಯೋ ಕುರಿತು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದು, ಸಿಂಹಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಮಂಗಗಳ ಬುದ್ದಿವಂತಿಕೆಗೆ ಸಲಾಂ ಎಂದಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net