ಪಿಯು ವಿದ್ಯಾರ್ಥಿ ಜತೆ 3 ಮಕ್ಕಳ ತಾಯಿ ಪರಾರಿ! 4 ತಿಂಗಳು ಸಂಸಾರ ನಡೆಸಿದವರು ಸಿಕ್ಕಿಬಿದ್ದಿದ್ದೇ ರೋಚಕ! Student

Student
Published on

Student : 36 ವರ್ಷದ ವಿವಾಹಿತ ಮಹಿಳೆಯ ಜತೆ ಓಡಿ ಹೋಗಿದ್ದ ಪ್ರಥಮ ವರ್ಷದ ಪಿಯು ವಿದ್ಯಾರ್ಥಿ (16) ಯನ್ನು ಅಪರಾಧ ವಿಭಾಗದ ಮಾನವ ಕಳ್ಳಸಾಗಣೆ ವಿರೋಧಿ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

3 ಮಕ್ಕಳ ತಾಯಿಯಾಗಿರುವ ಮಹಿಳೆ, ಹುಡುಗನ ನೆರೆಹೊರೆಯಲ್ಲಿ ವಾಸಿಸುತ್ತಿದ್ದಳು. ಆಗಾಗ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಳು. ಅದೇ ದೇವಸ್ಥಾನಕ್ಕೆ ಆ ಹುಡುಗನು ಸಹ ಆಗಾಗ ಭೇಟಿ ನೀಡುತ್ತಿದ್ದ. ಪಕ್ಕದ ಮನೆಯವರಾದ್ದರಿಂದ ಹುಡುಗನ ತಂದೆ ಆ ಮಹಿಳೆಯ ಜತೆ ತನ್ನ ಮಗಳ ಅನಾರೋಗ್ಯದ ಬಗ್ಗೆ ಮಾತನಾಡುತ್ತಿದ್ದರು. ಇದರ ನಡುವೆ ಆ ಹುಡುಗನಿಗೆ ಮಹಿಳೆಯ ಜತೆ ಸ್ನೇಹ ಬೆಳೆಯಿತು. ಇದೇ ಸ್ನೇಹ ಇಬ್ಬರ ನಡುವೆ ಆತ್ಮೀಯತೆಯನ್ನು ಬೆಳೆಸಿತು.

ಮಹಿಳೆಯ ಜತೆ ತನ್ನ ಮಗ ತುಂಬಾ ಸಲುಗೆಯಿಂದ ಇರುವುದನ್ನು ತಂದೆ ಗಮನಿಸಿದ. ಆಕೆಯ ಮನೆಗೆ ಮಗ ಹೋಗುವುದನ್ನು ಅನೇಕ ಬಾರಿ ತಂದೆ ತಡೆದಿದ್ದ. ಮನೆಗೆ ಹೋದಾಗಾಲೂ ಗದರಿ ವಾಪಸ್​ ಕರೆತಂದಿದ್ದ. ಆದರೂ, ಆ ಹುಡುಗ ಮಹಿಳೆಯ ಮನೆಗೆ ಹೋಗುವುದನ್ನು ನಿಲ್ಲಿಸಿರಲಿಲ್ಲ. ಹೀಗಾಗಿ, ತನ್ನ ಮಗನನ್ನು ಮಹಿಳೆಯಿಂದ ದೂರವಿಡಲು ಹಳೆಯ ಮಂಗಳವಾಡಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸಿದನು. ಆದರೆ, ಅವರಿಬ್ಬರು ಓಡಿ ಹೋಗಲು ನಿರ್ಧರಿಸಿದರು.

ಆ ಮಹಿಳೆ ಮತ್ತು ವಿದ್ಯಾರ್ಥಿ ಓಡಿಹೋದ ನಂತರ, ಆತನ ಪಾಲಕರು ಲಕಡ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅಪಹರಣ ಪ್ರಕರಣ ದಾಖಲಾಯಿತು. ಮತ್ತೊಂದೆಡೆ, ಮಹಿಳೆಯ ಕುಟುಂಬವು ಕೂಡ ದೂರು ದಾಖಲಿಸಿತು.

ಡಿಸೆಂಬರ್ 2ರಂದು ಇಬ್ಬರೂ ಓಡಿಹೋದರು. ನಾಲ್ಕು ತಿಂಗಳ ನಂತರ, ಅವರು ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಪತ್ತೆಯಾಗಿದ್ದಾರೆ. ಮಹಿಳೆ ತನ್ನ ಚಿನ್ನದ ಸರವನ್ನು ಮಾರಿ, ಮನೆ ಬಾಡಿಗೆಗೆ ಪಡೆದು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ದಳು. ಮಹಿಳೆಯು ಅಡುಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದಳು. ಇತ್ತ ಆ ಹುಡುಗ ಸರ್ವಿಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ನಾಗ್ಪುರ ಪೊಲೀಸರು ಅವರಿಬ್ಬರು ಇರುವ ಸ್ಥಳವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಹುಡುಗ ತನ್ನ ಸಾಮಾಜಿಕ ಜಾಲತಾಣದಲ್ಲಿ ಹೋದರಿಗೆ ಮಸೇಜ್​ ಕಳುಹಿಸಿದ ಬಳಿಕ ಪೊಲೀಸರು ಅವರ ಲೊಕೇಶನ್​ ಪತ್ತೆಹಚ್ಚಿದರು. ಹುಡುಗನಿಗೆ ಕೌನ್ಸೆಲಿಂಗ್​ ನೀಡಿ ಅವರ ಪಾಲಕರಿಗೆ ಒಪ್ಪಿಸಲಾಗಿದೆ. ಮಹಿಳೆಯನ್ನು ಲಕಡ್‌ಗಂಜ್ ಪೊಲೀಸ್​ ಠಾಣೆಗೆ ಹಸ್ತಾಂತರಿಸಲಾಯಿತು. ಕಿಡ್ನಾಪ್​ ಪ್ರಕರಣ ದಾಖಲಾಗಿದ್ದರಿಂದ ಆಕೆಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. ನ್ಯಾಯಾಲಯ ಆಕೆಗೆ ಜಾಮೀನು ನೀಡಿದೆ.

ಎರಡೂ ಕುಟುಂಬಗಳು ಅವರಿಬ್ಬರು ವಿವಾಹೇತರ ಸಂಬಂಧವನ್ನು ವಿರೋಧಿಸುತ್ತಿವೆ. ಈ ಹಿಂದೆಯೂ ಇಬ್ಬರೂ ಮನೆಯಿಂದ ಓಡಿಹೋಗಿ ನಾಲ್ಕು ದಿನಗಳ ನಂತರ ಹಿಂತಿರುಗಿದ್ದರು. ಮಹಿಳೆಯ ಹಿರಿಯ ಮಗನಿಗೆ 12 ವರ್ಷ. ಓಡಿಹೋದ ಹುಡುಗನಿಗಿಂತ 4 ವರ್ಷ ಚಿಕ್ಕವನು. ಈ ಪ್ರಕರಣ ಇದೀಗ ಸ್ಥಳೀಯವಾಗಿ ಭಾರಿ ಚರ್ಚೆಯಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net