ಕಡೆಗೂ ಅದೊಂದು ಫೋಟೋ ಡಿಲೀಟ್ ಮಾಡಿದ ನಾಗಚೈತನ್ಯ! ಈಗ ಉಳಿದಿರುವುದು ಆ ಸಿನಿಮಾ ಪೋಸ್ಟರ್​ ಮಾತ್ರ | Photo

photo
Published on

ಆಂಧ್ರಪ್ರದೇಶ: ಎರಡು ವರ್ಷಗಳ ಕಾಲ ಪ್ರೀತಿಸಿ, ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ, ಅಂತಿಮವಾಗಿ ವಿಚ್ಛೇದನ ಪಡೆಯುವ ಮೂಲಕ ದೂರ ಉಳಿದ ತೆಲುಗು ನಟ ನಾಗಚೈತನ್ಯ ಮತ್ತು ನಟಿ ಸಮಂತಾ ರುತು ಪ್ರಭು ಸದ್ಯ ಜಾಲತಾಣಗಳ ಆಹಾರ ಆಗಿರುವುದು ತೀರ ಬೇಸರದ ಸಂಗತಿ. ಪರಸ್ಪರ ಒಪ್ಪಿಗೆಯ ಮೇರೆಗೆ ತಮ್ಮ ದಾಂಪತ್ಯ ಜೀವನಕ್ಕೆ ವಿಚ್ಛೇದನ ಎಂಬ ಪೂರ್ಣವಿರಾಮ ಇಟ್ಟ ಸ್ಟಾರ್​ ಸೆಲೆಬ್ರಿಟಿಗಳಿಗೆ ಇದೀಗ ಟ್ರೋಲ್​ಗಳ ಸುರಿಮಳೆ ಹೆಚ್ಚಾಗಿದೆ. ಅದರಲ್ಲೂ ಪ್ರತ್ಯೇಕವಾಗಿ ನಾಗಚೈತನ್ಯಗೆ (Nagachaitanya Deleted The Photo) ಇದು ಬೆಂಬಿಡದ ಬೇತಾಳದಂತೆ ಕಾಡುತ್ತಿರುವುದಲ್ಲಿ ಅನುಮಾನವಿಲ್ಲ.

ಎರಡನೇ ವಿವಾಹ

ಸಮಂತಾ ಜತೆಗೆ ವಿಚ್ಛೇದನ ಪಡೆದುಕೊಂಡಿದ್ದು ಎಷ್ಟು ಬೇಸರ ಮೂಡಿಸಿತ್ತೋ ಅದು ದುಪ್ಪಟ್ಟಾಗಿದ್ದು, ನಟನ ಮತ್ತೊಂದು ಮದುವೆಯ ನಡೆ. ನಟಿ ಶೋಭಿತಾ ಧೂಳಿಪಾಲ ಅವರನ್ನು ವಿವಾಹ ಆಗುವುದಾಗಿ ಒಂದು ಪೋಸ್ಟ್​ ಮೂಲಕ ಜಾಲತಾಣಗಳಲ್ಲಿ ಅಧಿಕೃತವಾಗಿ ತಿಳಿಸಿದ ದಿನದಿಂದಲೂ ನಟ ನಾಗಚೈತನ್ಯ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಲು ಶುರುವಾಯಿತು. ನಾಗಚೈತನ್ಯ ಮತ್ತು ಶೋಭಿತಾ ವಿರುದ್ಧ ಕಿಡಿಕಾರಿದ ಸಮಂತಾ ಫ್ಯಾನ್ಸ್ ಹಾಗೂ ನೆಟ್ಟಿಗರು, ನಟನ ಶೀಘ್ರ ಎರಡನೇ ವಿವಾಹ ಕುರಿತಂತೆ ತೀವ್ರ ವ್ಯಂಗ್ಯವಾಡಿದ್ದರು.

actress

ಆ ಒಂದು ಫೋಟೋ ಡಿಲೀಟ್

ತನ್ನ ಹಾಗೂ ಸಮಂತಾ ವಿಚ್ಛೇದನ ವಿಷಯ ಮುಂದಿಟ್ಟು ವ್ಯಾಪಕವಾಗಿ ಟೀಕೆ ಮಾಡಿದ ನೆಟ್ಟಿಗರ ವಿರುದ್ಧ ಹೆಚ್ಚೇನು ಮಾತನಾಡದ, ಪ್ರತಿಕ್ರಿಯಿಸದ ನಾಗಚೈತನ್ಯ, ತಮ್ಮ ಅಧಿಕೃತ ಜಾಲತಾಣ ಖಾತೆಗಳಿಂದ ಮಾಜಿ ಪತ್ನಿಯೊಂದಿಗಿದ್ದ ಅಷ್ಟು ಫೋಟೋಗಳನ್ನು ಡಿಲೀಟ್ ಮಾಡಿ, ಅವರನ್ನು ಅನ್​ಫಾಲೋ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಸ್ಯಾಮ್ ಅಭಿಮಾನಿಗಳು, ನಟನಿಗೆ ಆತ ಉಳಿಸಿಕೊಂಡಿದ್ದ ಆ ಒಂದು ಫೋಟೋವನ್ನು ಡಿಲೀಟ್ ಮಾಡಿ ಎಂದು ಬ್ಯಾಕ್ ಟು ಬ್ಯಾಕ್​ ಒತ್ತಾಯಿಸಿದ್ದರು. ನಿಮಗೆ ಸಮಂತಾ ಬೇಡ ಅಂದಮೇಲೆ ಅವರೊಂದಿಗೆ ಇರುವ ಅದೊಂದು ಫೋಟೋ ಏಕೆ? ಅದನ್ನು ಈ ಕೂಡಲೇ ಡಿಲೀಟ್ ಮಾಡಿಬಿಡಿ ಎಂದು ಆಗ್ರಹಿಸಿದ್ದರು.

ಇದ್ಯಾಕೆ ಈಗ ದಿಢೀರ್​ ಡಿಲೀಟ್

ಇಷ್ಟಾದರೂ ಯಾರೊಬ್ಬರ ಮಾತಿಗೂ ಮಣಿಯದೆ ಅದೊಂದು ಫೋಟೋವನ್ನು ಹಾಗೆಯೇ ತಮ್ಮ ಖಾತೆಯಲ್ಲಿ ಉಳಿಸಿಕೊಂಡಿದ್ದ ನಾಗಚೈತನ್ಯ, ಇದೀಗ ಕಡೆಗೂ ಆ ಛಾಯಾಚಿತ್ರವನ್ನು ಡಿಲೀಟ್ ಮಾಡಿ, ಸಮಂತಾ ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ. ಅಸಲಿಗೆ ಇಷ್ಟು ದಿನ ಫೋಟೋ ತೆಗೆಯದ ನಟ ಇದ್ಯಾಕೆ ಈಗ ದಿಢೀರ್ ಡಿಲೀಟ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಸಿಕ್ಕ ಉತ್ತರ ಅವರ ಎರಡನೇ ಮದುವೆ.

ಚಿತ್ರದ ಫೋಸ್ಟರ್ ಮಾತ್ರ ಬಾಕಿ

ಹೌದು, ಶೋಭಿತಾ ಅವರೊಂದಿಗೆ ಸಪ್ತಪದಿ ತುಳಿಯಲು ಎದುರುನೋಡುತ್ತಿರುವ ನಟ, ಈಗ ಆ ಫೋಟೋ ಡಿಲೀಟ್ ಮಾಡಿದ್ದಾರೆ. ಸದ್ಯ ನಟನ ಖಾತೆಯಲ್ಲಿ ಈಗ ಸಮಂತಾ ಜತೆಗಿರುವ ಯಾವುದೇ ಫೋಟೋಗಳಿಲ್ಲ. ಆದ್ರೆ, ಅವರಿಬ್ಬರು ಒಟ್ಟಿಗೆ ನಟಿಸಿದ 'ಮಜ್ಲಿ' ಚಿತ್ರದ ಫೋಸ್ಟರ್ ಮಾತ್ರ ಬಾಕಿ ಉಳಿದಿದೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net