ನಾ.ಸು.ಹರ್ಡೀಕರ್ ಆದರ್ಶ ಪಾಲಿಸಿ

hardekar
ಚಿಕ್ಕಮಗಳೂರಿನ ಭಾರತ ಸೇವಾದಳ ಕಚೇರಿಯಲ್ಲಿ ನಾ.ಸು.ಹರ್ಡೀಕರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಜಗದೀಶಾಚಾರ್, ಹಂಪಯ್ಯ, ಬಿ.ಎಚ್.ನರೇಂದ್ರ, ಚಂದ್ರಕಾಂತ, ರವಿಕುಮಾರ್ ಇತರರಿದ್ದರು.
Published on

ಚಿಕ್ಕಮಗಳೂರು: ಅಪ್ರತಿಮ ದೇಶಭಕ್ತ ನಾ.ಸು.ಹರ್ಡೀಕರ್ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ತಿಳಿಸಿದರು.

ನಗರದ ಭಾರತ ಸೇವಾದಳ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡೀಕರ್ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹರ್ಡೀಕರ್ ಅಪ್ರತಿಮ ದೇಶಭಕ್ತರಾಗಿದ್ದರು. ಅವರು ಭಾರತ ಸೇವಾದಳ ಸ್ಥಾಪಿಸಿ ಅದರ ಮೂಲಕ ಲಕ್ಷಾಂತರ ರಾಷ್ಟ್ರಭಕ್ತರನ್ನು ಸೃಷ್ಟಿಸಿ ಸ್ವಾತಂತ್ರ ಚಳವಳಿಗೆ ಕಳಿಸಿಕೊಟ್ಟರು. ಇದರಿಂದ ದೇಶ ಸ್ವಾತಂತ್ರ್ಯ ಗಳಿಸಲು ಸುಲಭವಾಯಿತು ಎಂದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಎಚ್.ನರೇಂದ್ರ ಮಾತನಾಡಿ, ನಾ.ಸು.ಹರ್ಡೀಕರ್ ಅವರಂತಹ ದೇಶಭಕ್ತರನ್ನು ಇಂದಿನ ಪೀಳಿಗೆ ಸ್ಮರಿಸಬೇಕು. ಅವರು ಹಾಕಿಕೊಟ್ಟ ಹಾದಿಯಲ್ಲೇ ಸಾಗಿದಾಗ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಸೇವಾದಳ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಜಿಲ್ಲಾ ಸಂಘಟಕ ಚಂದ್ರಕಾಂತ, ತಾಲೂಕು ಅಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷ ಬಿ.ಆರ್.ಜಗದೀಶ್, ಜಯಣ್ಣ, ಸೇವಾದಳ ಶಿಕ್ಷಕಿ ಮೀನಾಕ್ಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net