

ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನಾಯಕರ ಸಭೆ ಕುರಿತು ಮಾತನಾಡಿರುವ ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್, ಅಲ್ಲಿ ನಡೆಯುತ್ತಿರುವುದು ಲೋಕಸಭೆಯಲ್ಲಿ ಹೆಚ್ಚು ಸೀಟ್ ಗೆಲ್ಲಬೇಕು, ಅಧಿಕ ಸೂಟ್ ಕೇಸ್ ಪೂರೈಕೆ ಮಾಡಿಕೊಡಬೇಕು ಎಂಬುದು ಎಂದು ನೇರವಾಗಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಮೇಲೆ ಜನರಿಗೆ ಅನುಕೂಲ ಆಗಬಹುದು ಎಂಬ ನಿರೀಕ್ಷೆ ಹೆಚ್ಚಿತ್ತು. ಆದ್ರೆ, ಎಲ್ಲಾ ಸಚಿವರು ದೆಹಲಿಗೆ ಹೋಗಿ ಕುಳಿತಿದ್ದಾರೆ. ರಾಜ್ಯದಲ್ಲಿ ಬರವಿದೆ, ಕೆಲವು ಕಡೆ ಭಾರೀ ಮಳೆಯಿದೆ, ಹಲವು ಶಾಸಕರು ಸಚಿವರ ವಿರುದ್ಧವೇ ಪತ್ರ ಬರೆದಿದ್ದಾರೆ. ಜನರು ಇವರಿಗೆ ಲೋಕಸಭೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಈ ಸರ್ಕಾರ ನಾವು ದಲಿತಪರ ಎಂದು ಹೇಳುತ್ತದೆ. ಆದ್ರೆ, 11 ಸಾವಿರ ಕೋಟಿ ರೂ. ದಲಿತರ ಹಣ ಬಳಸಿಕೊಳ್ಳುತ್ತಿದೆ. ವಿಪರೀತ ಕೊಳ್ಳೆ ಹೊಡೆಯುತ್ತಿದೆ, ಇವರಿಗೆ ನಾಚಿಕೆಯಾಗಬೇಕು, ಧಿಕ್ಕಾರ ಎಂದು ಕಾಂಗ್ರೆಸ್ ವಿರುದ್ಧ ಎನ್. ರವಿಕುಮಾರ್ ನೇರ ವಾಗ್ದಾಳಿ ನಡೆಸಿದ್ದಾರೆ.