

Mystery Death: ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಕೇರಳದ ಕಾಕನಾಡ್ ಸೆಂಟ್ರಲ್ ಅಬಕಾರಿ ಕ್ವಾರ್ಟರ್ಸ್‌ನಲ್ಲಿ ವರದಿಯಾಗಿದೆ. ತಾಯಿ, ಮಗ ಮತ್ತು ಸಹೋದರಿ ಮೂವರು ಮನೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಅವರ ಸಾವಿನ ಹಿಂದಿರುವ ಅಸಲಿ ಕಾರಣವೇನು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ, ಕುಟುಂಬಸ್ಥರ ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ ಬಳಿಕ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ.
ಬಿಳಿ ಬಟ್ಟೆಯಿಂದ ಮುಚ್ಚಲಾದ ಹಾಸಿಗೆಯ ಮೇಲೆ ಶಕುಂತಲಾ ಅಗರ್ವಾಲ್ (77) ದೇಹ ಪತ್ತೆಯಾಗಿದ್ದು, ಅವರ ಪುತ್ರ ಜಿಎಸ್‌ಟಿ ಹೆಚ್ಚುವರಿ ಆಯುಕ್ತರಾದ ಮನೀಶ್ ವಿಜಯ್ (43) ಮತ್ತು ಸಹೋದರಿ ಶಾಲಿನಿ ವಿಜಯ್ (49) ಅವರವರ ರೂಮ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂವರ ಸಾವಿನ ಹಿಂದೆ ಯಾರದ್ದೋ ಕೈವಾಡ ಇರಬಹುದು ಎಂದು ಶಂಕಿಸಿದ್ದ ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ಇದೀಗ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಾದ ವಿಷಯ ಕಂಡು ಅಚ್ಚರಿ ಮೂಡಿಸಿದೆ. ಕಾರಣ, ಮೂವರೂ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.
ಶಕುಂತಲಾ ಸಾವನ್ನಪ್ಪಿದ ಸುಮಾರು ನಾಲ್ಕು ಗಂಟೆಗಳ ಬಳಿಕ ಅವರ ಇಬ್ಬರು ಮಕ್ಕಳು ಸಾವನ್ನಪ್ಪಿರುವುದು ತೀರ ಆಶ್ಚರ್ಯ ಮೂಡಿಸಿದೆ. ದೇಹದ ಒಳ ಅಂಗಗಳ ರಾಸಾಯನಿಕ ಪರೀಕ್ಷೆಗಳ ವರದಿ ಹೊರಬಿದ್ದ ನಂತರವೇ ಅವರ ಅಸ್ವಾಭಾವಿಕ ಸಾವಿಗೆ ಕಾರಣವೇನು ಎಂಬುದು ಮತ್ತಷ್ಟು ಸ್ಪಷ್ಟವಾಗಲಿದೆ. ಸಾಯುವ ಕೆಲವು ಸಮಯ ಮುನ್ನ ಶಕುಂತಲಾ ಹೊಟ್ಟೆ ತುಂಬ ಊಟ ಮಾಡಿರುವುದು ತಿಳಿದುಬಂದಿದೆ. ಶಾಲಿನಿ ಕೂಡ ಅದೇ ಆಹಾರವನ್ನು ಸ್ವಲ್ಪ ಸೇವಿಸಿದ್ದಾರೆ. ಆದ್ರೆ, ಮನೀಶ್ ಮಾತ್ರ ಏನ್ನನ್ನೂ ಸೇವಿಸಿಲ್ಲ. ಅಸಲಿಗೆ ಅವರ ಹೊಟ್ಟೆ ಖಾಲಿಯಿತ್ತು ಎಂಬ ಸಂಗತಿ ವರದಿಯಲ್ಲಿದೆ.
ತೀವ್ರ ಮಧುಮೇಹದಿಂದ ಬಳಲುತ್ತಿದ್ದ ಶಕುಂತಲಾ ನೇಣು ಬಿಗಿದುಕೊಳ್ಳಲು ಸಾಧ್ಯವಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಮೂವರೂ ನೇಣು ಬಿಗಿದುಕೊಂಡಿದ್ದರೂ, ಮನೆಯಲ್ಲಿ ಕೇವಲ ಎರಡು ಬಟ್ಟೆಯ ಕುಣಿಕೆಗಳು ಮಾತ್ರ ಪತ್ತೆಯಾಗಿವೆ. ಶಾಲುಗಳಿಂದ ಮಾಡಿಕೊಂಡ ಕುಣಿಕೆಗಳು ಮತ್ತು ಅವುಗಳನ್ನು ಚಾವಣಿಯ ಮೇಲಿನ ಕೊಕ್ಕೆಗಳಿಗೆ ಕಟ್ಟಿದ್ದ ರೀತಿ ಒಂದೇ ಆಗಿರುವುದರಿಂದ, ಎರಡನ್ನೂ ಒಬ್ಬರೇ ಕಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರ್ ಕೆ.ಪದ್ಮಾವತಿ, ಆಡಿಟ್ ಕಮಿಷನರ್ ರಾಜೀವ್ ಕುಮಾರ್, ಕೇಂದ್ರ ಜಿಎಸ್‌ಟಿ ಪ್ರಧಾನ ಆಯುಕ್ತ ಪಿ.ಆರ್.ಲಕ್ರೆಡಿ, ಸೇರಿಸಿ. ಜನರಲ್ ಡಾ.ಟಿ.ಟಿಜು, ತೃಕ್ಕಾಕರ ಪುರಸಭೆ ಅಧ್ಯಕ್ಷೆ ರಾಧಾಮಣಿ ಪಿಳ್ಳೈ ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ,(ಏಜೆನ್ಸೀಸ್).