ಕುಟುಂಬ ಯೋಜನೆ ಅನುಷ್ಠಾನದಿಂದಾಗಿ ರಾಜ್ಯದಲ್ಲಿ ಲೋಕಸಭಾ ಸ್ಥಾನಗಳ ಇಳಿಕೆ ಸಾಧ್ಯತೆ; ಎಂ.ಕೆ ಸ್ಟಾಲಿನ್​​​​ | MK Stalin

blank

ಚೆನ್ನೈ: ತಮಿಳುನಾಡಿನಲ್ಲಿ ಕುಟುಂಬ ಯೋಜನೆ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದರಿಂದ ಸಂಸದೀಯ ಸ್ಥಾನಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್(MK Stalin) ಭಾನುವಾರ(ಫೆಬ್ರವರಿ 23) ಹೇಳಿದ್ದಾರೆ.

blank

ಇದನ್ನು ಓದಿ: ಭಾರತ ಅಥವಾ ಚೀನಾ ಯಾರನ್ನೂ ಬಿಡುವುದಿಲ್ಲ; ನಾವು ಅದನ್ನು ಮಾಡಲು ಸಿದ್ಧ.. ಡೊನಾಲ್ಡ್​ ಟ್ರಂಪ್​ ಹೇಳಿದ್ದೇನು? | Donald Trump

ಕೊಳತ್ತೂರಿನಲ್ಲಿ ನಡೆದ ಪಕ್ಷದ ಹಿರಿಯ ಕಾರ್ಯಕರ್ತರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಎಂ.ಕೆ ಸ್ಟಾಲಿನ್​​, ದಂಪತಿ ತಮ್ಮ ಭವಿಷ್ಯದ ಮಕ್ಕಳಿಗೆ ಸರಿಯಾದ ತಮಿಳು ಹೆಸರುಗಳನ್ನು ಆಯ್ಕೆ ಮಾಡುವಂತೆ ಪ್ರೋತ್ಸಾಹಿಸಿದರು. ಅಲ್ಲಿ ನೆರದಿದ್ದವರಿಗೆ ಕುಟುಂಬ ಯೋಜನಾ ಕಾರ್ಯಕ್ರಮವು ಕುಟುಂಬದ ಗಾತ್ರ ನಿರ್ವಹಣೆಯನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದರು. ನಾವು ಅದನ್ನು ನಿರಂತರವಾಗಿ ಸರಿಯಾಗಿ ಅನುಸರಿಸಿದ್ದರಿಂದ ಕ್ಷೇತ್ರ ಪುನರ್ವಿಂಗಡಣೆಯ ಭಾಗವಾಗಿ ಸಂಸದೀಯ ಸ್ಥಾನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪರಿಸ್ಥಿತಿ ಇದೆ ಎಂದು ಹೇಳಿದರು.

ಪ್ರಸ್ತುತ 39 ಲೋಕಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡು, ಕ್ಷೇತ್ರ ಪುನರ್ವಿಂಗಡಣೆಯ ನಂತರ ಅದರ ಸಂಖ್ಯೆಯಲ್ಲಿನ ಯಾವುದೇ ಕಡಿತವನ್ನು ವಿರೋಧಿಸುತ್ತಿದೆ. ರಾಜ್ಯವು 2026ರಲ್ಲಿ ವಿಧಾನಸಭಾ ಚುನಾವಣೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಸ್ಟಾಲಿನ್ ತಮ್ಮ ರಾಜ್ಯದ ಜನರು ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಮನವಿ ಮಾಡಿ ಗಡಿ ವಿಂಗಡಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇತ್ತೀಚಿನ ದಿನಗಳಲ್ಲಿ ನಾವು ಯಾರಿಗೂ ಜೀವನದಲ್ಲಿ 16 ರೀತಿಯ ಸಂಪತ್ತು ಸಿಗಬೇಕೆಂದು ಬಯಸುವುದಿಲ್ಲ. ಸಣ್ಣ ಕುಟುಂಬದೊಂದಿಗೆ ಸಂತೋಷದಿಂದ ಬದುಕಬೇಕೆಂದು ಮಾತ್ರ ಆಶಿಸುತ್ತೇವೆ. ಆದರೆ ಸಂಸತ್ ಸ್ಥಾನಗಳ ಸಂಖ್ಯೆಯಲ್ಲಿನ ಕಡಿತದಂತಹ ಸಂದರ್ಭಗಳನ್ನು ಎದುರಿಸಿದಾಗ ನಾವು ಸಣ್ಣ ಕುಟುಂಬಗಳನ್ನು ಏಕೆ ಹೊಂದಬೇಕು ಎಂದು ಯೋಚಿಸುವಂತೆ ಮಾಡಲಾಗುತ್ತದೆ? ಎಂದು ಅವರು ಹೇಳಿದ್ದರು.

ಜನಸಂಖ್ಯೆಯ ಆಧಾರದ ಮೇಲೆ ಸಂಸದರ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ದಕ್ಷಿಣ ಭಾರತದ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ರಾಜಕೀಯ ಪಿತೂರಿಯನ್ನು ನಾವು ಸೋಲಿಸಬೇಕಾಗುತ್ತದೆ. ರಾಜಕೀಯವಾಗಿ ಜಾಗೃತವಾಗಿರುವ ತಮಿಳುನಾಡಿಗೆ ಅನ್ಯಾಯ ಮಾಡುವ ಪ್ರಯತ್ನವನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿದ್ದರು.(ಏಜೆನ್ಸೀಸ್​​)

Delhi Assembly | ವಿರೋಧ ಪಕ್ಷದ ನಾಯಕಿಯಾಗಿ ಅತಿಶಿ ಆಯ್ಕೆ; ಎಎಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank