ಜನರ ತಲೆಗೆ ಹುಳ ಬಿಟ್ಟ ಈ ಜೀವಿ ಯಾವುದು ಗುರುತಿಸುವಿರಾ?: 15 ಅಡಿ ಉದ್ದ, ಎಲ್ಲವೂ ನಿಗೂಢ!

Mystirious
Published on

ನವದೆಹಲಿ: ಮರಳಿನ ಮೇಲೆ ಬಿದ್ದಿರುವ 15 ಅಡಿ ಉದ್ದದ ನಿಗೂಢ ಜೀವಿಯನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದ ಘಟನೆ ಬ್ರಿಟೀಷ್​ ಬೀಚ್​ನಲ್ಲಿ ನಡೆದಿದೆ. ಇಂಗ್ಲೆಂಡ್​ನ ಐನ್ಸ್​ಡೇಲ್ ಬೀಚ್​ನಲ್ಲಿ ಜುಲೈ 29ರಂದು ನಿಗೂಢ ಜೀವಿಯ ಕಳೇಬರಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮೃತ ಜೀವಿಯು ನಾಲ್ಕು ಫ್ಲಿಪ್ಪರ್ಸ್​(ತೊಳೆಗಾಲು)ಗಳನ್ನು ಹೊಂದಿದ್ದಲ್ಲದೆ, ನೋಡಲು ವಿಲಕ್ಷಣವಾಗಿತ್ತು. ಸುಮಾರು 15 ಅಡಿ ಉದ್ದ, ಮೈತುಂಬಾ ರೋಮಗಳನ್ನು ಹೊಂದಿದ್ದಲ್ಲದೆ, ತುಂಬಾ ದುರ್ನಾಥ ಬೀರುತ್ತಿತ್ತು. ಬಹುಶಃ ಮರಿಗೆ ಜನ್ಮ ನೀಡಿ ಸಾವಿಗೀಡಾಗಿರುವ ಸ್ಥಿತಿಯಲ್ಲಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ನಿಗೂಢ ಜೀವಿಯ ಫೋಟೋವನ್ನು ಐನ್ಸ್​ಡೇಲ್ ಕಮ್ಯುನಿಟಿ ಗ್ರೂಪ್​ ಫೇಸ್​ಬುಕ್​ ಫೇಜ್​ನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. 500 ಕ್ಕೂ ಹೆಚ್ಚು ಕಾಮೆಂಟ್ಸ್​ ಹರಿದುಬಂದಿದೆ. ಅನೇಕ ನೆಟ್ಟಿಗರು ಜೀವಿ ಯಾವುದು ಎಂದು ಪತ್ತೆಹಚ್ಚಲು ಪ್ರಯತ್ನವನ್ನು ಮಾಡುತ್ತಿದ್ದಾರೆ.

ಕೆಲವರು ಇದೊಂದು ಉಣ್ಣೆಯ ಮಹಾಗಜ ಎಂದು ಪ್ರಶ್ನಿಸಿದರೆ, ಅದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಹೌದು, ನೋಡಲು ಅದೇ ರೀತಿ ಇದೆ ಎಂದಿದ್ದಾರೆ. ಬಹುಶಃ ತಿಮಿಂಗಿಲ ಹಸುವನ್ನು ತಿಂದಿರಬಹುದು ಎಂದು ಜೋಕ್ಸ್​ ಮಾಡಿದ್ದಾರೆ. ಅದು ಬಹುಶಃ ಕುದುರೆ, ಗೂಳಿ ಅಥವಾ ಹಸು ಆಗಿರಬಹುದು ಎಂದು ಕೆಲ ನೆಟ್ಟಿಗರು ಹೇಳಿದ್ದಾರೆ. ಹೀಗೆ ತಮಗೆ ತೋಚಿದಂತೆ ನಿಗೂಢ ಜೀವಿಯನ್ನು ಹೆಸರಿಸಲು ಯತ್ನಿಸಿದ್ದಾರೆ.

ಈ ಕ್ಷಣದವರೆಗೂ ಆ ಜೀವಿ ಯಾವುದು ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅಲ್ಲದೆ, ತುಂಬಾ ಕೊಳೆತಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಗುರುತಿಸುವುದು ಕಷ್ಟಕರ ಎಂದಿದ್ದಾರೆ. ಆದರೂ ಪ್ರಯತ್ನ ನಡೆಯುತ್ತಿದೆ. ಅದರೊಂದಿಗೆ ಕಳೇಬರವನ್ನು ಬೀಚ್​ನಿಂದ ತೆಗೆದು ಹೂಳಲಾಗಿ ಎಂದಿದ್ದಾರೆ. ಆದರೆ, ಫೋಟೋ ಮಾತ್ರ ಇನ್ನು ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net