More

    ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ: ರಾವಣ ದೇಗುಲದ ಅರ್ಚಕರಲ್ಲಿ ಸಂಭ್ರಮ, ಲಡ್ಡು ವಿತರಣೆಗೆ ಸಿದ್ಧತೆ

    ಅಯೋಧ್ಯೆ: ರಾಮಮಂದಿರ ಭೂಮಿಪೂಜೆ ನಾಳೆ ನಡೆಯಲಿದ್ದು, ಶ್ರೀರಾಮನ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ನಾಳೆ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಲವು ಸಾಧು, ಸಂತರು, ರಾಜಕೀಯ ನಾಯಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.

    ಸದ್ಯ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಅರ್ಚಕರು ಸೇರಿ ಎಲ್ಲರೂ ಹಬ್ಬದ ಮೂಡ್​​ನಲ್ಲಿ ಇದ್ದಾರೆ. ಆದರೆ ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಅಯೋಧ್ಯೆಯಲ್ಲಿ ಇರುವ ಸಂಭ್ರಮದಷ್ಟೇ, ಗೌತಮಬುದ್ಧ ನಗರದಲ್ಲಿರುವ ರಾವಣನ ಜನ್ಮಸ್ಥಳವಾದ ಬಿಸ್ರಾಖ್​​ನಲ್ಲಿ ಕೂಡ ಸಡಗರ ಮನೆ ಮಾಡಿದೆ.

    ಬಿಸ್ರಾಖ್​​ನಲ್ಲಿ ರಾವಣನ ದೇವಾಲಯವೊಂದಿದ್ದು, ಅದರ ಅರ್ಚಕರೂ ಸಹ ರಾಮಮಂದಿರ ಭೂಮಿ ಪೂಜೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ರಾವಣನ ದೇವಸ್ಥಾನದ ಅರ್ಚಕರಾದ ಮಹಾಂತ್​ ರಾಮ್​ದಾಸ್​ ಅವರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಾಳಿನ ಭೂಮಿಪೂಜೆಯ ಬಗ್ಗೆ ಉತ್ಸುಕನಾಗಿದ್ದೇನೆ. ತುಂಬ ಸಂತೋಷ ಉಂಟಾಗುತ್ತಿದೆ. ನಾಳೆ ಸಮಾರಂಭ ಮುಗಿಯುತ್ತಿದ್ದಂತೆ ಲಡ್ಡು ವಿತರಣೆ ಮಾಡುತ್ತೇನೆ. ಸಂಭ್ರಮವನ್ನು ಆಚರಿಸುತ್ತೇವೆ. ಅಲ್ಲಿ, ಭವ್ಯವಾದ ರಾಮಮಂದಿರ ನಿರ್ಮಾಣ ಆಗುತ್ತಿರುವುದು ತುಂಬ ಸಂತೋಷ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಭಾರತದ ಟೆಕಿಗಳಿಗೆ ಬಿಗ್‌ ಶಾಕ್‌: ಅಮೆರಿಕದ ಅಧ್ಯಕ್ಷರಿಂದ ಮಹತ್ವದ ಆದೇಶಕ್ಕೆ ಸಹಿ

    ಭಗವಾನ್​ ಶ್ರೀರಾಮಚಂದ್ರ ಇಲ್ಲದೆ ಇದ್ದರೆ ರಾವಣನ ಬಗ್ಗೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಹಾಗೇ ರಾವಣನಿಲ್ಲದಿದ್ದರೂ ಶ್ರೀರಾಮನಿಗೆ ಇಷ್ಟು ಪ್ರಸಿದ್ಧಿ ಸಿಗುತ್ತಿರಲಿಲ್ಲ ಎಂದು ಅರ್ಚಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಅಯೋಧ್ಯೆಯನ್ನು ರಾಮಜನ್ಮಭೂಮಿ ಎಂದು ಕರೆಯುವಂತೆ ಬಿಸ್ರಾಖ್​ನ್ನು ರಾವಣಜನ್ಮಭೂಮಿ ಎಂದು ಕರೆಯುತ್ತಾರೆ. ರಾವಣ ಅತ್ಯಂತ ಬುದ್ಧಿವಂತ. ಬಿಸ್ರಾಖ್​ನಲ್ಲಿರುವ ರಾವಣನ ದೇವಸ್ಥಾನದಲ್ಲಿ ಶಿವ, ಪಾರ್ವತಿ, ಕುಬೇರರ ವಿಗ್ರಹಗಳೂ ಇವೆ. ರಾತ್ರಿ ಕೂಡ ದೇಗುಲದ ಬಾಗಿಲು ಮುಚ್ಚುವುದಿಲ್ಲ. ಇಲ್ಲಿಗೆ ಬರುವ ಶೇ.20 ಭಕ್ತಾದಿಗಳು ರಾವಣನ ಪೂಜೆಗಾಗಿಯೇ ಆಗಮಿಸುತ್ತಾರೆ ಎಂದು ಮಹಾಂತ್ ರಾಮದಾಸ್ ತಿಳಿಸಿದ್ದಾರೆ. (ಏಜೆನ್ಸೀಸ್​)

    ಅಮೆರಿಕ ಕೆಲಸಕ್ಕೆ ಗುಡ್​ ಬೈ ಹೇಳಿ ಕನ್ನಡದಲ್ಲೇ ಯುಪಿಎಸ್​ಸಿ ಪರೀಕ್ಷೆ ಬರೆದು ಜಯ ಸಾಧಿಸಿದ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts