More

    ಅಮೆರಿಕ ಕೆಲಸಕ್ಕೆ ಗುಡ್​ ಬೈ ಹೇಳಿ ಕನ್ನಡದಲ್ಲೇ ಯುಪಿಎಸ್​ಸಿ ಪರೀಕ್ಷೆ ಬರೆದು ಜಯ ಸಾಧಿಸಿದ ಯುವಕ!

    ಹಾಸನ: 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷಾ ಫಲಿತಾಂಶವಿಂದು ಪ್ರಕಟವಾಗಿದ್ದು, ಹಾಸನದ ಯುವಕ ಕನ್ನಡದಲ್ಲೇ ಪರೀಕ್ಷೆ ಬರೆದು 594 ರ್ಯಾಂಕ್ ಪಡೆದು ಯಶಸ್ಸು ಗಳಿಸಿದ್ದಾರೆ.

    ಅರಸೀಕೆರೆ ತಾಲ್ಲೂಕಿನ ಹರಳಕಟ್ಟೆ ಗ್ರಾಮದ ಯುವಕ ದರ್ಶನ್​ ನಾಲ್ಕನೇ ಪ್ರಯತ್ನದಲ್ಲಿ ಸಫಲ ಕಂಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿದ ದರ್ಶನ್​, 5ನೇ ತರಗತಿಯಿಂದ 8ನೇ ತರಗತಿವರೆಗೆ ಬಳ್ಳಾರಿಯ ರಾಷ್ಟ್ರೋತ್ತಾನ ಶಾಲೆಯಲ್ಲಿ ಕಲಿತರು.

    ಇದನ್ನೂ ಓದಿ: ಯುಪಿಎಸ್​ಸಿ ಪರೀಕ್ಷೆ-2019 ಫಲಿತಾಂಶ ಪ್ರಕಟ: ಪ್ರದೀಪ್​ ಸಿಂಗ್​ ಟಾಪರ್​

    9 ರಿಂದ 10ನೇ ತರಗತಿ ತಿಪಟೂರಿನ ಎಸ್‌ವಿಪಿ ಶಾಲೆಯಲ್ಲಿ ಓದಿದ ಅವರು 2009ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ, ಇನ್ಫೋಸಿಸ್​ನಲ್ಲಿ ಆರು ವರ್ಷ ಕೆಲಸ ಮಾಡಿ ಬಳಿಕ ಅಮೆರಿಕಕ್ಕೆ ತೆರಳಿದರು. ಅಲ್ಲಿಯೂ ಎರಡೂವರೆ ವರ್ಷ ಕೆಲಸ ಮಾಡಿ, ಕೆಲಸ ಬಿಟ್ಟು ಯುಪಿಎಸ್‌ಸಿ ತಯಾರಿ ನಡೆಸಲು ಆರಂಭಿಸಿದರು.

    ಮೂರು ಪ್ರಯತ್ನದಲ್ಲಿ ವಿಫಲವಾಗಿದ್ದ ದರ್ಶನ್​, ನಾಲ್ಕನೇ ಪ್ರಯತ್ನದಲ್ಲಿ ಸಫಲತೆ ಕಂಡಿದ್ದಾರೆ. ವಿಶೇಷವೆಂದರೆ ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಇದೀಗ ದರ್ಶನ್​ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

    ಬಸವನಾಡಿನ ಯುವತಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಅಕ್ಕನ ಹಾದಿಯಲ್ಲೇ ತಂಗಿಯ ಪಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts