More

    ಸುಂದರ ಮಹಿಳೆಯರನ್ನು ಸಹ ಬಿಡುವುದಿಲ್ಲ! ಐಶ್ವರ್ಯಾ ರೈ ಬಗ್ಗೆ ಗಂಭೀರ ಆರೋಪ ಮಾಡಿದ ನಟಿ ಕಸ್ತೂರಿ

    ನವದೆಹಲಿ: ಸದ್ಯ ಜಗತ್ತಿನಾದ್ಯಂತ ಕಾನ್ಸ್ ಚಿತ್ರೋತ್ಸವದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಈ ಉತ್ಸವಕ್ಕೆ ಹಾಲಿವುಡ್​, ಬಾಲಿವುಡ್​ ಸೇರಿದಂತೆ ವಿವಿಧ ಚಿತ್ರರಂಗದ ನಾಯಕಿಯರು ವೆರೈಟಿ ಬಟ್ಟೆಯಲ್ಲಿ ದರ್ಶನ ಕೊಟ್ಟಿದ್ದಾರೆ. ಒಬ್ಬರಿಗಿಂತ ಒಬ್ಬರು ಅಂದದ ಉಡುಗೆಯಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ. ಇವರಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಕೂಡ ಒಬ್ಬರು. ಕೈಗೆ ಗಾಯವಾಗಿದ್ದರೂ ಐಶ್ವರ್ಯಾ ರೈ ಹಿಂದೆ ಸರಿಯಲಿಲ್ಲ. ಅದ್ಭುತವಾದ ಡ್ರೆಸ್ ಧರಿಸಿ ಎಲ್ಲರ ಮನ ಕದ್ದಿದ್ದಾರೆ. ಇದರ ನಡುವೆ ಇತ್ತೀಚೆಗಷ್ಟೇ ನಟಿ ಕಸ್ತೂರಿ ಶಂಕರ್​ ಐಶ್ವರ್ಯಾ ರೈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

    ವಿಶ್ವ ಸಿನಿಮಾ ಕ್ಷೇತ್ರದ ಪ್ರತಿಷ್ಠೆ ಎನಿಸಿಕೊಂಡಿರುವ ಕಾನ್ಸ್​ ಚಿತ್ರೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಉತ್ಸವದಲ್ಲಿ ದಕ್ಷಿಣ ಭಾರತದ ತಾರೆಯರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದು ವಿಶೇಷ. ಕಳೆದ 19 ವರ್ಷಗಳಿಂದ ಐಶ್ವರ್ಯಾ ರೈ ಈ ಉತ್ಸವದಲ್ಲಿ ಪಾಲ್ಗೊಂಡು ಸದ್ದು ಮಾಡುತ್ತಿದ್ದಾರೆ. ಫ್ರೆಶ್ ಅಂಡ್ ಸ್ಟನ್ನಿಂಗ್ ಲುಕ್​ನಲ್ಲಿ ಬಂದಿದ್ದರು. ಐಶ್ವರ್ಯಾ ರೈ ಜತೆ ಅವರ ಮಗಳು ಕೂಡ ಕಾನ್ಸ್​ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ.

    ಇತ್ತೀಚೆಗಷ್ಟೇ ನಟಿ ಕಸ್ತೂರಿ ಅವರು ಐಶ್ವರ್ಯಾ ರೈ ಬಗ್ಗೆ ಸೆನ್ಸೇಷನಲ್ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸಮಯವು ವಿಶ್ವದ ಅತ್ಯಂತ ಸುಂದರ ಮಹಿಳೆಯನ್ನು ಸಹ ಬಿಡುವುದಿಲ್ಲ. ಹಾಗಾಗಿ ಐಶ್ವರ್ಯಾ ರೈ ಗಡಿಯಾರವನ್ನು ಹಿಂದಕ್ಕೆ ತಿರುಗಿಸುವ ಅಗತ್ಯವಿರಲಿಲ್ಲ. ಅವರು ಸುಂದರವಾಗಿ ಉಳಿಯುತ್ತಿದ್ದರು. ಆದರೆ ಪ್ಲಾಸ್ಟಿಕ್ ಸರ್ಜರಿ ಅವಳ ಸಾರ್ವಕಾಲಿಕ ಸೌಂದರ್ಯವನ್ನು ಹಾಳುಮಾಡಿದೆ ಎಂದು ಕಸ್ತೂರಿ ಶಂಕರ್​ ಅವರು ಎಕ್ಸ್​ ಖಾತೆಯಲ್ಲಿ ಐಶ್ವರ್ಯಾ ರೈ ಫೋಟೋ ಶೇರ್​ ಮಾಡಿಕೊಂಡು ಪೋಸ್ಟ್​ ಮಾಡಿದ್ದಾರೆ.

    ಐಶ್ವರ್ಯಾ ಸೌಂದರ್ಯವನ್ನು ಹಾಳು ಮಾಡಿದ್ದು ಪ್ಲಾಸ್ಟಿಕ್​ ಸರ್ಜರಿ ಎನ್ನುವ ಅರ್ಥದಲ್ಲಿ ಕಸ್ತೂರಿ ಪೋಸ್ಟ್​ ಮಾಡಿದ್ದು, ಇದೀಗ ಈ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಮತ್ತು ಚರ್ಚೆಗೆ ಗ್ರಾಸವಾಗಿದೆ.

    ಕಸ್ತೂರಿ ಅವರ ಕುರಿತು
    ಕಸ್ತೂರಿ ಶಂಕರ್​ ಬಗ್ಗೆ ಹೇಳುವುದಾದರೆ, ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್​ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಕಸ್ತೂರಿ ಅವರಿಗೆ ವಯಸ್ಸು 48 ಆದರೂ ಗ್ಲಾಮರ್​ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ. (ಏಜೆನ್ಸೀಸ್​)

    ಅಷ್ಟೇ ಎಲ್ಲವೂ ಮುಗಿದ ಕತೆ, ಕ್ರಿಕೆಟ್​ಗೆ ಗುಡ್​ಬೈ ಹೇಳುತ್ತೇನೆ… ಕಣ್ಣೀರಿಟ್ಟ ಆರ್​ಸಿಬಿ ಆಟಗಾರ​! ವಿಡಿಯೋ ವೈರಲ್​

    ಐಪಿಎಲ್​ಗೆ ದಿನೇಶ್​ ಕಾರ್ತಿಕ್​ ಗುಡ್​ಬೈ! ಭಾವುಕರಾದ ಡಿಕೆಗೆ ವಿರಾಟ್​ ಕೊಹ್ಲಿ ಸಾಂತ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts