ನಿಮಗೆ ತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಿ: ಪ್ರಮೋದ್ ಮುತಾಲಿಕ್

Pramod Muthalik
Published on

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಆಢಳಿತಾವಧಿಯಲ್ಲಿ ತಂದಿರುವ ಕಾನೂನು ಹಾಗೂ ಯೋಜನೆಗಳನ್ನು ನಿಷೇಧಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಪ್ರಸಾಪಿಸಿದೆ.

ಬಜರಂಗದಳ ಬ್ಯಾನ್ ಮಾಡೋ ಕಾಂಗ್ರೆಸ್ ಪ್ರಣಾಳಿಕೆ ವಿಚಾರವಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಾರವಾಗಿ ಪ್ರತಿಕ್ರೀಯೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್​​ ಅವರು, ಪಿಎಫ್ ಐ ಭಯೋತ್ಪಾದಕ ಸಂಘಟನೆ ದೇಶದ್ರೋಹದ ಹಿನ್ನಲೆಯಲ್ಲಿ ಬ್ಯಾನ್ ಆಗಿದೆ. ಕರ್ನಾಟಕದ 30 ಕೊಲೆಗಳಲ್ಲಿ 11 ಕೊಲೆಗಳಲ್ಲಿ ಪಿಎಫ್ಐ ಹೆಸರಿದೆ. ಇಂಥಾ ದೇಶದ್ರೋಹದ ಸಂಘಟನೆ ಜೊತೆಗೆ ಬಜರಂಗದಳ ಹೋಲಿಸ್ತೀರಾ? ಎಂದು ಕಾಂಗ್ರೆಸ್​​ ಪಕ್ಷಕ್ಕೆ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್​ನವರೇ ನೀವು ಏನಂದುಕೊಂಡಿದ್ದೀರಾ? ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಹುಟ್ಟಿದ ಸಂಘಟನೆ ಇದು. ಇಂಥಾ ಸಂಘಟನೆ ಬ್ಯಾನ್ ಅನ್ನೋದು ಹಿಂದೂಗಳಿಗೆ ಧ್ರೋಹದ ಕೆಲವಾಗಿದೆ. ನಿಮಗೆ ತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಿ ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ನಲ್ಲಿರೋ ಹಿಂದೂಗಳು ಇದನ್ನ ಅರ್ಥಮಾಡಿಕೊಳ್ಳಿ. ಕಾಂಗ್ರೆಸ್ ಈ ಹೇಳಿಕೆ ವಾಪಾಸ್ ಪಡೆದು ಕ್ಷಮೆ ಕೇಳಬೇಕು. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net