ಹಿಂದು ಮಹಿಳೆಯ ಮೃತದೇಹಕ್ಕೆ ಹೆಗಲುಕೊಟ್ಟ ಮುಸ್ಲಿಮರು…

646
Published on

ಮೈಸೂರು: ದಿನ ಬೆಳಗಾದರೆ ಸಾಕು, ಕೋಮು ಸಂಘರ್ಷಗಳ ಬಗ್ಗೆ ಕೇಳುತ್ತೇವೆ. ಸಣ್ಣ ವಿಷಯಗಳೂ ಇಂದು ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿವೆ. ಈ ನಡುವೆ ಮೈಸೂರಿನಲ್ಲೊಂದು ಹಿಂದು - ಮುಸ್ಲಿಂ ಧರ್ಮಗಳ ನಡುವಿನ ಭಾವೈಕ್ಯಕ್ಕೆ ಸಾಕ್ಷಿಯಾಗುವಂತಹ ಘಟನೆ ನಡೆದಿದೆ.

ಕಳೆದ 30 ವರ್ಷಗಳಿಂದ ಮಂಡಿ ಮೊಹಲ್ಲಾದ ಸುನ್ನಿ ಚೌಕ ಪ್ರದೇಶದಲ್ಲಿ ವಾಸವಾಗಿದ್ದ, ಶಿವಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಈಕೆಗೆ ಮಗ ಮತ್ತು ಸೊಸೆ ಬಿಟ್ಟರೆ, ಬೇರೆ ಯಾರೂ ಸಂಬಂಧಿಗಳಿಲ್ಲ. ಹೀಗಾಗಿ ಕೊನೆಯ ಕ್ಷಣದಲ್ಲಿ ಮೃತದೇಹಕ್ಕೆ ಹೆಗಲು ಕೊಡಬೇಕಾದ ಪ್ರಸಂಗ ಎದುರಾದಾಗ, ಮುಸ್ಲಿಮರು ಹೆಗಲಾಗಿದ್ದಾರೆ.

ಈ ಘಟನೆ ಇದೀಗ ಹಿಂದು - ಮುಸ್ಲಿಮರ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಅಂತ್ಯ ಸಂಸ್ಕಾರದ ವೇಳೆ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಸೋಹೇಲ್ ಬೇಗ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಮುಸ್ಲಿಮರು ಹೆಗಲು ಕೊಟ್ಟಿದ್ದಾರೆ. ಬನ್ನಿ ಮಂಟಪದ ಜೋಡಿ ತೆಂಗಿನ ಮರ ರುದ್ರಭೂಮಿಯಲ್ಲಿ ಹಿಂದು ಸಂಪ್ರದಾಯದಂತೆ ಅಂತ್ಯಸಂಸ್ಕಾರ ಕ್ರಿಯೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net