ಮುಸ್ಲಿಮರಲ್ಲಿನ ಬಡತನ-ಅನಕ್ಷರತೆ ಹೋಗಲಾಡಿಸಲು 'ಅದನ್ನು ಪಾಲಿಸಿ' ಎಂದರು ಅಸ್ಸಾಂ ಸಿಎಂ

Untitled-1
Published on

ನವದೆಹಲಿ: ಮುಸ್ಲಿಮರಲ್ಲಿನ ಬಡತನ-ಅನಕ್ಷರತೆ ಹೋಗಲಾಡಿಸಲು ಏನು ಮಾಡಬೇಕು ಎಂಬುದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮಾ ಸಲಹೆಯೊಂದನ್ನು ಹೇಳಿದ್ದಾರೆ. ಸರ್ಕಾರದ 'ಪಾಲಿಸಿ'ಯೊಂದರ ಬಗ್ಗೆ ಪ್ರಸ್ತಾಪಿಸಿದ ಅವರು 'ಅದನ್ನು ಪಾಲಿಸಿ' ಎಂಬುದಾಗಿ ಸಲಹೆ ನೀಡಿದ್ದಾರೆ.

ಆಲ್​ ಅಸ್ಸಾಂ ಮೈನಾರಿಟಿ ಸ್ಟುಡೆಂಟ್ಸ್ ಯೂನಿಯನ್​ ಪ್ರಮುಖರು ಕಳೆದ ತಿಂಗಳಲ್ಲಿ ನನ್ನನ್ನು ಭೇಟಿಯಾಗಿ, ಅಸ್ಸಾಂ ಮುಸ್ಲಿಮರ ಜನಸಂಖ್ಯೆ ನಿಯಂತ್ರಣ ಕುರಿತು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಜುಲೈನಲ್ಲಿ ನಾನು ಮುಸ್ಲಿಂ ವಿಚಾರವಂತರನ್ನು ಭೇಟಿಯಾಗಿ ಚರ್ಚಿಸಲಿದ್ದು, ಅವರು ರಾಜ್ಯ ಸರ್ಕಾರದ ನೀತಿಯನ್ನು ಬೆಂಬಲಿಸಲಿದ್ದಾರೆ ಎಂದು ಭಾವಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.

ಅಸ್ಸಾಂ ಸರ್ಕಾರ ರೂಪಿಸಿರುವ ಎರಡು ಮಕ್ಕಳ ನೀತಿಯೊಂದೇ ಮುಸ್ಲಿಮರಲ್ಲಿನ ಬಡತನ ಹಾಗೂ ಅನಕ್ಷರತೆಯನ್ನು ಹೋಗಲಾಡಿಸಲು ಇರುವ ಮಾರ್ಗ. ಅದು ಆ ಸಮುದಾಯದವರ ಒಳಿತಾಗಿಯೇ ಇರುವಂಥದ್ದು, ಅದಕ್ಕೆ ಅವರು ವಿರೋಧಿಸುವುದಿಲ್ಲ ಎಂದು ನಂಬಿದ್ದೇನೆ ಎಂಬುದಾಗಿ ಅವರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net