ಅಂದ ನೋಡಿ, ಹೆಸರು ಕೇಳಿ ದೇಹ ಒಪ್ಪಿಸಿದ ಯುವತಿಯರು! ಮುಂದೆ ಆದದ್ದೇನು?

conversion
Published on

ಮೀರತ್‌ (ಉತ್ತರ ಪ್ರದೇಶ): ಹಿಂದೊಮ್ಮೆ ಭಾರಿ ಸದ್ದು ಮಾಡಿದ್ದ ಲವ್‌ ಜಿಹಾದ್‌ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದೂ ಹೆಸರನ್ನು ಹೇಳಿಕೊಂಡು ಮುಸ್ಲಿಂ ಯುವಕನೊಬ್ಬ ಯುವತಿಯನ್ನು ಮದುವೆಯಾಗಿ, ನಂತರ ತನ್ನ ಗುಟ್ಟು ರಟ್ಟಾಗುತ್ತಲೇ ಆಕೆಯನ್ನು ಕೊಚ್ಚಿ ಕೊಚ್ಚಿ ತುಂಡು ಮಾಡಿ ಎಸೆದಿರುವ ಭಯಾನಕ ಘಟನೆಯೊಂದು ಕಳೆದ ವಾರವಷ್ಟೇ ಬಹಿರಂಗಗೊಂಡಿತ್ತು.

ಈಗ ಅಂಥದ್ದೇ ಇನ್ನೊಂದು ಪ್ರಕರಣವ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ವಸೀಮ್‌ ಅಹ್ಮದ್‌ ಎಂಬ ವ್ಯಕ್ತಿ ಹಿಂದೂ ಯುವತಿಯನ್ನು ವಂಚಿಸಿರುವ ಘಟನೆ ಇದಾಗಿದೆ. ದಿನೇಶ್‌ ರಾವತ್‌ ಎಂದು ಪರಿಚಯಿಸಿಕೊಂಡಿರುವ ವಸೀಂ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡ. ಯುವತಿ ಕೂಡ ಈ ಯುವಕನ ಅಂದಚೆಂದ ಹಾಗೂ ಬಣ್ಣಬಣ್ಣದ ಮಾತುಗಳಿಂದ ಮರುಳಾಗಿ ಹೋದಳು.

ಈ ಮಾತುಕತೆ ನಂತರ ಸ್ನೇಹ, ಪ್ರೇಮಕ್ಕೆ ತಿರುಗಿ ದೈಹಿಕ ಸಂಪರ್ಕದವರೆಗೂ ಬಂದು ಮುಟ್ಟಿತು! ಯುವಕ ಹೇಗೋ ತನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿದ ಈ ಯುವತಿ ಆತನೊಟ್ಟಿಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದಾಳೆ. ಆದರೆ ಕುತಂತ್ರಿ ವಾಸಿಮ್‌ ಇದನ್ನು ರಹ್ಯವಾಗಿ ವಿಡಿಯೋ ಮಾಡಿಕೊಂಡಿದ್ದಾನೆ.

ನಂತರ ಯುವತಿ ತನ್ನನ್ನು ಮದುವೆಯಾಗು ಎಂದು ಯುವತಿ ಹೇಳಿದಾಗ ಅದಕ್ಕೆ ವಾಸಿಂ ಒಪ್ಪಿಕೊಂಡಿದ್ದಾನೆ. ಸುಮ್ಮನೇ ಒಪ್ಪಿಕೊಂಡಿದ್ದಲ್ಲ. ತನ್ನ ಅಸಲಿ ಬಣ್ಣವನ್ನು ಬಿಚ್ಚಿಟ್ಟ ಈತ ತಾನೊಬ್ಬ ಮುಸ್ಲಿಂ ಎಂದು ಹೇಳಿದ್ದಾನೆ. ಈಗಾಗಲೇ ದೈಹಿಕ ಸಂಪರ್ಕವೂ ಆಗಿದ್ದರಿಂದ ತನ್ನ ಧರ್ಮಕ್ಕೆ ಮತಾಂತರ ಆಗುವಂತೆ ಯುವತಿಗೆ ಹೇಳಿದ್ದಾನೆ.

ತಾನು ಮೋಸ ಹೋಗಿರುವ ವಿಷಯ ತಿಳಿಯುತ್ತಲೇ ಯುವತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆತನೊಟ್ಟಿಗಿನ ಸಂಬಂಧ ಕಳಚಿಕೊಳ್ಳುವುದಾಗಿ ಹೇಳಿದ್ದಾಳೆ. ಆದರೆ ಇಂಥ ಅದೆಷ್ಟೋ ಕೃತ್ಯವನ್ನು ಈ ಮೊದಲೇ ಮಾಡಿದ್ದ ವಾಸೀಂಗೆ ಇದು ಹೊಸತೇನೂ ಆಗಿರಲಿಲ್ಲ. ಆದ್ದರಿಂದ ಲೈಂಗಿಕ ಕ್ರಿಯೆಯ ವಿಡಿಯೋ ತೋರಿಸಿದ ಆತ, ತಾನು ಹೇಳದಂತೆ ಮತಾಂತರವಾಗದಿದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೇಳಿದ್ದಾನೆ. ಪೊಲೀಸರಿಗೆ ವಿಷಯ ತಿಳಿಸಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾಳೆ.

ಆದರೆ ಅದಕ್ಕೆ ಜಗ್ಗದ ಯುವತಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ. ವಾಸಿಮ್‌ ಈಗ ಜೈಲಿನಲ್ಲಿದ್ದಾನೆ. ಆತನ ವಿಚಾರಣೆ ವೇಳೆ ತಪ್ಪನ್ನು ಒಪ್ಪಿಕೊಂಡಿರುವುದು ಮಾತ್ರವಲ್ಲದೇ ಇದೇ ರೀತಿ ಹಿಂದೂ ಯುವತಿಯನ್ನು ವಂಚಿಸುವುದಕ್ಕಾಗಿಯೇ ನಕಲಿ ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿರುವ ವಿಷಯವನ್ನೂ ಬಾಯಿ ಬಿಟ್ಟಿದ್ದಾನೆ. ಆಧಾರ‌ ಕಾರ್ಡ್‌ನಲ್ಲಿ ದಿನೇಶ್‌ ರಾವತ್‌ ಎಂದು ನಮೂದಿಸಿಕೊಂಡಿರುವ ವಿಷಯವೂ ಪೊಲೀಸರಿಗೆ ತಿಳಿದಿದೆ!

ರಾಜಸ್ಥಾನದಲ್ಲಿಯೂ ಭಯಾನಕ ಘಟನೆ:
ಇದೇ ರೀತಿ ಮತಾಂತರದ ಘಟನೆ ರಾಜಸ್ಥಾನದಿಂದಲೂ ವರದಿಯಾಗಿದೆ. ರಾಜಸಮಂಡ್ ಜಿಲ್ಲೆಯ ದಿಯೋಘರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಯುವತಿಯೊಬ್ಬಳ ಮನೆಗೆ ನೀರು ಕೇಳುವ ನೆಪದಲ್ಲಿ ಹೋಗಿದ್ದ ಯುವಕ ರಿಯಾಜ್‌, ಅಲ್ಲಿಯ ಹುಡುಗಿಯನ್ನು ಪರಿಚಯ ಮಾಡಿಕೊಂಡು ಪ್ರೇಮದ ಬಲೆಗೆ ಬೀಳಿಸಿದ್ದಾನೆ.

ನಂತರ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನೂ ಮಾಡಿ ವಿಡಿಯೋ ಮಾಡಿಕೊಂಡಿದ್ದಾನೆ. ಅದೇ ವಿಡಿಯೋ ಯುವತಿಗೆ ತೋರಿಸುವ ಮೂಲಕ ಬ್ಲ್ಯಾಕ್‌ಮೇಲ್‌ ಮಾಡಿರುವ ಆತ, ಜೂನ್ 1 ರಂದು ತನ್ನ ಸ್ನೇಹಿತರಾದ ಸುಲೈಮಾನ್ ಮತ್ತು ಸೈಯದ್ ಅನ್ವರ್ ಜತೆ ಸೇರಿ ಆಕೆಯನ್ನು ಬಲವಂತವಾಗಿ ದರ್ಗಾಕ್ಕೆ ಕರೆದೊಯ್ದು, ನಿಖಾಗೆ ಒಪ್ಪುವಂತೆ ಒತ್ತಡ ಹೇರಿದ್ದಾರೆ. ಮತ್ತು ಆಕೆಯ ಧರ್ಮವನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡಿರುವ ಆಕೆ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ. ಈ ಬಗ್ಗೆ ತನಿಖೆ ಚಾಲ್ತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net