More

    ತುಂಡು ತುಂಡಾದ ದೇಹದ ನಿಗೂಢ ರಹಸ್ಯ ಭೇದಿಸಿದ ಪೊಲೀಸರು!

    ಲುಧಿಯಾನಾ (ಪಂಜಾಬ್‌): ಇದು 2019ರ ಆರಂಭದ ಮಾತು. 20 ವರ್ಷದ ಆಸುಪಾಸಿನ ಚೆಲುವೆ ಲುಧಿಯಾನಾದ ಏಕ್ತಾ ದೇಶ್ವಾಲ್‌ ಇದ್ದಕ್ಕಿಂದಂತೆಯೇ ನಾಪತ್ತೆಯಾಗಿದ್ದಳು. ಯುವಕನೊಬ್ಬನನ್ನು ಈಕೆ ಪ್ರೀತಿ ಮಾಡುತ್ತಿರುವ ವಿಷಯ ಮನೆಯವರಿಗೆ ತಿಳಿದಿತ್ತು. ಆದ್ದರಿಂದ ಆ ಹುಡುಗನ ಜತೆ ಓಡಿ ಹೋಗಿದ್ದಾಳೆ ಎಂದು ತಿಳಿದಿದ್ದ ಅವರು, ಮಗಳು ಕಾಣೆಯಾಗಿದ್ದ ಬಗ್ಗೆ ದೂರು ದಾಖಲು ಮಾಡಿದ್ದರು.

    ಪೊಲೀಸರು ಎಷ್ಟೇ ಹುಡುಕಾಟ ನಡೆಸಿದ್ದರೂ ಯುವತಿ ಮಾತ್ರ ಸಿಕ್ಕೇ ಇರಲಿಲ್ಲ. ಆಕೆಯ ಫೇಸ್‌ಬುಕ್‌ ಅಕೌಂಟ್‌ ಆ್ಯಕ್ಟೀವ್‌ ಇತ್ತು. ಅದರಲ್ಲಿ ಏನಾದರೂ ಅಪ್‌ಡೇಟ್‌ಗಳು ಆಗುತ್ತಿದ್ದವು. ಆದ್ದರಿಂದ ಮಗಳು ಎಲ್ಲೇ ಇದ್ದರೂ ಚೆನ್ನಾಗಿ ಇದ್ದಿರಬಹುದು ಎಂದು ಅಪ್ಪ-ಅಮ್ಮ ಅಂದುಕೊಂಡಿದ್ದರು.

    ಹೀಗೆ ಅನೇಕ ತಿಂಗಳು ಕಳೆದವು. ಜೂನ್‌-ಜುಲೈ ವೇಳೆಗೆ ಪೊಲೀಸರಿಗೆ ದೇಹದ ತುಂಡು ತುಂಡಾದ ಕೆಲ ಭಾಗ ಸಿಕ್ಕವು. ಆ ಶವ ಯಾರದ್ದು, ಉಳಿದ ಭಾಗ ಎಲ್ಲಿದೆ ಎಂದು ಎಷ್ಟೇ ಶೋಧ ಮಾಡಿದರೂ ಚಿಕ್ಕ ಸುಳಿವೂ ಸಿಕ್ಕಿರಲಿಲ್ಲ. ಯಾವುದೇ ಕಾರಣಕ್ಕೂ ಅದು ಏಕ್ತಾಳ ಶವವೇ ಎಂದು ತಿಳಿಯುವಂತೆಯೂ ಇರಲಿಲ್ಲ. ಏಕೆಂದರೆ ಆಕೆಯ ಫೇಸ್‌ಬುಕ್‌ ಚಾಲ್ತಿಯಲ್ಲಿತ್ತು! ಈ ಪ್ರಕರಣ ಭೇದಿಸಲಾಗದೇ ಪೊಲೀಸರು ಚಿಂತೆಯಲ್ಲಿದ್ದರು.

    ಇದನ್ನೂ ಓದಿ: ಹೆಣ್ಣುಮಗುವೆಂದು ಆರು ಭ್ರೂಣ ಕೊಂದ ಅಪ್ಪ! ಏಳನೇ ಗರ್ಭದಲ್ಲಿ ನಡೆಯಿತೊಂದು ಪವಾಡ

    ಆದರೆ ಒಂದು ವರ್ಷದ ನಂತರ ಇದೀಗ ಪೊಲೀಸರು ಈ ಶವದ ಹಿಂದಿನ ನಿಗೂಢ ರಹಸ್ಯ ಭೇದಿಸಿದ್ದಾರೆ. ಲವ್‌ ಜಿಹಾದ್‌ ಎನ್ನಲಾದ ಈ ಪ್ರಕರಣದ ಭಯಾನಕ ಕಥನ ಈ ರೀತಿ ಇದೆ:
    ಏಕ್ತಾ ಲುಧಿಯಾನಾದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಆ ವೇಳೆ ಆಕೆಗೆ ಸುಂದರ ಯುವಕನೊಬ್ಬನ ಪರಿಚಯವಾಯಿತು. ತನ್ನ ಹೆಸರು ಅಮನ್‌ ಎಂದು ಪರಿಚರಿಸಿಕೊಂಡಿದ್ದ ಯುವಕ ಹಾಗೂ ಏಕ್ತಾ ನಡುವೆ ಸಲುಗೆ ಹೆಚ್ಚಿ ಅದು ಪ್ರೀತಿಗೆ ತಿರುಗಿತು.

    ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಮಗಳು ಯಾವುದೋ ಯುವಕನನ್ನು ಪ್ರೀತಿ ಮಾಡುವ ವಿಷಯ ಮನೆಯವರಿಗೂ ತಿಳಿದು ಆತನನ್ನು ಮನೆಗೆ ಕರೆದರು. ತನ್ನನ್ನು ಅಮನ್‌ ಎಂದು ಪರಿಚಯಿಸಿಕೊಂಡ ಯುವಕ. ಆದರೆ ಆತನ ನಡವಳಿಕೆ, ಅವನಿಗೆ ಸರಿಯಾದ ಉದ್ಯೋಗ ಇಲ್ಲದ್ದನ್ನೆಲ್ಲಾ ತಿಳಿದ ಪಾಲಕರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ ಪಾಲಕರ ಮಾತನ್ನು ಕೇಳುವ ತಾಳ್ಮೆ ಏಕ್ತಾಗೆ ಇರಲಿಲ್ಲ. ಮನೆಯಿಂದ 25 ಲಕ್ಷ ರೂಪಾಯಿ ತೆಗೆದುಕೊಂಡು ಯುವಕನ ಜತೆ ಮನೆಯವರಿಗೆ ತಿಳಿಯದಂತೆ ಹೋದಳು. ತನ್ನ ಮನೆಗೆ ಕರೆದುಕೊಂಡು ಹೋಗದ ಯುವಕ, ಒಂದು ಅಪಾರ್ಟ್‌ಮೆಂಟ್‌ನಲ್ಲಿ ಏಕ್ತಾ ಜತೆ ಇರತೊಡಗಿದ.

    ಹೀಗೆ ಅನೇಕ ದಿನಗಳು ಕಳೆದವು. ಕಳೆದ ವರ್ಷದ ಈದ್‌ ಸಂದರ್ಭದಲ್ಲಿ ಏಕ್ತಾಳನ್ನು ಯುವಕ ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಮನೆಗೆ ಕರೆದುಕೊಂಡು ಹೋದ. ಅಲ್ಲಿದ್ದ ಜನರನ್ನು ನೋಡಿ ಆಕೆ ಬೆಚ್ಚಿಬಿದ್ದಳು. ಆಗಲೇ ಆಕೆಗೆ ಗೊತ್ತಾದದ್ದು ತಾನು ಮದುವೆಯಾದದ್ದು ಮುಸ್ಲಿಂ ಯುವಕನನ್ನು ಎಂದು. ಆತನ ಹೆಸರು ಶಾಖಿಬ್‌ ಎಂದು ತಿಳಿಯಿತು. ತಾನು ಮೋಸ ಹೋಗಿರುವ ವಿಷಯ ಗೊತ್ತಾಯಿತು. ತನ್ನನ್ನು ಆತ ತನ್ನ ಮನೆಗೆ ಕರೆದುಕೊಂಡು ಬಂದಿರುವ ಹಿಂದಿನ ಉದ್ದೇಶ ಬೇರೆ ಏನೋ ಇದೆ ಎಂಬ ಗುಮಾನಿಯೂ ಆಕೆಗೆ ಅಲ್ಲಿದ್ದ ವಾತಾವರಣದಿಂದಾಗಿ ಹುಟ್ಟತೊಡಗಿತು.

    ತನ್ನನ್ನು ಮೋಸ ಮಾಡಿದ ಕಾರಣ, ಆಕೆ ಯುವಕನ ಜತೆ ಕ್ಯಾತೆ ತೆಗೆದಳು. ಹಿಂದೂ ಹೆಸರು ಹೇಳಿಕೊಂಡು ತನ್ನ ಜತೆ ಇರುವ ವಿಷಯ ಆತನ ತಂದೆ-ತಾಯಿ ಸೇರಿದಂತೆ ದೊಡ್ಡ ಬಳಗಕ್ಕೆ ಮೊದಲೇ ಅರಿವಿತ್ತು ಎಂಬ ವಿಷಯ ತಿಳಿದು ಆಕೆಗೆ ಇನ್ನಷ್ಟು ಅಚ್ಚರಿ ಹಾಗೂ ಭಯ ಶುರುವಾಯಿತು. ಯುವಕನ ಜತೆ ಜಗಳವಾಡಿದಳು.‌ ಅಷ್ಟೇ… ಇನ್ನು ತನ್ನ ಬಂಡವಾಳ ಬಯಲಾಯಿತೆಂದು ಶಾಖಿಬ್‌, ಆಕೆಗೆ ಮತ್ತು ಬರಿಸುವ ಔಷಧ ಕುಡಿಸಿದ. ತನ್ನ ಪಾಲಕರು ಹಾಗೂ ಇತರರ ಜತೆಗೂಡಿ, ಆಕೆಯ ದೇಹವನ್ನು ತುಂಡು ತುಂಡು ಮಾಡಿ ಕತ್ತರಿಸಿ, ಒಂದೊಂದು ಭಾಗವನ್ನು ಒಂದೊಂದು ಕಡೆ ಎಸೆದು, ನಂತರ ದೇಹವನ್ನು ಸುಟ್ಟುಹಾಕಿದ. ಈ ಕೊಲೆಯ ಬಗ್ಗೆ ಕುಟುಂಬದವರು ಒಂದೇ ಒಂದು ಸುಳಿವನ್ನೂ ಬಿಟ್ಟಿರಲಿಲ್ಲ. ಸಾಲದು ಎಂಬುದಕ್ಕೆ ಏಕ್ತಾ ಕೊಲೆಯಾಗಿದ್ದಾಳೆ ಎಂದು ತಿಳಿಯಬಾರದು ಎನ್ನುವ ಕಾರಣಕ್ಕೆ ಆಕೆಯ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಏನಾದರೂ ಅಪ್‌ಡೇಟ್‌ ಮಾಡುತ್ತಲೇ ಇದ್ದ. ತನ್ನ ಫೇಸ್‌ಬುಕ್‌ ಪಾಸ್‌ವರ್ಡ್‌ ಅನ್ನು ಏಕ್ತಾ ಆತನಿಗೆ ಕೊಟ್ಟುಬಿಟ್ಟಿದ್ದಳು. ಇದರ ಪ್ರಯೋಜನ ಪಡೆದುಕೊಂಡಿದ್ದ ಶಾಖೀಬ್‌. ಇದರಿಂದಾಗಿ ಮಗಳು ಜೀವಂತ ಆಗಿದ್ದಾಳೆ ಎಂದೇ ಆಕೆಯ ಪಾಲಕರೂ ನಂಬಿದ್ದರು.

    ಇದನ್ನೂ ಓದಿ: ಪತಿ ಇಲ್ಲವೆಂದು ಪ್ರಿಯಕರನ ಮನೆಗೆ ಕರೆದಾಕೆ ಕೈ ತೋರಿಸಿ ಸಿಕ್ಕಿಬಿದ್ಲು!

    ರಹಸ್ಯ ಬಯಲಾದದ್ದು ಹೇಗೆ?‌
    ಏಕ್ತಾ ಕೊಲೆಯಾಗಿದ್ದಾಳೆ ಎನ್ನುವ ವಿಷಯ ಬಹುಶಃ ಗೊತ್ತೇ ಆಗುತ್ತಿರಲಿಲ್ಲವೇನೋ. ಏಕೆಂದರೆ ತುಂಡು ತುಂಡಾಗಿ ಸಿಕ್ಕ ಶವದ ಬಗ್ಗೆ ತಿಳಿಯದೇ ಪೊಲೀಸರೂ ಕೈಚೆಲ್ಲುವ ಹಂತದಲ್ಲಿದ್ದರು. ಆದರೆ ಅಲ್ಲೇ ಆದದ್ದು ಎಡವಟ್ಟು!

    ಅದೊಂದು ದಿನ, ಲಾಕ್‌ಡೌನ್‌ ಮುಗಿದು ಮದ್ಯದಂಗಡಿ ತೆರೆಯುತ್ತಿದ್ದಂತೆಯೇ ಸ್ನೇಹಿತರ ಜತೆ ಕಂಠಪೂರ್ತಿ ಕುಡಿದಿದ್ದ ಶಾಖಿಬ್‌, ತನ್ನ “ಸಾಹಸಗಾಥೆ”ಯನ್ನು ಹೇಳತೊಡಗಿದ. ತಾನು ಮನೆಯವರ ಜತೆಗೂಡಿ ಯುವತಿಯ ಕೊಲೆ ಮಾಡಿ ಹೇಗೆ ಬಚಾವಾದೆ, ಆಕೆಯ ಫೇಸ್‌ಬುಕ್‌ ಪಾಸ್‌ವರ್ಡ್‌ ಹೇಗೆ ಪಡೆದೆ ಎಂದೆಲ್ಲಾ ಕುಡಿದ ಅಮಲಿನಲ್ಲಿ ಹೇಳತೊಡಗಿದ.

    ಆದರೆ ಆತನ ಗ್ರಹಚಾರ ಕೆಟ್ಟಿತ್ತು. ಅದನ್ನು ಅಲ್ಲಿಯೇ ಇದ್ದ ಯಾರೋ ಒಬ್ಬರು ಕೇಳಿಸಿಕೊಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು! ರಹಸ್ಯ ಸುಲಭದಲ್ಲಿ ಪೊಲೀಸರಿಗೆ ತಿಳಿದುಬಿಟ್ಟಿತು. ಇದೊಂದು ಲವ್‌ ಜಿಹಾದ್‌ ಪ್ರಕರಣವೆಂಬುದು ಅವರಿಗೆ ತಿಳಿಯಿತು.
    ಕೂಡಲೇ ಶಾಖಿಬ್‌ ಮನೆಗೆ ಹೋಗಿ ಕೊಲೆ ಬಾಯಿ ಬಿಡಿಸಿದರು. ಎಲ್ಲರನ್ನೂ ಬಂಧಿಸಿದರು. ಕೊಲೆಗೆ ಉಪಯೋಗಿಸಿದ್ದ ಆಯುಧ ಸೇರಿದಂತೆ ಇತರ ದಾಖಲೆಗಳನ್ನು ಸಂಗ್ರಹಿಸಿದರು. ಏಕ್ತಾ ಕೈ ಮೇಲೆ ಅಮನ್‌ ಎಂಬ ಟ್ಯಾಟೂ ಹಾಕಿಸಿಕೊಂಡಿದ್ದರಿಂದ ಸಿಕ್ಕಿಬೀಳುವ ಸಾಧ್ಯತೆ ಇದೆ ಎಂದು ಟ್ಯಾಟೂ ಇದ್ದ ಜಾಗದಿಂದ ಕೈಯನ್ನು ತುಂಡರಿಸಿದ್ದ. ಕಾಲು ಮತ್ತು ತಲೆಯನ್ನು ಕೆರೆಯಲ್ಲಿ ಹಾಕಿದ್ದರೆ, ಉಳಿದ ಭಾಗವನ್ನು ಸುಟ್ಟು ಹಾಕಿದ್ದ!

    ಶಾಖಿಬ್‌ನನ್ನು ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಪೊಲೀಸರ ಪಿಸ್ತೂಲ್‌ ಕಸಿದುಕೊಂಡು ಆತ, ತಪ್ಪಿಸಿಕೊಳ್ಳಲು ಯತ್ನಿಸಿದ. ಕೂಡಲೇ ಇನ್ನೊಬ್ಬ ಪೊಲೀಸ್‌ ಆತನ ಕಾಲಿಗೆ ಗುಂಡು ಹಾಕಿ ಅವನನ್ನು ಅಲ್ಲಿಯೇ ಬೀಳಿಸಿದರು. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ (ಚಿಕಿತ್ಸೆ ಫಲಿಸದೇ ಈತ ಮೃತಪಟ್ಟಿದ್ದಾನೆ ಎನ್ನುವ ಸುದ್ದಿಯೂ ಇದ್ದು, ಈ ಬಗ್ಗೆ ಅಧಿಕೃತವಾಗಿ ತಿಳಿದುಬಂದಿಲ್ಲ).

    ‘ಪಾಕಿಸ್ತಾನ್​ ಜಿಂದಾಬಾದ್’​ ಎಂದ ಅಮೂಲ್ಯಾಗೆ ಜೈಲೇ ಗತಿ: ಜಾಮೀನು ನಿರಾಕರಿಸಿದ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts