ಹೋಳಿಗೆ ಮುನ್ನ ಬಲವಂತವಾಗಿ ಬಣ್ಣ ಹಚ್ಚಿದ ವೀಡಿಯೋ ವೈರಲ್​..ಕ್ರಮದ ಭರವಸೆ ನೀಡಿದ ಪೊಲೀಸರು!

holi
Published on

ಲಖನೌ: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಧಾಂಪುರ್ ನಗರದಲ್ಲಿ ಹೋಳಿ ಆಚರಣೆಗೆ ಮುನ್ನ ಯುವಕರ ಗುಂಪೊಂದು ಮುಸ್ಲಿಂ ಕುಟುಂಬಕ್ಕೆ ಬಣ್ಣ ಬಳಿದಿದ್ದು, ಘಟನೆ ಯಾವಾಗ ಸಂಭವಿಸಿದೆ ಎಂಬುದು ಅಸ್ಪಷ್ಟವಾಗಿದ್ದರೂ, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್​ ಆಗಿದೆ.

ವೀಡಿಯೊದಲ್ಲಿ ಯುವಕರ ಗುಂಪೊಂದು ಬೈಕ್​ನಲ್ಲಿ ತೆರಳುತ್ತಿದ್ದ ಸವಾರ ಮತ್ತು ಇಬ್ಬರು ಮಹಿಳೆಯರನ್ನು ಅಡ್ಡಗಟ್ಟಿ ಬಣ್ಣ ಬಳಿದು ನೀರು ಎರಚಿದ್ದಾರೆ. ಆಗ ಇದಕ್ಕೆ ಆ ಕುಟುಂಬವು ಅಸಹನೆ ತೋರಿದೆ. ಪ್ರತಿರೋಧ ಲೆಕ್ಕಿಸದೆ ಯುವಕರು 'ಹರ್ ಹರ್ ಮಹಾದೇವ್' ಮತ್ತು 'ಜೈ ಶ್ರೀ ರಾಮ್' ಘೋಷಣೆ ಕೂಗಿದೆ.

ಘಟನೆ ಯಾವಾಗ ಸಂಭವಿಸಿತು ಎಂಬುದು ಅಸ್ಪಷ್ಟವಾಗಿದ್ದರೂ, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಣ್ಣಬಳಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಪೊಲೀಸರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net