

ನವದೆಹಲಿ: ಕ್ರಿಸ್ಮಸ್ ಹಬ್ಬದ ಹಿಂದಿನ ದಿನ ಉದ್ಯಮಿ ಆನಂದ್ ಮಹಿಂದ್ರಾ ಅವರು ಮಾಡಿದ ಟ್ವೀಟ್ ವೈರಲ್ ಆಗಿದ್ದು, ದೇಸಿ ಜಿಂಗಲ್ ಬೆಲ್ ಸದ್ದು ಸೋಷಿಯಲ್ ಮೀಡಿಯಾದ ಗಮನಸೆಳೆದಿದೆ.
ಆನಂದ್ ಮಹಿಂದ್ರಾ ಅವರು ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಐವರ ತಂಡ ಗಿಟಾರ್ ಜತೆಗೆ ಭಾರತೀಯ ಸಂಗೀತೋಪಕರಣಗಳಾದ ಸಿತಾರ್, ಸಾರಂಗಿ, ಶೆಹನಾಯ್, ಧೋಲ್ ಗಳ ಮೂಲಕ ಜಿಂಗಲ್ ಬೆಲ್ ನುಡಿಸುತ್ತ ಆ ಉಪಕರಣಗಳನ್ನು ಪರಿಚಯಿಸಿದ್ದಾರೆ. ಆ ಮೂಲಕ ದೇಸಿ ಜಿಂಗಲ್ ಬೆಲ್ ಹಾಡು ಸದ್ದು ಮಾಡತೊಡಗಿದೆ. ಇದೇ ವಿಡಿಯೋ ಯೂಟ್ಯೂಬ್ನ ಸಾಂತಾ ಕ್ಲಾಸ್ ಆಫ್ ಇಂಡಿಯ ಎಂಬ ಪುಟದಲ್ಲೂ ಲಭ್ಯವಿದೆ.
ಟ್ವೀಟ್ನಲ್ಲಿರುವ 2.20 ನಿಮಿಷದ ವಿಡಿಯೋ ಈಗಾಗಲೇ 52 ಸಾವಿರಕ್ಕೂ ಹೆಚ್ಚು ವೀಕ್ಷಣೆಯಾಗಿದೆ. 318 ಬಾರಿ ರೀಟ್ವೀಟ್ ಆಗಿದ್ದು, ಹಲವರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..