ಕೊಲೆಯಾದ ಶಿಕ್ಷಕಿ ಮನೆಯಲ್ಲಿ ಕಳವು

Vijayavani-Featured-Image
Published on

ಕೋಲಾರ/ಮುಳಬಾಗಿಲು: ನಗರದ ಸುಂಕು ಅಶ್ವತ್ಥನಾರಾಯಣಶೆಟ್ಟಿ ಬಡಾವಣೆಯಲ್ಲಿ ಆ.14ರಂದು ಶಿಕ್ಷಕಿ ದಿವ್ಯಶ್ರೀ ಕೊಲೆಯಾದ ಮನೆಗೆ ಕಳ್ಳರು ನುಗ್ಗಿ ನಗ, ನಾಣ್ಯ ದೋಚಿರುವ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ.

ಸಂಜೆ ಮನೆಯ ಗೇಟ್ ದುರಸ್ತಿ ಮಾಡಲು ಗುತ್ತಿಗೆದಾರರು ಬಂದಾಗ ಮನೆಯ ಬಾಗಿಲು ಹೊಡೆದಿರುವುದು ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬೆರಳಚ್ಚು ಮತ್ತಿತರ ಸಾಕ್ಷಿ ಸಂಗ್ರಹಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕೋಲಾರದಿಂದ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಜಗದೀಶ್, ಡಿವೈಎಸ್ಪಿ ಡಿ.ಸಿ.ನಂದಕುಮಾರ್, ನಗರಠಾಣೆ ಇನ್‌ಸ್ಪೆಕ್ಟರ್ ಎನ್.ರಾಜಣ್ಣ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಸ್ಥಳ ಮಹಜರು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
ಶಿಕ್ಷಕಿ ದಿವ್ಯಶ್ರೀ ಕೊಲೆಯಾದ ನಂತರ ಪತಿ ಪದ್ಮನಾಭ ಮತ್ತು ಕುಟುಂಬಸ್ಥರು ನೆಂಟರ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಕಳುವಾಗಿರುವ ಬಗ್ಗೆ ಬುಧವಾರ ಸಂಜೆ ಮಾಹಿತಿ ಸಿಗುತ್ತಿದ್ದಂತೆ ಮನೆಯಲ್ಲಿ ಬೆಳ್ಳಿ, ಚಿನ್ನಾಭರಣ ಮತ್ತು ಹಣ ಕಳವು ಆಗಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net