

BTech Student : ಮಧ್ಯಪ್ರದೇಶದ ಭೋಪಾಲ್ನಲ್ಲಿ ಬಿ.ಟೆಕ್ ವಿದ್ಯಾರ್ಥಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನ್ಸ್ಟೇಬಲ್ಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳ ಮೂಲಗಳು ಶನಿವಾರ (ಅ.11) ತಿಳಿಸಿವೆ.
ಗುರುವಾರ ರಾತ್ರಿ (ಅ.09)ರಂದು ಇಂದ್ರಪುರಿಯಲ್ಲಿ ಸ್ನೇಹಿತರೊಂದಿಗೆ ಉದಿತ್ ಗಾಯ್ಕೆ ಪಾರ್ಟಿಗೆ ತೆರಳಿದ್ದನು. ಇದಾದ ನಂತರ ಮಧ್ಯರಾತ್ರಿ 1.30ರ ಸುಮಾರಿಗೆ ಗಾಯ್ಕೆ ಅವರನ್ನು ಮನೆಗೆ ಬಿಡಲು ಬಂದಾಗ ಪೊಲೀಸರನ್ನು ನೋಡಿದ ಗಾಯ್ಕೆ ಓಡಲಾರಂಭಿಸಿದ್ದಾನೆ. ಇನ್ನು ಆತನನ್ನು ಬೆನ್ನತ್ತಿದ್ದ ಪೊಲೀಸರು ಅವನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆತ ಗೆಳೆಯರು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕಾನ್ಸ್ಟೇಬಲ್ಗಳು ವಿದ್ಯಾರ್ಥಿ ಉದಿತ್ ಗಾಯ್ಕೆಯನ್ನು ಹಿಡಿದುಕೊಂಡು ಕೋಲಿನಲ್ಲಿ ಹೊಡೆಯುತ್ತಿರುವುದನ್ನು ಈ ದೃಶ್ಯ ತೋರಿಸುತ್ತದೆ. ಈ ವೇಳೆ ವಿದ್ಯಾರ್ಥಿ ತೀವ್ರ ನೋವಿನಿಂದ ಬಳಲಿ ಮೃತಪಟ್ಟಿದ್ದಾನೆ ಎಂದು ವರದಿ ಬಂದಿದೆ.
ಇನ್ನು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕಾನ್‌ಸ್ಟೆಬಲ್‌ಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಅವರನ್ನು ಅಮಾನತುಗೊಳಿಸಲಾಗಿದೆ. ಶೀಘ್ರದಲ್ಲೇ ಅವರಿಬ್ಬರನ್ನು ಬಂಧಿಸಲಾಗುವುದು ಎಂದು ಭೋಪಾಲ್ನ ಉಪ ಪೊಲೀಸ್ ಆಯುಕ್ತ ವಿವೇಕ್ ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್)