

Peaceful sleep at night: ದಿನವಿಡೀ ಕೆಲಸದ ಒತ್ತಡ, ಮೊಬೈಲ್, ಟಿವಿ ಬಳಕೆ, ಆಯಾಸ ಇವೆಲ್ಲವೂ ದೇಹವನ್ನು ಹೆಚ್ಚಾಗಿ ಆಯಾಸ ಮಾಡಿದರೂ, ಜನರು ಶಾಂತ ರೀತಿಯಿಂದ ನಿದ್ರಿಸಲಾಗದೆ ಕಷ್ಟ ಪಡುತ್ತಾರೆ. ಕೆಲವೊಮ್ಮೆ ಕಣ್ಣು ಮುಚ್ಚಿದರೂ ಮೆದುಳಿನ ಕ್ರಿಯೆಯು ಜನರಿಗೆ ಒತ್ತಡವನ್ನು ಹೇರಲು ಪ್ರಾರಂಭಿಸಿದಾಗ ಮನುಷ್ಯನು ನಿದ್ರಿಸಲಾಗುವುದಿಲ್ಲ.
ಈ ರೀತಿಯ ತೊಂದರೆಗಳು ಮನುಷ್ಯನನ್ನು ಆದಷ್ಟು ಕುಗ್ಗಿಸುತ್ತವೆ. ಇದು ಆರೋಗ್ಯದಲ್ಲಿ ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಪಡಿಸಲು ಪ್ರಾರಂಭಿಸುತ್ತದೆ. ಇದಕ್ಕೆ ಎಷ್ಟೇ ರೀತಿಯ ಔಷಧಗಳನ್ನು ಮಾಡಿದರೂ ಪ್ರಯೋಜನವಾಗದೇ ನೀವು ತೊಂದರೆ ಅನುಭವಿಸುತ್ತಿದ್ದೀರಾ? ಹಾಗಿದ್ದರೆ, ಈ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಈ 4 ಆಹಾರವನ್ನು ಸೇವಿಸಿ. ಇದು ನಿಮ್ಮ ನಿದ್ರೆ ಹಾರ್ಮೋನುಗಳಿಗೆ ಶಕ್ತಿಯನ್ನು ನೀಡಿ ನಿಮಗೆ ಉತ್ತಮ ನಿದ್ರೆಯನ್ನು ಕಲ್ಪಿಸುತ್ತವೆ.
ಬಾಳೆಹಣ್ಣಿನಲ್ಲಿ ಮೆಗ್ನೀಶಿಯಮ್ ಮತ್ತು ಪೊಟ್ಯಾಶಿಯಮ್ ಸಮೃದ್ಧವಾಗಿದ್ದು, ಇವು ಸ್ನಾಯುಗಳನ್ನು ಸಡಿಲಗೊಳಿಸಿ, ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ನೈಸರ್ಗಿಕ ಕಾರ್ಬೋಹೈಡ್ರೇಟ್ಗಳು ಸಿರೊಟೋನಿನ್ ಉತ್ಪಾದನೆ ಮಾಡಿ ಮನಸ್ಸನ್ನು ಶಾಂತಗೊಳಿಸುತ್ತದೆ. ಮಲಗುವ ಅರ್ಧ ಗಂಟೆ ಮುನ್ನ ಬಾಳೆಹಣ್ಣನ್ನು ಸೇವಿಸುವುದರಿಂದ ಇದು ಮೆದುಳನ್ನು ಶಾಂತಗೊಳಿಸಿ ನಿದ್ರೆ ಮಾಡಲು ಸಹಾಯವಾಗುತ್ತದೆ.
ಚೆರ್ರಿಹಣ್ಣುಗಳಲ್ಲಿ ಮೆಲಟೋನಿನ್ ಎಂಬ ಹಾರ್ಮೋನುಗಳಿದ್ದು, ಇವು ದೇಹದಲ್ಲಿ ನಿದ್ರೆ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಊಟದ ನಂತರ ಚೆರ್ರಿ ಹಣ್ಣು ಅಥವಾ ಅದರ ಜ್ಯೂಸ್ನ್ನು ಕುಡಿಯುವುದರಿಂದ ನಿದ್ರೆಯ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಹಾಗೆಯೇ ಈ ಹಣ್ಣುಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಬಾದಾಮಿಯು ಆರೋಗ್ಯ ಸಮಸ್ಯೆಗೆ ಹಲವಾರು ರೀತಿಯ ಉಪಯೋಗವನ್ನು ನೀಡುತ್ತದೆ. ಇದರಲ್ಲಿ ಎಥೇಚ್ಛವಾಗಿ ಮೆಗ್ನೀಸಿಯಮ್ ಸಮೃದ್ಧವಾಗಿದ್ದು, ಮೆದುಳಿನಲ್ಲಿರುವ GABA ರಾಸಾಯನಿಕವನ್ನು ಸಕ್ರಿಯಗೊಳಿಸುತ್ತದೆ. ಈ ರಾಸಾಯನಿಕವು ದೇಹದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುತ್ತದೆ. ಹಾಗೆಯೇ ನೆನಸಿದ ಬಾದಾಮಿಯನ್ನು ಮಲಗುವ ಒಂದು ಗಂಟೆ ಮುಂಚೆ ತಿನ್ನುವುದರಿಂದ ನೀವು ರಾತ್ರಿ ಆಳವಾಗಿ ನಿದ್ರಿಸಬಹುದು.
ಜೇನುತುಪ್ಪವು ನಿದ್ರೆಗೆ ಬಹಳ ನೈಸರ್ಗಿಕ ಪದಾರ್ಥವಾಗಿದೆ. ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುತ್ತದೆ. ಇದು ಮೆದುಳನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸಿ, ಮೆದುಳು ಚೆನ್ನಾಗಿ ಕಾರ್ಯನಿರ್ವಹಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ನಿದ್ರೆಯ ಕೊರತೆಯು ಆಯಾಸವನ್ನು ಉಂಟುಮಾಡುವುದಲ್ಲದೇ, ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ದೀರ್ಘಕಾಲದ ನಿದ್ರೆಯ ತೊಂದರೆಯಿಂದ ಮಾನವನ ಏಕಾಗ್ರತೆಯಲ್ಲಿ ಒತ್ತಡ ಉಂಟಾಗಿ, ಮಾಡುವ ಕೆಲಸಗಳಲ್ಲಿ ಆಸಕ್ತಿ ಇರುವುದಿಲ್ಲ. ಹಾಗಾಗಿ ಮಲಗುವ 1 ಗಂಟೆ ಮುಂಚೆ, ಟಿವಿ, ಮೊಬೈಲ್ ಇನ್ನಿತರ ಸ್ಕ್ರೀನ್ ನೋಡುವಂತಹ ಪದ್ದತಿಗಳಿಂದ ಆದಷ್ಟಯು ದೂರ ಇರಿ.. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ