ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಬೆಚ್ಚಿಬೀಳಿಸೋ ಸಂಗತಿ ಬಿಚ್ಚಿಟ್ಟ ಆರೋಪಿ ಪವಿತ್ರಾ ಗೌಡ! ಹೇಳಿದ್ದಿಷ್ಟು

Untitled design - 2024-06-14T091852.185
Published on

ಬೆಂಗಳೂರು: ಕಳೆದ ಮೂರು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿರುವ ಕನ್ನಡ ಚಿತ್ರರಂಗದ ನಟ ದರ್ಶನ್​, ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಂಧಿತರಾಗಿದ್ದು, ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳೊಂದಿಗೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಇನ್ನು ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ, ಕೊಲೆ ಪ್ರಕರಣಕ್ಕೂ ಮುನ್ನ ನಡೆದ ಘಟನೆ ಬಗ್ಗೆ ಬೆಚ್ಚಿಬೀಳಿಸೋ ಮಾಹಿತಿ ಹಂಚಿಕೊಂಡಿದ್ದಾಳೆ.

"ರೇಣುಕಾಸ್ವಾಮಿ ನನಗೆ ಆಶ್ಲೀಲ ಸಂದೇಶ ಮತ್ತು ಫೋಟೋ ಕಳುಹಿಸಿದ್ದನ್ನು ಕಂಡು ನಾನು ಪವನ್​ಗೆ (ಪವಿತ್ರಾ ಮನೆ ಕೆಲಸದವನು) ತೋರಿಸಿದೆ. ಈತ ಯಾರು? ಇವನ ಮೂಲವೇನು ಎಂಬುದನ್ನು ಹುಡುಕು. ಆದರೆ, ಈ ವಿಷಯ ಯಾವುದೇ ಕಾರಣಕ್ಕೂ ದರ್ಶನ್ ಕಿವಿಗೆ ಬೀಳುವುದು ಬೇಡ. ಬಿದ್ದರೆ ಏನಾದ್ರೂ ಅನಾಹುತ ಆಗಬಹುದು ಎಂದು ಹೇಳಿದ್ದೆ" ಎಂದು ತಿಳಿಸಿದ್ದಾಳೆ.

"ದರ್ಶನ್​ಗೆ ಈ ವಿಚಾರ ಗೊತ್ತಾಗಬಾರದು ಎಂದಿದ್ದೆ. ಆದರೆ, ಅವರು ಕೊಲೆ ಮಾಡುತ್ತಾರೆ ಎಂಬ ಸಣ್ಣ ಕಲ್ಪನೆಯೂ ಸಹ ನನಗೆ ಇರಲಿಲ್ಲ. ಹತ್ಯೆ ಮಾಡುತ್ತಾರೆ ಅಂದಿದ್ದರೆ, ನಾನೇ ಕಂಪ್ಲೆಂಟ್ ಕೊಟ್ಟು ಸರಿಮಾಡಿಕೊಳ್ಳುತ್ತಿದ್ದೆ" ಎಂದು ಆರೋಪಿ ಪವಿತ್ರಾ ಪೊಲೀಸರಿಗೆ ತಿಳಿಸಿರುವುದಾಗಿ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net