

ಬ್ಯಾಕೋಡು: ತುಮರಿ ಗ್ರಾಮ ಪಂಚಾಯಿತಿಯ ಹಲ್ಕೆ-ಮುಪ್ಪಾನೆ ಲಾಂಚ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ತಾಂತ್ರಿಕ ದೋಷದಿಂದ ಮುಪ್ಪಾನೆ ಲಾಂಚ್ ಸಂಚಾರ ಸ್ಥಗಿತಗೊಂಡಿತ್ತು. ಲಾಂಚ್ ಸೇವೆ ಏಕಾಏಕಿ ವ್ಯತ್ಯಯದಿಂದ ದ್ವೀಪದ ಜನತೆ ಹಾಗೂ ಸಿಗಂದೂರು ಭಕ್ತರಿಗೆ ಸಾಕಷ್ಟು ಅನಾನುಕೂಲ ಉಂಟಾಗಿತ್ತು. ಲಾಂಚ್ ದುರಸ್ತಿಗೆ ಸ್ಥಳೀಯರು ಆಗ್ರಹಿಸಿದ್ದರು. ಲಾಂಚ್ ಒಳಭಾಗದಲ್ಲಿ ತಾಂತ್ರಿಕ ದೋಷ ದುರಸ್ತಿ ಮಾಡಲಾಗಿದೆ ಎಂದು ಕಡವು ನಿರೀಕ್ಷಕ ಧನೇಂದ್ರಕುಮಾರ್ ತಿಳಿಸಿದ್ದಾರೆ.