

ಹಾವೇರಿ: ಇಲ್ಲಿನ ನಗರಸಭೆಗೆ ನುಗ್ಗಿದ ವ್ಯಕ್ತಿಯೊಬ್ಬ ಸರ್ಕಾರಿ ನೌಕರನ ಮೇಲೆ ಮನಬಂದಂತೆ ಥಳಿಸಿ, ಕೈಬೆರಳನ್ನೇ ಮುರಿದಿದ್ದಾನೆ.
ಹಾವೇರಿಯ ಎಸ್ಪಿ ಕಚೇರಿ ಸಮೀಪದಲ್ಲೇ ಇರುವ ನಗರಸಭೆಗೆ ನುಗ್ಗಿದ ಕಿರಣ್ ಬೊಮ್ಮನ್ನವರ ಎಂಬಾತ, ನನ್ನ ಹೆಂಡತಿಗೆ ಇನ್ನು ಏಕೆ ಸಂಬಳ ಆಗಿಲ್ಲ? ಎಂದು ದಾಂಧಲೆ ನಡೆಸಿದ್ದಾನೆ. ನೌಕರ ಮರಿಯಪ್ಪ ಮುಗುಳಿ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿರಿ Video| ಬಿಜೆಪಿ ಮುಖಂಡನ ಬರ್ತ್ ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ
ಕಿರಣ್ ಬೊಮ್ಮನ್ನವರ ಪತ್ನಿ ಗಂಗಮ್ಮ ಅಂಗಡಿ ಅವರು ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಎರಡು ತಿಂಗಳಿಂದ ಸಂಬಳ ಆಗಿಲ್ಲವಂತೆ. ಇದನ್ನು ಕೇಳಲು ಶುಕ್ರವಾರ ಕಚೇರಿಗೆ ಬಂದ ಕಿರಣ್, ನನ್ನ ಹೆಂಡತಿಗೆ ಯಾಕೆ ಸಂಬಳ ಆಗಿಲ್ಲ ಎಂದು ಕೂಗಾಡಿದ್ದಾನೆ. ಮಾತಿನಚಕಮಕಿ ವಿಕೋಪಕ್ಕೆ ತಿರುಗಿದ್ದು, ಕಚೇರಿ ವ್ಯವಸ್ಥಾಪಕ ಮರಿಯಪ್ಪ ಮುಗುಳಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಮರಿಯಪ್ಪರ ಬಲಗೈನ ಎರಡು ಬೆರಳು ಮುರಿದಿದ್ದು, ಮುಗುಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.