

ವಿಜಯಪುರ: ಆಟವಾಡುತ್ತ ಚಿಕ್ಕಪ್ಪನ ಮನೆಯತ್ತ ಹೊರಟಿದ್ದ ಪುಟ್ಟಮಕ್ಕಳಿಬ್ಬರು ಕೃಷಿಹೊಂಡಕ್ಕೆ ಬಿದ್ದು ದುರಂತ ಅಂತ್ಯಕಂಡ ಘಟನೆ ಜಿಲ್ಲೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಬಸವನಬಾಗೇವಾಡಿ ತಾಲೂಕಿನ ಚಿಕ್ಕ ಆಸಂಗಿ ಗ್ರಾಮದಲ ಆಕಾಶ ಮಹಾದೇವ ಬೆನ್ನೂರ (4) ಮತ್ತು ಬೋರಮ್ಮ ಸಂಗಣ್ಣ ಬೆನ್ನೂರ (4) ಮೃತ ದುರ್ದೈವಿಗಳು. ಇದನ್ನೂ ಓದಿರಿ Video| ಬಿಜೆಪಿ ಮುಖಂಡನ ಬರ್ತ್ ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ
ಚಿಕ್ಕಪ್ಪನ ಮನೆಯ ಪಕ್ಕದಲ್ಲೇ ಕೃಷಿ ಹೊಂಡವಿದ್ದು, ಅದರಲ್ಲಿ ಕಸದ ರಾಶಿ ತುಂಬಿಕೊಂಡಿತ್ತು. ನೀರಿನ ಮೇಲ್ಭಾಗದಲ್ಲಿ ಕಸ ತೇಲುತ್ತಿದ್ದರಿಂದ ನೀರಿನ ಆಳ ಗಮನಕ್ಕೆ ಬಂದಿಲ್ಲ. ಅಲ್ಲೇ ಆಟವಾಡುತ್ತಿದ ಮಕ್ಕಳು ಆಯತಪ್ಪಿ ಹೊಂಡಕ್ಕೆ ಬಿದ್ದು ಪ್ರಾಣಬಿಟ್ಟಿದ್ದಾರೆ.
ಮೃತ ಮಕ್ಕಳ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿದ ಕೊಲ್ಹಾರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.