

ಚೆನ್ನೈ: ತಮಿಳುನಾಡಿನ ವಿರುಧುನಗರ್ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, 11 ಕಾರ್ಮಿಕರು ಸಜೀವ ದಹನವಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿರುಧುನಗರದ ಸತೂರ್ ಪ್ರದೇಶದಲ್ಲಿನ ಅಚಂಕುಲಂ ಗ್ರಾಮದಲ್ಲಿರುವ ಶ್ರೀ ಮರಿಯಮ್ಮಲ್ ಪಟಾಕಿ ಕಾರ್ಖಾನೆಯಲ್ಲಿ ಶುಕ್ರವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಪಟಾಕಿ ಅವಘಡದಲ್ಲಿ ಹಲವರು ಗಾಯಗೊಂಡಿದ್ದು, ಸಾವು-ನೋವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನೂ ಓದಿರಿ Video| ಬಿಜೆಪಿ ಮುಖಂಡನ ಬರ್ತ್ ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ
ಪಟಾಕಿ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಆಶಿಸಿದ್ದಾರೆ.
ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ವಿರುಧುನಗರದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ, ಕಾರ್ಖಾನೆಯಲ್ಲಿ ಇನ್ನು ಅದೆಷ್ಟು ಮಂದಿ ಬೆಂಕಿಗೆ ಸಿಲುಕಿದ್ದರೋ, ಆ ಬಗ್ಗೆ ಯೋಚಿಸುತ್ತಿದ್ದರೇ ಹೃದಯ ಕದಲುತ್ತಿದೆ. ತಮಿಳುನಾಡು ಸರ್ಕಾರ ಕೂಡಲೇ ಜನರ ರಕ್ಷಣೆಗೆ ಬರಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.