

ಭಟ್ಕಳ: ಲಂಚ (Bribe) ಸ್ವೀಕರಿಸುತ್ತಿರುವ ವೇಳೆ ರೆಡ್ ಹ್ಯಾಂಡ್ ಆಗಿ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೊಹ್ಮದ ಇದ್ರಿಸ್ ಮೋಹತೇಷಾಮ್ ಎನ್ನುವವರು ನೀಡಿದ ದೂರಿನ ಆಧಾರದ ಮೇರೆಗೆ ಶುಕ್ರವಾರ (ನ.15) ಕಾರವಾರ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಒಳಚರಂಡಿಗೆ ಸಂಬಂಧಪಟ್ಟ ವಿಷಯಕ್ಕೆ ಲಂಚ ಸ್ವೀಕರಿಸುತ್ತಿದ್ದರು ಎಂದು ಮಾಹಿತಿ ತಿಳಿದುಬಂದಿದೆ.
ಸದ್ಯ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಕಚೇರಿಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ದೂರುದಾರರು ನೀಡಿದ ಹೇಳಿಕೆ ಪ್ರಕಾರ, ನೀಲಕಂಠ ಮೇಸ್ತಾ ಒಳಚರಂಡಿ ಜೋಡಣೆಗೆ 3 ಲಕ್ಷ ಲಂಚ ಕೇಳಿದ್ದರು. ಈಗಾಗಲೇ 2 ಲಕ್ಷ ರೂ. ಹಣವನ್ನು ನೀಡಿದ್ದು, ಶುಕ್ರವಾರ 50 ಸಾವಿರ ಹಣ ನೀಡಿದ್ದೇನೆ ಮತ್ತು ಇನ್ನು 50 ಸಾವಿರ ಕೊಡುವುದು ಬಾಕಿ ಇತ್ತು ಎಂದು ಘಟನೆ ವಿವರಿಸಿದ್ದಾರೆ. ದಾಳಿಯಲ್ಲಿ ಪ್ರಸಾದ ಪನ್ನೆಕರ ಹಾಗೂ 20 ಜನ ಪಿ.ಐ ಸಿಬ್ಬಂದಿಗಳು ಹಾಜರಿದ್ದರು.