'ಗೇಟ್‌ವೇ ಆಫ್ ಇಂಡಿಯಾ'ಬಳಿ ಬೋಟ್​ ಪ್ರತ್ಯಕ್ಷ: ಸಮುದ್ರ ಗಸ್ತು ಪಡೆ ಕಣ್ತಪ್ಪಿಸಿ ಬಂದಿದ್ದರ ಹಿಂದೆ ಕಾರಣ ಹೀಗಿದೆ ನೋಡಿ..

boat
Published on

ಮುಂಬೈ: ಸಮುದ್ರ ಗಸ್ತು ದಾಟಿ ಕುವೈತ್‌ನಿಂದ ಮುಂಬೈಗೆ ಬಂದ ಬೋಟ್​ ಅನ್ನು ಮಂಗಳವಾರ ಸಂಜೆ ಕಡಲ ಗಸ್ತು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಬೋಟ್​ನಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಅರಬ್ಬಿ ಸಮುದ್ರದಲ್ಲಿ ಅನುಮಾನಾಸ್ಪದ ದೋಣಿಯೊಂದು ಅವಾಂತರ ಸೃಷ್ಟಿಸಿದೆ. ಕುವೈತ್‌ನಿಂದ ಮುಂಬೈಗೆ ಬಂದಿದ್ದ ದೋಣಿಯನ್ನು ಮಂಗಳವಾರ ಸಂಜೆ ಕಡಲ ಗಸ್ತು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಆದರೆ, ಈ ದೋಣಿಯಲ್ಲಿ ಯಾವುದೇ ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಮೂವರನ್ನು ತಮಿಳುನಾಡಿನ ಕನ್ಯಾಕುಮಾರಿ ಮೂಲದ ಆಂಟೋನಿ, ನೀಡಿಸೋ ಡಿಟ್ಟೋ ಮತ್ತು ವಿಜಯ್ ಆಂಟೋನಿ ಎಂದು ಗುರುತಿಸಲಾಗಿದೆ.

ಈ ಮೀನುಗಾರರು ಕುವೈತ್‌ನ ಮೀನುಗಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಮಾಲೀಕರು ಕೆಲಸ ಮಾಡಿಕೊಡುತ್ತಿದ್ದು, ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಪಾಸ್‌ಪೋರ್ಟ್ ನೀಡದ ಕಾರಣ ತಪ್ಪಿಸಿಕೊಳ್ಳಲು ದೋಣಿ ಕದ್ದಿರುವುದಾಗಿ ಮಾಲೀಕರು ಒಪ್ಪಿಕೊಂಡಿದ್ದಾರೆ.

12 ದಿನ ಪ್ರಯಾಣ ಮಾಡಿದ್ದು, ಪಡಿತರ ಖಾಲಿಯಾಗಿ ನಾಲ್ಕು ದಿನ ಹಸಿದಿದ್ದೇವೆ ಎಂದರು. ಕುವೈತ್ ಬೋಟ್ ಗಸ್ತು ತಪ್ಪಿಸಿ ಮುಂಬೈ ತೀರಕ್ಕೆ ಬಂದಿದ್ದು ಹೇಗೆ ಎಂಬ ಬಗ್ಗೆ ಹಲವು ಅನುಮಾನಗಳಿವೆ. ಈ ಘಟನೆ ಸಮುದ್ರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 2008ರಲ್ಲಿ ಕೆಲವು ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಮುಂಬೈಗೆ ನುಗ್ಗಿ ನರಮೇಧ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net